ಹೊಸ ಸ್ಮಾರ್ಟ್​ಫೋನ್ ಖರೀದಿಸುವಾಗ ಈ 3 ವಿಷಯಗಳನ್ನು ಪರಿಶೀಲಿಸಿ: SAR ಮೌಲ್ಯ ಮುಖ್ಯ

Check these things before buying phone: ಸಾಮಾನ್ಯವಾಗಿ ಹೊಸ ಫೋನ್ ಖರೀದಿಸುವಾಗ ಹೆಚ್ಚಿನವರು ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಮತ್ತು ವಿನ್ಯಾಸವನ್ನು ನೋಡುತ್ತಾರೆ. ಆದರೆ, ಈ ಎಲ್ಲಾ ಫೀಚರ್ಸ್​ಗಿಂತ ಹೆಚ್ಚು ಮುಖ್ಯವಾದ ವಿಷಯಗಳಿವೆ. ಅದರ ಬಗ್ಗೆ ನೀವು ಸರಿಯಾಗಿ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ನೀವು ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾಗಬಹುದು.

ಹೊಸ ಸ್ಮಾರ್ಟ್​ಫೋನ್ ಖರೀದಿಸುವಾಗ ಈ 3 ವಿಷಯಗಳನ್ನು ಪರಿಶೀಲಿಸಿ: SAR ಮೌಲ್ಯ ಮುಖ್ಯ
Smartphone Buying
Follow us
Vinay Bhat
|

Updated on: Oct 24, 2023 | 3:35 PM

ಇಂದು ಮಾರುಕಟ್ಟೆಯಲ್ಲಿ ವಾರಕ್ಕೆ ಕನಿಷ್ಠ ಎಂದರೂ ಮೂರರಿಂದ ನಾಲ್ಕು ಸ್ಮಾರ್ಟ್​ಫೋನ್​ಗಳು (Smartphones) ಬಿಡುಗಡೆ ಆಗುತ್ತದೆ. ಇವುಗಳು ಕಡಿಮೆ ಬೆಲೆಗೆ ಲಭ್ಯವಿರುವುದರಿಂದ ಭರ್ಜರಿ ಸೇಲ್ ಕೂಡ ಆಗುತ್ತದೆ. ಆದರೆ, ಹೆಚ್ಚಿನವರು ಸ್ಮಾರ್ಟ್‌ಫೋನ್ ಖರೀದಿಸಲು ಹೋದಾಗ, ಮೊದಲು ಪರಿಶೀಲಿಸುವುದು ಅದರ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಮತ್ತು RAM. ಆದಾಗ್ಯೂ, ಈ ವೈಶಿಷ್ಟ್ಯಗಳ ಹೊರತಾಗಿ, ಸ್ಮಾರ್ಟ್‌ಫೋನ್‌ನಲ್ಲಿ ನೀವು ಖಂಡಿತವಾಗಿಯೂ ಗಮನಿಸಬೇಕಾದ ಕೆಲವು ವಿಷಯಗಳಿವೆ ಎಂದು ತಿಳಿದಿದೆಯೇ?. ನೀವು ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಶೀಲಿಸದೆ ಖರೀದಿಸಿದರೆ ಅದು ವ್ಯರ್ಥ ಎಂದೇ ಹೇಳಬಹುದು.

ಇಂದು ನಾವು ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ನೀವು ಪರಿಶೀಲಿಸಬೇಕಾದ ಕೆಲವು ವಿಷಯಗಳ ಬಗ್ಗೆ ತಿಳಿಸಲಿದ್ದೇವೆ.

SAR ಮೌಲ್ಯ

ಯಾವುದೇ ಮೊಬೈಲ್ ಫೋನ್‌ ಅನ್ನು SAR (Specific Absorption Rate) ಅಂದರೆ ಫೋನ್‌ನಿಂದ ಹೊರಬರುವ ವಿಕಿರಣದ ಮೂಲಕ ಅಳೆಯಲಾಗುತ್ತದೆ. ಯಾವ ಫೋನ್‌ನ SAR ಮೌಲ್ಯ ಹೆಚ್ಚಾಗಿರುತ್ತದೆ, ಅದು ಹೆಚ್ಚು ಅಪಾಯಕಾರಿ. ಭಾರತದಲ್ಲಿ ಮಾರಾಟವಾಗುವ ಫೋನ್‌ಗಳಿಗೆ SAR ಮೌಲ್ಯವನ್ನು ಪ್ರತಿ ಕಿಲೋಗ್ರಾಂಗೆ ಗರಿಷ್ಠ 1.6 ವ್ಯಾಟ್‌ಗಳಿಗೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ
Image
ಎರಡೇ ದಿನ ಬಾಕಿ: ಮಾರುಕಟ್ಟೆಯನ್ನು ಅಲ್ಲೋಲ-ಕಲ್ಲೋಲ ಮಾಡಲಿದೆ ಶವೋಮಿ 14 ಸರಣಿ
Image
ಲಾವಾದಿಂದ ಮಹತ್ವದ ಘೋಷಣೆ: ಬರುತ್ತಿದೆ ಹೊಸ ದೇಶೀಯ ಸ್ಮಾರ್ಟ್​ಫೋನ್
Image
5G ಬಳಸುವಾಗ ಡೇಟಾ ಬೇಗನೆ ಖಾಲಿ ಆಗುತ್ತಾ?: ಹಾಗಿದ್ರೆ ಈ ಟ್ರಿಕ್ ಟ್ರೈ ಮಾಡಿ
Image
ಭಾರತದಲ್ಲಿ ಬಹುನಿರೀಕ್ಷಿತ ವಿವೋ Y200 ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ?

ಬಜೆಟ್ ಬೆಲೆ, ಬಲಿಷ್ಠ ಪ್ರೊಸೆಸರ್: ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಹೊಸ ವಿವೋ Y78t ಸ್ಮಾರ್ಟ್​ಫೋನ್

ನಿಮ್ಮ ಫೋನ್‌ನಲ್ಲಿ *#07# ಅನ್ನು ಡಯಲ್ ಮಾಡುವ ಮೂಲಕ ಈ ಮೊಬೈಲ್​ನ SAR ಮೌಲ್ಯವನ್ನು ತಿಳಿಯಬಹುದು. ನಿಮ್ಮ ಫೋನ್‌ನ SAR ಮೌಲ್ಯವು ನಿಗದಿತ ದರಕ್ಕಿಂತ ಹೆಚ್ಚಿದ್ದರೆ ಅದು ಅಪಾಯಕಾರಿಯಾಗಬಹುದು.

ಫೋನ್ ರಿಫ್ರೆಶ್ ದರ

ಹೆಚ್ಚಿನ ಜನರಿಗೆ ಸ್ಮಾರ್ಟ್‌ಫೋನ್‌ನ ರಿಫ್ರೆಶ್ ದರದ ಬಗ್ಗೆ ತಿಳಿದಿರುವುದಿಲ್ಲ. ಸ್ಮಾರ್ಟ್‌ಫೋನ್ ಖರೀದಿಸುವ ಮೊದಲು ರಿಫ್ರೆಶ್ ದರವನ್ನು ಪರಿಶೀಲಿಸುವವರ ಸಂಖ್ಯೆ ತೀರಾ ಕಡಿಮೆ. ಆದರೆ ನೀವು ಇದನ್ನು ಪರಿಶೀಲಿಸದೆಯೇ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ನಿಮ್ಮ ಹಣ ವ್ಯರ್ಥವಾಗುತ್ತದೆ. ಇದರ ಹಿಂದೆ ದೊಡ್ಡ ಕಾರಣವಿದೆ. ರಿಫ್ರೆಶ್ ದರವು ಸ್ಮಾರ್ಟ್​ಫೋನ್​ನ ಡಿಸ್ ಪ್ಲೇ ವೇಗವನ್ನು ಪ್ರತಿಬಿಂಬಿಸುತ್ತದೆ.

ರಿಫ್ರೆಶ್ ದರವು ನಿಮ್ಮ ಸ್ಮಾರ್ಟ್‌ಫೋನ್‌ನ ಡಿಸ್‌ಪ್ಲೇ ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಅದು ಎಷ್ಟು ಮೃದುವಾಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ, ನೀವು ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಿದಾಗ, ಅದರ ರಿಫ್ರೆಶ್ ದರವು 60 ರಿಂದ 90 Hz ವರೆಗೆ ಇರುತ್ತದೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗೆ ಈ ರಿಫ್ರೆಶ್ ದರವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ.

ನೀವು ಮಧ್ಯಮ ಶ್ರೇಣಿಯ ಅಥವಾ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದಾಗ, ಅದರ ರಿಫ್ರೆಶ್ ದರವು 90 ರಿಂದ 120 Hzನಡುವೆ ಇರುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ, ಇದಕ್ಕಿಂತ ಹೆಚ್ಚಿನ ರಿಫ್ರೆಶ್ ದರದ ಸ್ಮಾರ್ಟ್‌ಫೋನ್‌ಗಳು ಸಹ ಬಂದಿವೆ. ಆದರೆ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಈಗ ರಿಲೀಸ್ ಆಗುತ್ತಿರುವುದು 120 Hz ನಲ್ಲಿ. ನೀವು ಮಧ್ಯಮ ಶ್ರೇಣಿಯ ಅಥವಾ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ಖರೀದಿಸುತ್ತಿದ್ದರೆ ಮತ್ತು ಅದರ ರಿಫ್ರೆಶ್ ದರವು 60 Hz ಆಗಿದ್ದರೆ, ನಿಮ್ಮ ಹಣವು ವ್ಯರ್ಥವಾಗುತ್ತದೆ. ಆದ್ದರಿಂದ ಕನಿಷ್ಠ 90 Hz ಹೊಂದಿರುವ ಸ್ಮಾರ್ಟ್‌ಫೋನ್ ಖರೀದಿಸಿ.

ಚಾರ್ಜಿಂಗ್ ಬೆಂಬಲ

ನೀವು ಮಧ್ಯಮ ಶ್ರೇಣಿಯ ಅಥವಾ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸುತ್ತಿದ್ದರೆ, ಕನಿಷ್ಠ 60 ರಿಂದ 80 ವ್ಯಾಟ್‌ಗಳ ಚಾರ್ಜಿಂಗ್ ಬೆಂಬಲ ಇರಬೇಕು. ಇದಕ್ಕಿಂತ ಕಡಿಮೆ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಖರೀದಿಸಲು ನೀವು ಬಯಸಿದರೆ, ಅದನ್ನು ಚಾರ್ಜ್ ಮಾಡಲು 1 ಗಂಟೆಯಿಂದ ಒಂದೂವರೆ ಗಂಟೆ ತೆಗೆದುಕೊಳ್ಳಬಹುದು. 60 ರಿಂದ 80 ವ್ಯಾಟ್‌ಗಳ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಅರ್ಧ ಗಂಟೆಯಿಂದ ಕಾಲು ಗಂಟೆಯವರೆಗೆ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇದು ನಿಮ್ಮ ಸಮಯವನ್ನು ಉಳಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ