ಕರ್ನಾಟಕ ಕವಿಗಳ ತವರೂರು, ದಾಸರ ನಾಡು, ಶ್ರೀಗಂಧದ ಬೀಡು. ಕರುನಾಡು ಸಂಸ್ಕೃತಿ-ಸಂಸ್ಕಾರಕ್ಕೆ ಹೆಸರುವಾಸಿಯಾಗಿದೆ. ನಮ್ಮ ನೆಲದ ವಚನ ಸಾಹಿತ್ಯ ವಿಶ್ವಕ್ಕೆ ಶಾಸನ ಇದ್ದಹಾಗೆ. ಇಲ್ಲಿನ ರಾಜಮನೆತನದ ಮಹರಾಜರು ರಾಷ್ಟ್ರಕ್ಕೆ ಕಳಸಪ್ರಾಯವಾದವರು. ವಿಜಯನಗರ, ಕಿತ್ತೂರು, ಹೊಯ್ಸಳ, ಬದಾಮಿ ಚಾಲೂಕ್ಯರು ನಾಡಿಗೆ ಕೊಟ್ಟಂತಹ ಕೊಡುಗೆ ಅಪಾರ. ಕರ್ನಾಟಕದ ವಾಸ್ತುಶಿಲ್ಪ ನೋಡುಗರಿಗೆ ನಿಬ್ಬೆರಗಾಗಿಸುತ್ತದೆ. ಕನ್ನಡ ನೆಲದ ಅದೆಷ್ಟೋ ಜನರು ತಮ್ಮ ಸಾಧನೆ ಮೂಲಕ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇಂತಹ ಶ್ರೀಮಂತ, ಸಮೃದ್ಧ ನಾಡು ಕರ್ನಾಟಕ. ಇನ್ನೂ ಒಂದು ದಿನ ಕಳೆದರೇ ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಬರುತ್ತದೆ.
ಈ ಬಾರಿಯ ಕನ್ನಡ ರಾಜ್ಯೋತ್ಸವ ಬಹಳ ವಿಶೇಷತೆಯಿಂದ ಕೂಡಿದೆ. ಏಕೆಂದರೆ ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿ 50 ವರ್ಷವಾಯಿತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ-50 ಎಂದು ವರ್ಷ ಪೂರ್ತಿ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದೆ. ಈ ಸುದಿನ ನೀವು ನಿಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಮತ್ತು ಸಮಸ್ತ ಕನ್ನಡ ನಾಡಿನ ಜನತೆಗೆ ಶುಭಾಶಯ ಹೇಗೆ ತಿಳಿಸಬೇಕು, ಫೇಸ್ಬುಕ್, ವಾಟ್ಸ್ಅಪ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಯಾವ ಸಾಲುಗಳನ್ನು ಬರೆದು ಫೋಸ್ಟ್ ಹಾಕಬೇಕು ಎಂಬ ಗೊಂದಲಕ್ಕೆ ಇಲ್ಲಿದೆ ಪರಿಹಾರ…
ಇದನ್ನೂ ಓದಿ: ಮೊಬೈಲ್ ಮತ್ತು ಕಂಪ್ಯೂಟರ್ನಲ್ಲಿ ಸುಲಭವಾಗಿ ಕನ್ನಡ ಟೈಪ್ ಮಾಡುವುದು ಹೇಗೆ?
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 am, Tue, 31 October 23