ಯುವ ಮನಸ್ಸುಗಳು ಹಾಳಾಗುತ್ತಿವೆ… ಫೇಸ್​ಬುಕ್, ಇನ್ಸ್​ಟಾಗ್ರಾಮ್ ವಿರುದ್ಧ ಅಮೆರಿಕದ 42 ರಾಜ್ಯಗಳಿಂದ ಕಾನೂನು ಕ್ರಮ

US States Complaint Against Meta: ಫೇಸ್​ಬುಕ್, ಇನ್ಸ್​ಟಾಗ್ರಾಮ್ ಮೊದಲಾದ ಸೋಷಿಯಲ್ ಮೀಡಿಯ ವಿರುದ್ಧ ಅಮೆರಿಕದಲ್ಲಿ ಕಾನೂನು ಕ್ರಮ ಜರುಗಿಸಲು ಹೆಜ್ಜೆ ಇಡಲಾಗಿದೆ. ಯುವ ಜನರ ಮಾನಸಿಕ ಆರೋಗ್ಯ ಹದಗೆಡಲು ಕಾರಣವಾಗಿರುವ ಮೆಟಾ ಪ್ಲಾಟ್​ಫಾರ್ಮ್ಸ್ ವಿರುದ್ಧ ಅಮೆರಿಕದ ಫೆಡರಲ್ ಕೋರ್ಟ್​ನಲ್ಲಿ ದೂರು ದಾಖಲಾಗಿದೆ. ಅಮೆರಿಕದ 50 ರಾಜ್ಯಗಳ ಪೈಕಿ 42 ರಾಜ್ಯಗಳ ಅಟಾರ್ನಿ ಜನರಲ್​ಗಳು ಕ್ಯಾಲಿಫೋರ್ನಿಯಾದಲ್ಲಿರುವ ನ್ಯಾಯಾಲಯವೊಂದಕ್ಕೆ ದೂರು ಸಲ್ಲಿಸಿದ್ದಾರೆ.

ಯುವ ಮನಸ್ಸುಗಳು ಹಾಳಾಗುತ್ತಿವೆ... ಫೇಸ್​ಬುಕ್, ಇನ್ಸ್​ಟಾಗ್ರಾಮ್ ವಿರುದ್ಧ ಅಮೆರಿಕದ 42 ರಾಜ್ಯಗಳಿಂದ ಕಾನೂನು ಕ್ರಮ
ಮೆಟಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 25, 2023 | 12:37 PM

ಕ್ಯಾಲಿಫೋರ್ನಿಯಾ, ಅಕ್ಟೋಬರ್ 25: ಸೋಷಿಯಲ್ ಮೀಡಿಯಾಗೆ ಜನರು ಅದೆಷ್ಟು ದಾಸರಾಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಲ್ಲೂ ಯುವ ಮನಸ್ಸುಗಳಿಗೆ ಇನ್ಸ್​ಟಾಗ್ರಾಮ್, ಫೇಸ್ಬುಕ್, ಟಿಕ್ ಟಾಕ್ ಇತ್ಯಾದಿಗಳು ಒಂದು ರೀತಿ ವ್ಯಸನವಾಗಿ ಹೋಗಿದೆ. ಎಳೆಯ ಮಕ್ಕಳನ್ನೂ ಈ ಆಧುನಿಕ ಜಾಢ್ಯ (addiction) ಬಿಟ್ಟಿಲ್ಲ. ಇದೀಗ ಫೇಸ್​ಬುಕ್, ಇನ್ಸ್​ಟಾಗ್ರಾಮ್ ಮೊದಲಾದ ಸೋಷಿಯಲ್ ಮೀಡಿಯ ವಿರುದ್ಧ ಅಮೆರಿಕದಲ್ಲಿ ಕಾನೂನು ಕ್ರಮ ಜರುಗಿಸಲು ಹೆಜ್ಜೆ ಇಡಲಾಗಿದೆ. ಯುವ ಜನರ ಮಾನಸಿಕ ಆರೋಗ್ಯ ಹದಗೆಡಲು ಕಾರಣವಾಗಿರುವ ಮೆಟಾ ಪ್ಲಾಟ್​ಫಾರ್ಮ್ಸ್ ವಿರುದ್ಧ ಅಮೆರಿಕದ ಫೆಡರಲ್ ಕೋರ್ಟ್​ನಲ್ಲಿ (US federal court) ದೂರು ದಾಖಲಾಗಿದೆ. ಅಮೆರಿಕದ 50 ರಾಜ್ಯಗಳ ಪೈಕಿ 42 ರಾಜ್ಯಗಳ ಅಟಾರ್ನಿ ಜನರಲ್​ಗಳು ಕ್ಯಾಲಿಫೋರ್ನಿಯಾದಲ್ಲಿರುವ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.

ಏನಿದೆ ದೂರಿನಲ್ಲಿ…?

ಲಾಭದ ಉದ್ದೇಶದಿಂದ ಮೆಟಾ ಸಂಸ್ಥೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಯುವ ಜನರು ಮತ್ತು ಹದಿಹರೆಯದ ಮಕ್ಕಳನ್ನು ಸೆಳೆಯುತ್ತಿವೆ. ಸೋಷಿಯಲ್ ಮೀಡಿಯಾಗಳ ಬಳಕೆಯಿಂದ ಮಕ್ಕಳಲ್ಲಿ ಖಿನ್ನತೆ, ಆತಂಕ, ನಿದ್ರಾಹೀನತೆ, ಶೈಕ್ಷಣಿಕ ಅಡಚಣೆ, ನಿತ್ಯಜೀವನ ತೊಡಕು ಇತ್ಯಾದಿಗಳು ಆಗುತ್ತಿರುವುದು ಸಂಶೋಧನೆಯಿಂದ ಸಾಬೀತಾಗಿದೆ ಎಂಬುದು ಅಟಾರ್ನಿ ಜನರಲ್​ಗಳು ಸಲ್ಲಿಸಿರುವ ದೂರಿನಲ್ಲಿರುವ ಸಾರಾಂಶವಾಗಿದೆ.

ಇದನ್ನೂ ಓದಿ: ನಿಮ್ಮ ಸಂಗಾತಿಯೊಂದಿಗಿನ ಉತ್ತಮ ಸಂಬಂಧಕ್ಕೆ ಈ ಸಣ್ಣಪುಟ್ಟ ಸಂಗತಿಗಳೇ ಬುನಾದಿ

ಮೆಟಾ ಅಸಮಾಧಾನ?

ತಮ್ಮ ಸಂಸ್ಥೆ ವಿರುದ್ಧ ಅಮೆರಿಕದ ರಾಜ್ಯಗಳು ಕೋರ್ಟ್ ಮೊರೆ ಹೋಗಿರುವ ಘಟನೆ ಬಗ್ಗೆ ಮೆಟಾ ಪ್ಲಾಟ್​ಫಾರ್ಮ್ಸ್ ಬೇಸರ ವ್ಯಕ್ತಪಡಿಸಿದೆ. ದೂರು ನೀಡುವ ಬದಲು ಅಟಾರ್ನಿ ಜನರಲ್​ಗಳು ಹದಿಹರೆಯದವರು ಬಳಸುವ ಆ್ಯಪ್​ಗಳಿಗೆ ವಯೋಗುಣ ಪ್ರಮಾಣವನ್ನು ಸಿದ್ಧಪಡಿಸಲು ಉದ್ಯಮಗಳೊಂದಿಗೆ ಮಾತನಾಡಬಹುದಿತ್ತು ಎಂದು ಮೆಟಾ ಸಂಸ್ಥೆ ಹೇಳಿಕೆ ನೀಡಿದೆ.

ಜನರು ಫೇಸ್ಬುಕ್ ಮತ್ತು ಇನ್ಸ್​ಟಾಗ್ರಾಮ್​ಗೆ ಅಡಿಕ್ಟ್ ಆಗಿರುವ ಬಗ್ಗೆ ಅಸಮಾಧಾನಗಳು ಇದೇ ಮೊದಲು ಬಂದಿದ್ದಲ್ಲ. ಹಲವು ವರ್ಷಗಳಿಂದಲೂ ವಿವಿಧ ಸಮೀಕ್ಷೆಗಳು ಈ ನಿಟ್ಟಿನಲ್ಲಿ ಬೊಟ್ಟು ಮಾಡುತ್ತಿವೆ. 2021ರಲ್ಲಿ ಮೆಟಾ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ ಈ ಬಗ್ಗೆ ತಮ್ಮ ಫೇಸ್ಬುಕ್ ಪೇಜ್​ನಲ್ಲಿ ಹಾಕಿದ ಒಂದು ಪೋಸ್ಟ್​ನಲ್ಲಿ, ಲಾಭದ ಆಸೆಗೆ ಜನರ ಸುರಕ್ಷತೆ ಬಲಿಕೊಡಲಾಗುತ್ತಿರುವ ಆರೋಪವನ್ನು ನಿರಾಕರಿಸಿದ್ದರು.

ಇದನ್ನೂ ಓದಿ: ಸಿಹಿ ಆಹಾರವು ತಿನ್ನಬೇಕು, ತೂಕ ಕೂಡ ಹೆಚ್ಚಾಗಬಾರದು, ಏನು ಮಾಡುವುದು? ಇಲ್ಲಿದೆ ಸರಳ ಮಾರ್ಗ

ಅಪರಾಧವೆಂದು ಕೋರ್ಟ್ ಪರಿಗಣಿಸಿದರೆ ಮೆಟಾಗೆ ಏನು ಶಿಕ್ಷೆ?

ಅಮೆರಿಕದ ಕಾನೂನು ತಜ್ಞರ ಪ್ರಕಾರ ವಿವಿಧ ರಾಜ್ಯಗಳಲ್ಲಿ ಮೆಟಾದಿಂದ ಆಗುವ ಪ್ರತೀ ಕಾನೂನು ನಿಯಮ ಉಲ್ಲಂಘನೆಗೂ 1,000 ಡಾಲರ್​ನಿಂದ 5,000 ಡಾಲರ್​ವರೆಗೂ ದಂಡ ವಿಧಿಸುವ ಸಾಧ್ಯತೆ ಇದೆ.

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ