ಟೊಮೆಟೊ ಆಯ್ತು ಈಗ ಈರುಳ್ಳಿ ಕಾಲ: ಗ್ರಾಹಕರಿಗೆ ಕಣ್ಣೀರು ತರಿಸಿದ ಉಳ್ಳಾಗಡ್ಡಿ ದರ

onion price hike: ಅತ್ತೆಗೊಂದು ಕಾಲ. ಸೊಸೆಗೊಂದು ಕಾಲ ಎಂಬಂತೆ ಟೊಮೆಟೊ ರೇಟ್ ಕುಸಿದಿದ್ದು, ಈರುಳ್ಳಿ ಬೆಲೆ ಗಗನಕ್ಕೆ ಜಿಗಿದಿದೆ. ಇದರಿಂದಟೊಮೆಟೊ ಬೆಲೆ ಏರಿಕೆಯಿಂದ ಕೈಸುಟ್ಟುಕೊಂಡಿದ್ದ ಗ್ರಾಹಕರ ಕಣ್ಣಲ್ಲಿ ಈರುಳ್ಳಿ ಬೆಲೆ ಏರಿಕೆ ಕಣ್ಣಿರು ತರಿಸುತ್ತಿದೆ. ಮಳೆ ಅಭಾವದಿಂದಾಗಿ ಇಳುವರಿ ಕುಸಿತದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈರುಳ್ಳಿ ಬೆಲೆ ಏರಿಕೆಯಾಗಿದ್ದು, ಸದ್ಯ ಎಲ್ಲೆಲ್ಲಿ ಎಷ್ಟ ಬೆಲೆ ಇದೆ ಎನ್ನುವ ವಿವರ ಈ ಕೆಳಗಿನಂತಿದೆ.

ಟೊಮೆಟೊ ಆಯ್ತು ಈಗ ಈರುಳ್ಳಿ ಕಾಲ: ಗ್ರಾಹಕರಿಗೆ ಕಣ್ಣೀರು ತರಿಸಿದ ಉಳ್ಳಾಗಡ್ಡಿ ದರ
ಈರುಳ್ಳಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Oct 31, 2023 | 8:39 AM

ಬೆಂಗಳೂರು, (ಅಕ್ಟೋಬರ್ 31): ಕಳೆದ ಎರಡು ತಿಂಗಳ ಹಿಂದಷ್ಟೆ ಕೆಂಪು ಸುಂದರಿ ಟೊಮೆಟೊ(tomato) ಗ್ರಾಹಕರ ಕಣ್ಣು ಕೆಂಪಾಗಿಸಿತ್ತು. ಪ್ರತಿ ಕೆಜಿ ಟೊಮೆಟೊ 150 ರೂಪಾಯಿ ಗಡಿ ದಾಟಿತ್ತು. ಮಹಿಳೆಯರಂತೂ ಅಡುಗೆಗೆ ಟೊಮೆಟೊ ಬಳಸುವುದನ್ನೇ ಬಿಟ್ಟುಬಿಟ್ಟಿದ್ದರು. ಆದ್ರೆ ಆ ಟೈಮಲ್ಲಿ ಈರುಳ್ಳಿ(onion )ರೇಟ್ ತುಂಬಾ ಕಡಿಮೆಯಿತ್ತು. ಆದ್ರೆ ಇದೀಗ ಕಾಲ ಬದಲಾಗಿದೆ. ಅತ್ತೆಗೊಂದು ಕಾಲ. ಸೊಸೆಗೊಂದು ಕಾಲ ಎಂಬಂತೆ ಟೊಮೆಟೊ ರೇಟ್ ಕುಸಿದಿದ್ದು, ಈರುಳ್ಳಿ ಬೆಲೆ ಗಗನಕ್ಕೆ(onion price hike) ಜಿಗಿದಿದೆ.

ತಿಂಗಳ ಹಿಂದೆಯೇ ಈರುಳ್ಳಿ ಬೆಲೆ ಗಗನಕ್ಕೇರಲಿದೆ ಎನ್ನುವ ಸುಳಿವು ಸಿಕ್ಕಿತ್ತು. ಆದ್ರೆ ಕೇಂದ್ರ ಸರ್ಕಾರ ಈರಳ್ಳಿ ರಫ್ತಿಗೆ ಲಗಾಮುಹಾಕಿತ್ತು. ಹೆಚ್ಚೆಚ್ಚು ದಾಸ್ತಾನ ಮಾರುಕಟ್ಟೆಗೆ ಬಿಡುಗಡೆ ಮಾಡಿ ಬೆಲೆ ಹೆಚ್ಚಾಗದಂತೆ ನೋಡಿಕೊಂಡಿತ್ತು. ಆದ್ರೆ, ಇದೀಗ ಮಳೆ ಅಭಾವದಿಂದ ನಿರೀಕ್ಷಿತ ಫಸಲು ಬಾರದ ಕಾರಣ, ಹೆಚ್ಚು ಪ್ರಮಾಣದಲ್ಲಿ ಈರುಳ್ಳಿ ಆಮದು ಆಗದಿರೋ ಹಿನ್ನೆಲೆ ಈರುಳ್ಳಿ ದರವು ಗಗನಕ್ಕೇರುತ್ತಿದೆ. ಕಳೆದ ವಾರ ಪ್ರತಿ ಕೆಜಿಗಿ 30ರಿಂದ 40ರೂಪಾಯಿ ಇದ್ದ ಈರುಳ್ಳಿ ಇದೀಗ ಏಕಾಏಕಿ 80 ರಿಂದ 90 ರೂಪಾಯಿಗೆ ತಲುಪಿದೆ.

ಬೆಂಗಳೂರು ನಗರದಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕೆಜಿಗೆ 80 ರಿಂದ 90 ರೂಪಾಯಿಗೆ ತಲುಪಿದೆ. ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಗಳಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಗಳಿಗೆ ಈರುಳ್ಳಿ ಪೂರೈಕೆಯಾಗುತ್ತಿಲ್ಲ. ಕೆಲ ಪ್ರದೇಶಗಳಲ್ಲಿ ಬಿತ್ತನೆ ವಿಳಂಬವಾಗಿದ್ದು, ಇನ್ನೂ ಫಸಲು ಬಂದಿಲ್ಲ. ಪರಿಣಾಮ, ಬೆಲೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರವು ಶೇ. 57ರಷ್ಟು ಹೆಚ್ಚಳವಾಗಿದೆ.

ಯಶವಂತಪುರ ಎಪಿಎಂಸಿಯಲ್ಲಿ ಪ್ರತಿ ಕೆ.ಜಿ 60 ರಿಂದ 65 ರೂಪಾಯಿ ಇದೆ. ನ್ಯೂ ತರಗುಪೇಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ 75ರಿಂದ 90 ರೂಪಾಯಿ ಇದೆ. ಹಾಪ್‌ಕಾಮ್ಸ್‌ಗಳಲ್ಲಿ ಕೆ.ಜಿ ಈರುಳ್ಳಿಯನ್ನು 70 ರಿಂದ 88 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿಗೆ ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಲೋಡ್‌ ಈರುಳ್ಳಿ ಬರುತ್ತಿತ್ತಂತೆ. ಆದ್ರೆ, ಈಗ ಆದ್ರೀಗ ದಿನಕ್ಕೆ 100ರಿಂದ 200 ಲೋಡ್ ಮಾತ್ರ ಬರುತ್ತಿದೆ. ವ್ಯಾಪಾರಸ್ಥರು ಹೇಳುವ ಪ್ರಕಾರ ಇನ್ನೂ ಒಂದೆರಡು ತಿಂಗಳು ಈರುಳ್ಳಿ ಬೆಲೆ ಕಡಿಮೆಯಾಗುವುದು ಅನುಮಾನ ಎನ್ನಲಾಗಿದೆ.

ರಾಜ್ಯದ ನಾನಾ ಕಡೆ ಹೇಗಿದೆ ಈರುಳ್ಳಿ ದರ?

  • ಚಿತ್ರದುರ್ಗ -ಕೆ.ಜಿಗೆ 60 ರಿಂದ 70 ರೂ.
  • ಕಲಬುರಗಿ, ಬೀದರ್, ಯಾದಗಿರಿ -ಕೆ.ಜಿಗೆ 60-80 ರೂ.
  • ರಾಯಚೂರು, ಕೊಪ್ಪಳ -ಕೆ.ಜಿಗೆ 60-80ರೂ
  • ಧಾರವಾಡ, ವಿಜಯಪುರ -ಕೆ.ಜಿಗೆ 70-80 ರೂ
  • ದಕ್ಷಿಣ ಕನ್ನಡ -ಕೆ.ಜಿಗೆ 80-90 ರೂ
  • ಉಡುಪಿ, ಚಿಕ್ಕಮಗಳೂರು -ಕೆ.ಜಿಗೆ 70-80 ರೂ
  • ಮೈಸೂರು, ಮಂಡ್ಯ -ಕೆ.ಜಿಗೆ 80-90 ರೂ

ಒಟ್ಟಿನಲ್ಲಿ ಟೊಮೆಟೊ ಬೆಲೆ ಏರಿಕೆಯಿಂದ ಕೈಸುಟ್ಟುಕೊಂಡಿದ್ದ ಗ್ರಾಹಕರ ಕಣ್ಣಲ್ಲಿ ಈರುಳ್ಳಿ ಬೆಲೆ ಏರಿಕೆ ಕಣ್ಣಿರು ತರಿಸುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ