AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ಶವೋಮಿ 14, ಶವೋಮಿ 14 ಪ್ರೊ: ಬೆಲೆ ಎಷ್ಟು?

Xiaomi 14 and Xiaomi 14 Pro Launched: ಶವೋಮಿ 14 ಮತ್ತು ಶವೋಮಿ 14 ಪ್ರೊ ಅನಾವರಣಗೊಳಿಸಲಾಗಿದೆ. ಇದು ಈ ವಾರವಷ್ಟೇ ಘೋಷಿಸಲಾದ ಹೊಚ್ಚಹೊಸ 4nm ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಮತ್ತು ಶವೋಮಿಯ HyperOS ನಲ್ಲಿ ರನ್ ಆಗುತ್ತವೆ. ಹಾಗಾದರೆ ಈ ಫೋನುಗಳ ಇತರೆ ಫೀಚರ್ಸ್ ಏನಿದೆ, ಬೆಲೆ ಎಷ್ಟು ಎಂಬುದನ್ನು ನೋಡೋಣ.

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬಂತು ಶವೋಮಿ 14, ಶವೋಮಿ 14 ಪ್ರೊ: ಬೆಲೆ ಎಷ್ಟು?
Xiaomi 14, Xiaomi 14 Pro
Vinay Bhat
|

Updated on: Oct 27, 2023 | 12:37 PM

Share

ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ತನ್ನ ಬಹುನಿರೀಕ್ಷಿತ ಶವೋಮಿ 14 ಸರಣಿಯ (Xiaomi 14 Series) ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದೆ. ಚೀನಾದಲ್ಲಿ ನಡೆದ ಕಂಪನಿಯ ಬಿಡುಗಡೆ ಸಮಾರಂಭದಲ್ಲಿ ಶವೋಮಿ 14 ಮತ್ತು ಶವೋಮಿ 14 ಪ್ರೊ ಅನಾವರಣಗೊಳಿಸಲಾಗಿದೆ. ಈ ಹೊಸ ಸ್ಮಾರ್ಟ್‌ಫೋನ್‌ಗಳು ಕ್ವಾಲ್ಕಮ್​ನ ನ ಇತ್ತೀಚಿನ ಸ್ನಾಪ್​ಡ್ರಾಗನ್ 8 Gen 3 SoC ನೊಂದಿಗೆ ಬರುತ್ತವೆ. ಮತ್ತು ಶವೋಮಿಯ HyperOS ನಲ್ಲಿ ರನ್ ಆಗುತ್ತವೆ. ಹಾಗಾದರೆ ಈ ಫೋನುಗಳ ಇತರೆ ಫೀಚರ್ಸ್ ಏನಿದೆ, ಬೆಲೆ ಎಷ್ಟು ಎಂಬುದನ್ನು ನೋಡೋಣ.

ಶವೋಮಿ 14 ಪ್ರೊ, ಶವೋಮಿ 14 ಬೆಲೆ:

ಶವೋಮಿ 14 ಪ್ರೊ ಬೆಲೆ 12GB + 256GB RAM ಮತ್ತು ಸ್ಟೋರೇಜ್ ಮಾದರಿಗೆ CNY 4,999 (ಸುಮಾರು ರೂ. 56,500) ನಿಂದ ಪ್ರಾರಂಭವಾಗುತ್ತದೆ. 16GB + 512GB ರೂಪಾಂತರಕ್ಕೆ CNY 5,499 (ಸುಮಾರು ರೂ. 62,000), 16GB + 1TB ಕಾನ್ಫಿಗರೇಶನ್‌ಗೆ CNY 5,999 (ಸರಿಸುಮಾರು ರೂ. 68,200).

ಯುವ ಮನಸ್ಸುಗಳು ಹಾಳಾಗುತ್ತಿವೆ… ಫೇಸ್​ಬುಕ್, ಇನ್ಸ್​ಟಾಗ್ರಾಮ್ ವಿರುದ್ಧ ಅಮೆರಿಕದ 42 ರಾಜ್ಯಗಳಿಂದ ಕಾನೂನು ಕ್ರಮ

ಇದನ್ನೂ ಓದಿ
Image
1,39,999 ರೂಪಾಯಿಯ ಈ ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಏನಿದೆ ಇದರಲ್ಲಿ ನೋಡಿ
Image
2024ರ ವೇಳೆಗೆ ಭಾರತದಲ್ಲಿ ಸ್ಮಾರ್ಟ್‌ಫೋನ್ ಗ್ಲಾಸ್ ತಯಾರಿಸಲಿದೆ ಕಾರ್ನಿಂಗ್
Image
ರಿಯಲ್ ಮಿ GT 5 ಪ್ರೊ ಬಗ್ಗೆ ಹೊರಬಿತ್ತು ಅಚ್ಚರಿ ಸುದ್ದಿ:ಬಲಿಷ್ಠ ಪ್ರೊಸೆಸರ್
Image
ರಿಯಲ್ ಮಿ ನಾರ್ಜೊ N53 ಹೊಸ ರೂಪಾಂತರ ಬಿಡುಗಡೆ: ಬೆಲೆ ಕೇವಲ 11,999 ರೂ.

ಮತ್ತೊಂದೆಡೆ, ಶವೋಮಿ 14 ಫೋನಿನ 8GB + 256GB RAM ರೂಪಾಂತರಕ್ಕೆ CNY 3,999 (ಸುಮಾರು ರೂ. 50,000), 12GB + 256GB ರೂಪಾಂತರಕ್ಕೆ CNY 4,299 (ಸುಮಾರು ರೂ. 48,000). 16GB + 512GB ಮಾದರಿಗೆ CNY 4,599 (ಸುಮಾರು ರೂ. 52,000) ಮತ್ತು 16GB + 1TB ಕಾನ್ಫಿಗರೇಶನ್‌ಗೆ CNY 4,999 (ಸುಮಾರು ರೂ. 56,000) ನಿಗದಿ ಮಾಡಲಾಗಿದೆ. ಸದ್ಯಕ್ಕೆ ಚೀನಾದಲ್ಲಿ ರಿಲೀಸ್ ಆಗಿರುವ ಈ ಸ್ಮಾರ್ಟ್​ಫೋನ್ ಮುಂದಿನ ದಿನಗಳಲ್ಲಿ ಭಾರತಕ್ಕೂ ಬರಲಿದೆ.

ಶವೋಮಿ 14 ಪ್ರೊ ಫೀಚರ್ಸ್:

ಡ್ಯುಯಲ್ ಸಿಮ್ (ನ್ಯಾನೋ) ಶವೋಮಿ 14 ಪ್ರೊ ಕಂಪನಿಯ ಹೊಸ HyperOS ಇಂಟರ್ಫೇಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 6.73-ಇಂಚಿನ 2.5D LTPO ಡಿಸ್ಪ್ಲೇ, 2K ರೆಸಲ್ಯೂಶನ್ (1,440×3,200 ಪಿಕ್ಸೆಲ್‌ಗಳು) ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು ಈ ವಾರವಷ್ಟೇ ಘೋಷಿಸಲಾದ ಹೊಚ್ಚಹೊಸ 4nm ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 16GB ವರೆಗಿನ LPDDR5X RAM ಮತ್ತು 1TB ವರೆಗಿನ UFS 4.0 ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಶವೋಮಿ 14 ಪ್ರೊ ಸಮ್ಮಿಲಕ್ಸ್ ಲೆನ್ಸ್‌ನೊಂದಿಗೆ ಲೈಕಾ-ಬ್ರಾಂಡ್​ನ ಟ್ರಿಪಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್​ನ ಹಂಟರ್ 900 ಸೆನ್ಸಾರ್ ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ f//1.6 ಅಪರ್ಚರ್, 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಶೂಟರ್ ಅನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಶವೋಮಿ 14 ಪ್ರೊ 120W ಚಾರ್ಜಿಂಗ್ ಬೆಂಬಲ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,880mAh ಬ್ಯಾಟರಿಯನ್ನು ಹೊಂದಿದೆ. ಹ್ಯಾಂಡ್‌ಸೆಟ್ 10W ವೈರ್‌ಲೆಸ್ ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳು 5G, Wi-Fi 7, USB 3.2 ಪೋರ್ಟ್, ಬ್ಲೂಟೂತ್, GPS, ಗೆಲಿಲಿಯೋ USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿವೆ. ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕದೊಂದಿಗೆ ಬರುತ್ತದೆ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಗೇಮಿಂಗ್‌ಗಾಗಿ ಎಕ್ಸ್-ಆಕ್ಸಿಸ್ ಲೀನಿಯರ್ ವೈಬ್ರೇಶನ್ ಮೋಟರ್ ಅನ್ನು ಒಳಗೊಂಡಿದೆ. ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಸ್ಟೀರಿಯೋ ಸ್ಪೀಕರ್‌ಗಳನ್ನು ಸಹ ಒಳಗೊಂಡಿದೆ.

ಶವೋಮಿ 14 ಫೋನ್ ವೆನಿಲ್ಲಾ ಮಾದರಿಯು 6.36-ಇಂಚಿನ LTPO AMOLED (1,200×2,600 ಪಿಕ್ಸೆಲ್‌ಗಳು) ಡಿಸ್ ಪ್ಲೇ, 1.5K ರೆಸಲ್ಯೂಶನ್, 460ppi ಪಿಕ್ಸೆಲ್ ಸಾಂದ್ರತೆ ಮತ್ತು 1Hz ನಿಂದ 120Hz ವರೆಗಿನ ರಿಫ್ರೆಶ್ ದರವನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್ 8 Gen 3 SoC ನಿಂದ ಚಾಲಿತವಾಗಿದೆ.

50-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್, 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. 4,610mAh ಬ್ಯಾಟರಿಯೊಂದಿಗೆ 90W ವೈರ್ಡ್ ಚಾರ್ಜಿಂಗ್ ಬೆಂಬಲ, 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಮತ್ತು 10W ವೈರ್‌ಲೆಸ್ ರಿವರ್ಸ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
Daily Horoscope: ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ