ಮುಖ್ಯಮಂತ್ರಿ ಯಡಿಯೂರಪ್ಪ 79ನೇ ಜನ್ಮದಿನಕ್ಕೆ ಕರೆ ಮಾಡಿ ಶುಭ ಕೋರಿದ ರಾಷ್ಟ್ರಪತಿ ಕೋವಿಂದ್, ಟ್ವಿಟರ್​ನಲ್ಲಿ ಶುಭ ಕೋರಿದ ಗಣ್ಯರು

| Updated By: Digi Tech Desk

Updated on: Feb 27, 2021 | 1:21 PM

Happy Birthday BS Yediyurappa: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ. ಎಸ್​. ಯಡಿಯೂರಪ್ಪನವರು ಇಂದು 79ನೇ ವಸಂತಕ್ಕೆ ಕಾಲಿರಿಸಿದ್ದು, ಬಿಎಸ್​ವೈ ಜನುಮ ದಿನಕ್ಕೆ ಪ್ರಧಾನಿ ಮೋದಿ ಸೇರಿದಂತೆ ರಾಜ್ಯದ ಹಲವು ಗಣ್ಯರು ಹಾಗೂ ಇತರೆ ಪಕ್ಷದ ಮುಖಂಡರು ಟ್ವಿಟರ್​ನಲ್ಲಿ ಶುಭಾಶಯ ಕೋರಿದ್ದಾರೆ

ಮುಖ್ಯಮಂತ್ರಿ ಯಡಿಯೂರಪ್ಪ 79ನೇ ಜನ್ಮದಿನಕ್ಕೆ ಕರೆ ಮಾಡಿ ಶುಭ ಕೋರಿದ ರಾಷ್ಟ್ರಪತಿ ಕೋವಿಂದ್, ಟ್ವಿಟರ್​ನಲ್ಲಿ ಶುಭ ಕೋರಿದ ಗಣ್ಯರು
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
Follow us on

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿ. ಎಸ್​. ಯಡಿಯೂರಪ್ಪನವರು ಇಂದು 79ನೇ ವಸಂತಕ್ಕೆ ಕಾಲಿರಿಸಿದ್ದು, ಬಿಎಸ್​ವೈ ಜನುಮ ದಿನಕ್ಕೆ ಪ್ರಧಾನಿ ಮೋದಿ ಸೇರಿದಂತೆ ರಾಜ್ಯದ ಹಲವು ಗಣ್ಯರು ಹಾಗೂ ಇತರೆ ಪಕ್ಷದ ಮುಖಂಡರು ಟ್ವಿಟರ್​ನಲ್ಲಿ ಶುಭಾಶಯ ಕೋರಿದ್ದಾರೆ. ಜೊತೆಗೆ ದೇಶದ ಪ್ರಧಾನಿ ಮೋದಿ ಟ್ವೀಟ್​ ಮಾಡಿ ಶುಭ ಕೋರಿದಲ್ಲದೆ, ಸ್ವತಃ ಬಿಎಸ್​ವೈಗೆ ಕರೆ ಮಾಡಿ ವಿಷ್​ ಮಾಡಿದ್ದಾರೆ. ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಕೂಡ ಬಿಎಸ್​ವೈಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿ (chief secretary) ರವಿಕುಮಾರ್ ಸಹ ಬಿಎಸ್​ವೈ ಅವರಿಗೆ ಶುಭ ಕೋರಿದರು.

ಬಿ. ಎಸ್​. ಯಡಿಯೂರಪ್ಪನವರಿಗೆ ಟ್ವಿಟರ್​ನಲ್ಲಿ ಜನ್ಮದಿನದ ಶುಭಾಶಯ ತಿಳಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್​. ಡಿ. ಕುಮಾರಸ್ವಾಮಿ, ರಾಜ್ಯದ ಮುಖ್ಯಮಂತ್ರಿ, ರಾಜಕೀಯ ಮುತ್ಸದ್ಧಿ ಶ್ರೀ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ರಾಜ್ಯದ ಜನರ, ರೈತ ಬಂಧುಗಳ, ದುರ್ಬಲರ ಆಶೋತ್ತರಗಳಿಗಾಗಿ ದುಡಿಯಲು ಭಗವಂತ ತಮಗೆ ಎಲ್ಲ ರೀತಿಯ ಶಕ್ತಿ ನೀಡಲಿ, ಆಯುರಾರೋಗ್ಯ ಕರುಣಿಸಲಿ ಎಂದು ನಾನು ಈ ಸಂದರ್ಭದಲ್ಲಿ ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಮಾಜಿ ಪ್ರಧಾನಿಗಳಾದ ಹೆಚ್. ಡಿ. ದೇವೆಗೌಡ ಸಹ ಬಿಎಸ್‌ವೈಗೆ ಅಭಿನಂದನೆ ತಿಳಿಸಿದ್ದು, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ. ಬಿ.ಎಸ್. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಆಯುರಾರೋಗ್ಯ ಕರುಣಿಸಿ ಜನಸೇವೆ ಮಾಡಲು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ ಎಂದು ಹಾರೈಸಿದ್ದಾರೆ.

ಬಿ.ಎಸ್. ಯಡಿಯೂರಪ್ಪ ಹುಟ್ಟುಹಬ್ಬದ ಪ್ರಯುಕ್ತ ಟ್ವಿಟರ್​ನಲ್ಲಿ ಗಣ್ಯ ನಾಯಕರು ಶುಭಕೋರಿದ್ದಾರೆ.

ಇದನ್ನೂ ಓದಿ: karnataka budget 2021 | ಉಳಿದೆರಡು ವರ್ಷ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

Published On - 11:29 am, Sat, 27 February 21