ಗುಂಡೂರಾವ್​ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ: ಯತ್ನಾಳ್ ವಿರುದ್ಧ ದಿನೇಶ್ ಪತ್ನಿ ಟಬು ರಾವ್ ದೂರು

| Updated By: ಗಂಗಾಧರ​ ಬ. ಸಾಬೋಜಿ

Updated on: Apr 07, 2024 | 6:52 PM

ಸಚಿವ ದಿನೇಶ್ ಗುಂಡೂರಾವ್​ ಮನೆಯಲ್ಲಿ ಅರ್ಧ ಪಾಕಿಸ್ತಾನ​ ಇದೆ ಎಂಬ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್​ ವಿರುದ್ಧ ನಿನ್ನೆ ಒಂದು ದೂರು ದಾಖಲಾಗಿತ್ತು. ಇದೀಗ ಮತ್ತೊಂದು ದೂರು ದಾಖಲಾಗಿದೆ. ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಗೆ ಸಚಿವ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ದೂರು ನೀಡಿದ್ದಾರೆ.

ಗುಂಡೂರಾವ್​ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ: ಯತ್ನಾಳ್ ವಿರುದ್ಧ ದಿನೇಶ್ ಪತ್ನಿ ಟಬು ರಾವ್ ದೂರು
ಯತ್ನಾಳ್, ಟಬು ರಾವ್
Follow us on

ಬೆಂಗಳೂರು, ಏಪ್ರಿಲ್ 07: ಸಚಿವ ದಿನೇಶ್ ಗುಂಡೂರಾವ್​ ಮನೆಯಲ್ಲಿ ಅರ್ಧ ಪಾಕಿಸ್ತಾನ​ ಇದೆ ಎಂಬ ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್​ (Basangouda Patil Yatnal) ವಿರುದ್ಧ ನಿನ್ನೆ ಒಂದು ದೂರು ದಾಖಲಾಗಿತ್ತು. ಇದೀಗ ಮತ್ತೊಂದು ದೂರು ದಾಖಲಾಗಿದೆ. ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣೆಗೆ ಸಚಿವ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ದೂರು ನೀಡಿದ್ದಾರೆ. ಇದಕ್ಕೂ ಮುಂಚೆ ಟಬು ರಾವ್ ಅವರು ಶಾಸಕ ಯತ್ನಾಳ್​ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಬಿಜೆಪಿ ನಾಯಕರಿಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಮನವಿ ಮಾಡಿಕೊಂಡಿದ್ದರು. ಅದರ ಬೆನ್ನಲ್ಲೇ ದೂರು ನೀಡಿದ್ದಾರೆ.

ಯತ್ನಾಳ್ ಯಾರು ನನಗೆ ಗೊತ್ತಿಲ್ಲ: ಟಬು ರಾವ್

ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಟಬು ರಾವ್, ಬಸನಗೌಡ ಪಾಟೀಲ್ ಯತ್ನಾಳ್ ಯಾರು ನನಗೆ ಗೊತ್ತಿಲ್ಲ. ನಾನು ರಾಜಕೀಯದಲ್ಲಿಲ್ಲ, ನನಗೇಕೆ ಹೀಗೆ ಹೇಳಿದ್ದಾರೆ ಗೊತ್ತಿಲ್ಲ. ಈ ರೀತಿ ಮಾತನಾಡೋದೆ ರಾಜಕೀಯನಾ ಎಂದು ಪ್ರಶ್ನೆ ಮಾಡಿದ್ದಾರೆ.

ಟಬು ರಾವ್ ಟ್ವೀಟ್​

ಭಾರತ ಮಾತೆ ಅಂತಾರೆ, ಇದೇನಾ ಇವರು ಕೊಡುವ ಗೌರವ? ಸಂಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದೇವೆ. ನಾನು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ದಿನೇಶ್ ಬಗ್ಗೆ ಮಾತನಾಡಿದರೆ ಪರ್ವಾಗಿಲ್ಲ, ನಮ್ಮ ಬಗ್ಗೆ ಏಕೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ದಾಖಲಾಯ್ತು ದೂರು; ಕಾರಣ ಇಲ್ಲಿದೆ

ಏ.6 ರಂದು ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ‘ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಕೇಸ್​ನಲ್ಲಿ ಬಿಜೆಪಿ ಕಾರ್ಯಕರ್ತ ವಿಚಾರಣೆ ನಡೆಸಿದ್ದ ಎನ್​ಐಎ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾನಾಡುವಾಗ ದಿನೇಶ್ ಗುಂಡೂರಾವ್ ಕುಟುಂಬದ ಬಗ್ಗೆ ಮಾತಾಡಿದ್ದಾರೆ. ಈ ವೇಳೆ ಸಚಿವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂದು ಹೇಳಿದ್ದಾರೆ. ಈ ಕುರಿತು ದೂರು ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.