ಚಿನ್ನ ಖರೀದಿಸುವ ಮುನ್ನ ಈ ಆ್ಯಪ್ ಇನ್ಸ್ಟಾಲ್ ಮಾಡಿ: ಅಸಲಿಯೋ-ನಕಲಿಯೋ ತಿಳಿದುಕೊಳ್ಳಿ
How to use BIS Care App: ಈ ಅಪ್ಲಿಕೇಶನ್‌ನ ಹೆಸರು BIS ಕೇರ್ ಆ್ಯಪ್ ಆಗಿದೆ. ಹಾಲ್‌ಮಾರ್ಕ್ ಮತ್ತು ISI ಪ್ರಮಾಣೀಕೃತ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಟ್ರ್ಯಾಕ್ ಮಾಡಲು ಈ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ. ಈ ಆ್ಯಪ್ನ ಸಹಾಯದಿಂದ, ನೀವು ಎಲ್ಲಿ ಬೇಕಾದರೂ ಕುಳಿತು ಹಾಲ್‌ಮಾರ್ಕ್ ಚಿನ್ನದ ಆಭರಣಗಳ ಶುದ್ಧತೆಯನ್ನು ಪರಿಶೀಲಿಸಬಹುದು.
ಮದುವೆಯ ಸೀಸನ್ ಇನ್ನೇನು ಶುರುವಾಗಲಿದೆ. ಈ ಸಂದರ್ಭ ನೀವು ಚಿನ್ನವನ್ನು (Gold) ಖರೀದಿಸಲು ಹೊರಟಿದ್ದರೆ, ಇಲ್ಲಿದೆ ಉಪಯುಕ್ತ ಮಾಹಿತಿ. ನೀವು ಖರೀದಿಸುವ ಆಭರಣವು ಶುದ್ಧವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು. ಚಿನ್ನವನ್ನು ಖರೀದಿಸುವ ಗ್ರಾಹಕರಿಗೆ ಸಹಾಯ ಮಾಡಲು, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಿಮಗೆ ಅಸಲಿ ಮತ್ತು ನಕಲಿ ಚಿನ್ನವನ್ನು ಗುರುತಿಸಲು ಸಹಾಯ ಮಾಡುವ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ.
ಈ ಅಪ್ಲಿಕೇಶನ್‌ನ ಹೆಸರು BIS ಕೇರ್ ಆ್ಯಪ್ ಆಗಿದೆ. ಹಾಲ್‌ಮಾರ್ಕ್ ಮತ್ತು ISI ಪ್ರಮಾಣೀಕೃತ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ಟ್ರ್ಯಾಕ್ ಮಾಡಲು ಈ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ. ಈ ಆ್ಯಪ್ನ ಸಹಾಯದಿಂದ, ನೀವು ಎಲ್ಲಿ ಬೇಕಾದರೂ ಕುಳಿತು ಹಾಲ್‌ಮಾರ್ಕ್ ಚಿನ್ನದ ಆಭರಣಗಳ ಶುದ್ಧತೆಯನ್ನು ಪರಿಶೀಲಿಸಬಹುದು.
ರಿಯಲ್ ಮಿ GT 5 ಪ್ರೊ ಬಗ್ಗೆ ಹೊರಬಿತ್ತು ಅಚ್ಚರಿ ಸುದ್ದಿ: ಹೊಚ್ಚಹೊಸ ಬಲಿಷ್ಠ ಪ್ರೊಸೆಸರ್
ಅಂದರೆ ನೀವು ಅಂಗಡಿಯಲ್ಲಿ ಕುಳಿತು ಚಿನ್ನವನ್ನು ಖರೀದಿಸುತ್ತಿದ್ದರೆ, ಈ ಅಪ್ಲಿಕೇಶನ್‌ನ ಸಹಾಯದಿಂದ ನೀವು ಆಭರಣವನ್ನು ಖರೀದಿಸದೆಯೇ ಅದರ ಶುದ್ಧತೆಯನ್ನು ಪರಿಶೀಲಿಸಬಹುದು. ಈ ಅಪ್ಲಿಕೇಶನ್ ಆಂಡ್ರಾಯ್ಡ್ನ ಪ್ಲೇ ಸ್ಟೋರ್ ಮತ್ತು ಆ್ಯಪಲ್ನ ಆ್ಯಪ್ ಸ್ಟೋರ್ನಲ್ಲಿ ಬಳಕೆದಾರರಿಗೆ ಲಭ್ಯವಿದೆ.
ಮೊದಲನೆಯದಾಗಿ, ಆಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮತ್ತು ಐಫೋನ್ನಲ್ಲಿ ಆ್ಯಪ್ ಸ್ಟೋರ್ನಿಂದ BIS ಕೇರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ ನಂತರ, ”ಪರವಾನಗಿ ವಿವರಗಳನ್ನು ಪರಿಶೀಲಿಸಿ” ಆಯ್ಕೆಯನ್ನು ಟ್ಯಾಪ್ ಮಾಡಿ. ಹಾಲ್‌ಮಾರ್ಕ್ ಮಾಡಿದ ಆಭರಣಗಳ ಶುದ್ಧತೆಯನ್ನು ಪರಿಶೀಲಿಸಲು, ನೀವು HUID ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಇದನ್ನು ಪರಿಶೀಲಿಸಲು, ನೀವು ಅಪ್ಲಿಕೇಶನ್‌ನಲ್ಲಿನ ವೆರಿಫೈ HUID (ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆ) ಆಯ್ಕೆಗೆ ಹೋಗಬೇಕು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬಿಲ್‌ನಲ್ಲಿ HUID ಕೋಡ್ ಬರೆಯುವುದು ಕಡ್ಡಾಯವಲ್ಲ, ಅಂತಹ ಪರಿಸ್ಥಿತಿಯಲ್ಲಿ ನೀವು ಚಿನ್ನವನ್ನು ಖರೀದಿಸುವ ಅಂಗಡಿಯಲ್ಲಿ ಈ ಸಂಖ್ಯೆಯನ್ನು ಕೇಳಬಹುದು. ಆ್ಯಪ್‌ನಲ್ಲಿ ಈ ಸಂಖ್ಯೆಯನ್ನು ನಮೂದಿಸಿದ ನಂತರ, ಅಂಗಡಿಯಲ್ಲಿಯೇ ನಿಮಗೆ ಈ ಬಗ್ಗೆ ತಿಳಿಯುತ್ತದೆ. ಈ ಅಪ್ಲಿಕೇಶನ್ 4 ಸ್ಟಾರ್ ರೇಟಿಂಗ್ ಕೂಡ ಹೊಂದಿದೆ. ಮತ್ತು 14K, 18K, 20K, 22K, 23K ಮತ್ತು 24K ಆಭರಣಗಳ ಶುದ್ಧತೆಯನ್ನು ಪರಿಶೀಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ