1,39,999 ರೂಪಾಯಿಯ ಈ ಫೋನ್ ಇಂದಿನಿಂದ ಖರೀದಿಗೆ ಲಭ್ಯ: ಏನಿದೆ ಇದರಲ್ಲಿ ನೋಡಿ

OnePlus Open First Sale in India Today: ಭಾರತದಲ್ಲಿ ಒನ್​ಪ್ಲಸ್​ ಓಪನ್ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಲಭ್ಯವಿದೆ. ಇದರ 16GB RAM + 512GB ಸ್ಟೋರೇಜ್ ಕಾನ್ಫಿಗರೇಶನ್‌ಗಾಗಿ 1,39,999 ರೂ. ನಿಗದಿ ಮಾಡಲಾಗಿದೆ. ಇದು ಎಮರಾಲ್ಡ್ ಡಸ್ಕ್ ಮತ್ತು ವಾಯೇಜರ್ ಕಪ್ಪು ಬಣ್ಣದ ಆಯ್ಕೆಗಳಲ್ಲಿ, ಅಧಿಕೃತ ಒನ್​ಪ್ಲಸ್​ ವೆಬ್‌ಸೈಟ್, ಅಮೆಜಾನ್ ಮೂಲಕ ಮತ್ತು ದೇಶದಾದ್ಯಂತದ ಚಿಲ್ಲರೆ ಅಂಗಡಿಗಳ ಮೂಲಕ ಇಂದು ಮಾರಾಟ ಕಾಣಲಿದೆ.

Vinay Bhat
|

Updated on: Oct 27, 2023 | 6:55 AM

ಪ್ರಸಿದ್ಧ ಒನ್​ಪ್ಲಸ್​ ಕಂಪನಿಯ ಮೊಟ್ಟ ಮೊದಲ ಫೋಲ್ಡಬಲ್ ಫೋನ್ ಒನ್​ಪ್ಲಸ್​ ಓಪನ್ (OnePlus Open) ಇಂದಿನಿಂದ ಭಾರತದಲ್ಲಿ ಖರೀದಿಗೆ ಸಿಗಲಿದೆ. ಈ ಹ್ಯಾಂಡ್‌ಸೆಟ್ ಕ್ವಾಲ್‌ಕಾಮ್‌ನ ಪ್ರಮುಖ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ನಿಂದ ಚಾಲಿತವಾಗಿದೆ. ಮೂರು Hasselblad-ಬ್ರಾಂಡ್​ನ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ.

1 / 7
ಭಾರತದಲ್ಲಿ ಒನ್​ಪ್ಲಸ್​ ಓಪನ್ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಲಭ್ಯವಿದೆ. ಇದರ 16GB RAM + 512GB ಸ್ಟೋರೇಜ್ ಕಾನ್ಫಿಗರೇಶನ್‌ಗಾಗಿ 1,39,999 ರೂ. ನಿಗದಿ ಮಾಡಲಾಗಿದೆ. ಇದು ಎಮರಾಲ್ಡ್ ಡಸ್ಕ್ ಮತ್ತು ವಾಯೇಜರ್ ಕಪ್ಪು ಬಣ್ಣದ ಆಯ್ಕೆಗಳಲ್ಲಿ, ಅಧಿಕೃತ ಒನ್​ಪ್ಲಸ್​ ವೆಬ್‌ಸೈಟ್, ಅಮೆಜಾನ್ ಮೂಲಕ ಮತ್ತು ದೇಶದಾದ್ಯಂತದ ಚಿಲ್ಲರೆ ಅಂಗಡಿಗಳ ಮೂಲಕ ಇಂದು ಮಾರಾಟ ಕಾಣಲಿದೆ.

2 / 7
ಡ್ಯುಯಲ್-ಸಿಮ್ (ನ್ಯಾನೋ) ಒನ್​ಪ್ಲಸ್​ ಓಪನ್ ಮಡಿಸಬಹುದಾದ ಫೋನ್ ಆಗಿದ್ದು, ಇದು ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್ ಆಧಾರಿತ OxygenOS 13.2 ನಲ್ಲಿ ಕಾರ್ಯನಿರ್ವಹಿಸುತ್ತದೆ. 7.82-ಇಂಚಿನ (2,268×2,440 ಪಿಕ್ಸೆಲ್‌ಗಳು) 2K ಫ್ಲೆಕ್ಸಿ-ಫ್ಲೂಯಿಡ್ LTPO 3.0 AMOLED ಡಿಸ್‌ಪ್ಲೇ ಜೊತೆಗೆ 1-120Hz ಡೈನಾಮಿಕ್ ರಿಫ್ರೆಶ್ ರೇಟ್, 240Hz ಟಚ್ ರೆಸ್ಪಾನ್ಸ್ ರೇಟ್ ಮತ್ತು 2,800 nits ವರೆಗಿನ ಗರಿಷ್ಠ ಬ್ರೈಟ್​ನೆಸ್ ಅನ್ನು ಹೊಂದಿದೆ.

3 / 7
ಒನ್​ಪ್ಲಸ್​ ಓಪನ್‌ನ ಹೊರಗಿನ ಡಿಸ್ ಪ್ಲೇ 6.31-ಇಂಚಿನ (1,116×2,484 ಪಿಕ್ಸೆಲ್‌ಗಳು) 2K LTPO 3.0 ಸೂಪರ್ ಫ್ಲೂಯಿಡ್ AMOLED ಡಿಸ್‌ಪ್ಲೇ ಜೊತೆಗೆ 10-120Hz ಡೈನಾಮಿಕ್ ರಿಫ್ರೆಶ್ ರೇಟ್, 240Hz ಟಚ್ ರೆಸ್ಪಾನ್ಸ್ ರೇಟ್ ಮತ್ತು ಗರಿಷ್ಠ 2,800 ಗರಿಷ್ಠ ಬ್ರೈಟ್‌ನೆಸ್​ನಿಂದ ಕೂಡಿದೆ. ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 8 Gen 2 ಚಿಪ್ ಜೊತೆಗೆ Adreno 740 GPU 16GB LPDDR5x RAM ನೊಂದಿಗೆ ಜೋಡಿಸಿದೆ.

4 / 7
ಫೋಟೋಗಳು ಮತ್ತು ವಿಡಿಯೋಗಳಿಗಾಗಿ, ಒನ್​ಪ್ಲಸ್​ Hasselblad-ಬ್ರಾಂಡ್​ನ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 48-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದ್ದು, 1/1.43-ಇಂಚಿನ ಸೋನಿ LYT-T808 “Pixel Stacked” CMOS ಸೆನ್ಸಾರ್ ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS), 85-ಡಿಗ್ರಿ ಫೀಲ್ಡ್-ಆಫ್-ವ್ಯೂ ಆಯ್ಕೆಯನ್ನು ಹೊಂದಿದೆ.

5 / 7
ಜೊತೆಗೆ 64-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವು 33.4-ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಎಫ್/2.6 ಅಪರ್ಚರ್ ಅನ್ನು ಹೊಂದಿದೆ. ಇದು 3x ಆಪ್ಟಿಕಲ್ ಜೂಮ್, 6x ಇನ್-ಸೆನ್ಸರ್ ಜೂಮ್ ಮತ್ತು 120x ಡಿಜಿಟಲ್ ಜೂಮ್ ಅನ್ನು ಬೆಂಬಲಿಸುತ್ತದೆ. 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಸೋನಿ IMX581 ಸಂವೇದಕದೊಂದಿಗೆ EIS, 114-ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಎಫ್/2.2 ಅಪರ್ಚರ್ ಅನ್ನು ಹೊಂದಿದೆ.

6 / 7
ಈ ಫೋನ್‌ನಲ್ಲಿ ಡ್ಯುಯಲ್-ಸೆಲ್ 4,800mAh ಬ್ಯಾಟರಿ (3,295+1,510mAh) ಅಳವಡಿಸಲಾಗಿದ್ದು ಅದು 67W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹ್ಯಾಂಡ್‌ಸೆಟ್ ಬಾಕ್ಸ್‌ನಲ್ಲಿ 80W ಚಾರ್ಜರ್‌ನೊಂದಿಗೆ ಬರುತ್ತದೆ. ಈ ಹ್ಯಾಂಡ್‌ಸೆಟ್ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ.

7 / 7
Follow us