ಮೊಬೈಲ್ ಮತ್ತು ಕಂಪ್ಯೂಟರ್ನಲ್ಲಿ ಸುಲಭವಾಗಿ ಕನ್ನಡ ಟೈಪ್ ಮಾಡುವುದು ಹೇಗೆ?
Kannada Type App: ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಾದರೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಕನ್ನಡ ಅಕ್ಷರ ಬರೆಯಲು ಸಾಕಷ್ಟು ಆ್ಯಪ್ಗಳಿವೆ. ಆದರೆ, ಇವುಗಳಲ್ಲಿ ಎಲ್ಲವೂ ಬೇಗನೆ ಅರ್ಥವಾಗುವ ರೀತಿಯಲ್ಲಿಲ್ಲ. ಅಕ್ಷರಗಳನ್ನು ಹುಡುಕಿ ಟೈಪ್ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.
ಕಳೆದ ಕೆಲವು ವರ್ಷಗಳ ಹಿಂದೆ ಮೊಬೈಲ್ (Mobile) ಅಥವಾ ಕಂಪ್ಯೂಟರ್ನಲ್ಲಿ ಕನ್ನಡ ಅಕ್ಷರವನ್ನು ಬರೆಯುವುದು ಕಬ್ಬಿಣದ ಕಡಲೆಯಂತಾಗಿತ್ತು. ಆದರೆ, ಇಂದು ಭಾರತದಲ್ಲಿರುವ ಹೆಚ್ಚಿನ ಭಾಷೆಯನ್ನು ಕಂಪ್ಯೂಟರ್ ಅಥವಾ ಮೊಬೈಲ್ನಲ್ಲಿ ಅಕ್ಷರ ರೂಪಕ್ಕೆ ತರಲಾಗಿದೆ. ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಾದರೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ಕನ್ನಡ ಅಕ್ಷರ ಬರೆಯಲು ಸಾಕಷ್ಟು ಆ್ಯಪ್ಗಳಿವೆ. ಆದರೆ, ಇವುಗಳಲ್ಲಿ ಎಲ್ಲವೂ ಬೇಗನೆ ಅರ್ಥವಾಗುವ ರೀತಿಯಲ್ಲಿಲ್ಲ. ಅಕ್ಷರಗಳನ್ನು ಹುಡುಕಿ ಟೈಪ್ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆದರೆ, ನಾವೀಗ ಹೇಳಲಿರುವ ಆ್ಯಪ್ನಲ್ಲಿ ಸುಲಭವಾಗಿ ಬೇಗನೆ ಕನ್ನಡ ಅಕ್ಷರವನ್ನ ಬರೆಯಬಹುದು.
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ನ ಗೂಗಲ್ ಪ್ಲೇ ಸ್ಟೋರ್ನಲ್ಲಿ ಜೀ ಬೋರ್ಡ್ ಎಂಬ ಆ್ಯಪ್ ಇರುತ್ತದೆ. ಅದನ್ನ ಡೌನ್ಲೋಡ್ ಮಾಡಿ. ಡೌನ್ಲೋಡ್ ಪೂರ್ಣಗೊಂಡ ನಂತರ ಸೆಟ್ಟಿಂಗ್ ಅನ್ನು ಪೂರ್ಣಗೊಳಿಸಿ. ನಂತರ ಜೀ ಬೋರ್ಡ್ ಕೀಬೋರ್ಡ್ ಅನ್ನು ಆರಿಸಿಕೊಳ್ಳಿ. ಇದರಲ್ಲಿ ಕನ್ನಡ ಭಾಷೆಯನ್ನು ಕೀಬೋರ್ಡ್ಗೆ ಸೇರಿಸಬೇಕು.
ಈಗ ನಿಮ್ಮ ಮೊಬೈಲ್ ಕನ್ನಡ ಟೈಪಿಂಗ್ಗೆ ತಯಾರಾಗುತ್ತದೆ. ಹಾಗೆಯೆ ವಾಟ್ಸ್ಆ್ಯಪ್ನಲ್ಲಿ ನೀವು ಕನ್ನಡ ಬರೆಯಲು ಬಯಸಿದರೆ ಆ್ಯಪ್ಗೆ ತೆರಳಿ ಸಂದೇಶ ಬರೆಯುವಲ್ಲಿ ಹೋಗಿ, ಕೀಬೋರ್ಡಿನ ಮೇಲೆ ಇರುವಂತಹ ಮೈಕ್ ಚಿನ್ಹೆಯನ್ನು ಒತ್ತಬೇಕು. ಈಗ ನೀವು ಮಾತನಾಡಿರುವುದು ಕೂಡ ಕನ್ನಡ ಅಕ್ಷರಗಳ ರೂಪದಲ್ಲಿ ಮೂಡಿಬರುತ್ತವೆ.
2024ರ ವೇಳೆಗೆ ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್ ಗ್ಲಾಸ್ ತಯಾರಿಸಲಿದೆ ಕಾರ್ನಿಂಗ್-ಆಪ್ಟಿಮಸ್
ಆದರೆ ಈ ಕೀಬೋರ್ಡ್ ಉಪಯೋಗಿಸುವಾಗ ಇಂಟರ್ನೆಟ್ ಆನ್ ಇರುವುದು ಅತಿ ಅವಶ್ಯಕ. ಹಾಗೆಯೆ ಜೀ ಬೋರ್ಡ್ ಆ್ಯಪ್ ಅನ್ನು ಮೊಬೈಲ್ನಲ್ಲಿ ಇರುವ ಮೈಕ್ರೋಸಾಫ್ಟ್ ವರ್ಡ್ನಲ್ಲಿ ಕೂಡ ಬಳಸಬಹುದಾಗಿದೆ. ಕಂಪ್ಯೂಟರ್ನಲ್ಲಿ ಕನ್ನಡ ಬರೆಯಬೇಕು ಎಂದಾದರೆ ಇಂದು ಹೆಚ್ಚಿನವರು ನುಡಿ ಅನ್ನು ಬಳಸುತ್ತಾರೆ. ಇದು ಸುಲಭವಾಗಿದೆ. ಇದರ ಜೊತೆಗೆ ಲಿಕಿತ್, ಕನ್ನಡ ಇಂಡಿಂಕ್ ಇನ್ಪುಟ್, ಗೂಗಲ್ ಇಂಡಿಕ್, ಬರಹ ಹೀಗೆ ಕೆಲವೊಂದು ಸಾಫ್ಟ್ವೇರ್ ಇದೆ.
ಅಂತೆಯೆ ಮೊಬೈಲ್ನಲ್ಲಿ ಈಗೀಗ ಹೆಚ್ಚಿನ ಜನರು ಜಸ್ಟ್ ಕನ್ನಡ ಆ್ಯಪ್ ಅನ್ನು ಕೂಡ ಬಳಸುತ್ತಿದ್ದಾರೆ. ಆದರೆ, ಆ್ಯಪಲ್ ಐಒಎಸ್ನಲ್ಲಿ ಕನ್ನಡ ಭಾಷೆ ಬರೆಯುವುದು ಕೊಂಚ ಕಷ್ಟ. ಆಂಡ್ರಾಯ್ಡ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಎಲ್ಲ ಆ್ಯಪ್ಗಳು ಆ್ಯಪ್ ಸ್ಟೋರ್ನಲ್ಲಿ ಇಲ್ಲ. ಜೀ ಬೋರ್ಡ್ ಆ್ಯಪ್ ಐಒಎಸ್ನಲ್ಲಿ ಇದ್ದರೂ ಅದರಲ್ಲಿ ಕನ್ನಡ ಭಾಷೆ ಆಯ್ಕೆ ನೀಡಲಾಗಿಲ್ಲ. ಬದಲಾಗಿ ಐಒಎಸ್ನಲ್ಲಿ ಇನ್ಬಿಲ್ಟ್ ಆಗಿ ಬಂದಿರುವ ಕೀಬೋರ್ಡ್ನಲ್ಲಿ ಇರುವ ಕನ್ನಡ ಭಾಷೆ ಇತರೆ ಆ್ಯಪ್ಗಳಿಗೆ ಹೋಲಿಸಿದರೆ ಸುಲಭವಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ