1 ಲಕ್ಷ ಸಾಲಕ್ಕೆ 40 ಲಕ್ಷದ ಚೆಕ್ ಕೇಸ್: ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ಪತ್ನಿಗೆ ಕಳುಹಿಸಿದ್ದಾನೆ. ಇನ್ನು ವಿಡಿಯೋನಲ್ಲಿ ಸಾಯುತ್ತಿರುವುದ್ಯಾಕೆ? ತನ್ನ ಸಾವಿಗೆ ಕಾರಣ ಯಾರು ಎನ್ನುವುದನ್ನು ವಿಡಿಯೋನಲ್ಲಿ ಉಲ್ಲೇಖಿಸಿದ್ದಾನೆ. ಅಲ್ಲದೇ ನನ್ನ ಸಾವಿಗೆ ನ್ಯಾಯ ಸಿಗಬೇಕಾದರೆ ಅವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಮನವಿ ಮಾಡಿಕೊಂಡಿದ್ದಾನೆ.

1 ಲಕ್ಷ ಸಾಲಕ್ಕೆ  40 ಲಕ್ಷದ ಚೆಕ್ ಕೇಸ್: ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ
Krishnappa
Edited By:

Updated on: Jan 27, 2026 | 10:01 PM

ಹಾಸನ, (ಜನವರಿ 27): ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ. ಬೆಂಗಳೂರಿನ (Bengaluru) ನೆಲಮಂಗಲದ ಕೃಷ್ಣಪ್ಪ(47) ಮೃತ ವ್ಯಕ್ತಿ. ಹಾಸನ ಹೊರವಲಯದ ದೊಡ್ಡಪುರ ಬಳಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಕೃಷ್ಣಪ್ಪನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. ಇನ್ನು ಸಾಯುವ ಮುನ್ನ ಕೃಷ್ಣಪ್ಪ ಸೆಲ್ಫಿ ವಿಡಿಯೋ ಮಾಡುತ್ತಲೇ ವಿಷ ಸೇವಿಸಿದ್ದಾನೆ.

ಸೆಲ್ಫಿ ವಿಡಿಯೋವನ್ನು ಪತ್ನಿ ಕಾಂಚನಗೆ ಕಳುಹಿಸಿದ್ದು, ಕಾಂಚನ ನನ್ನ ಕ್ಷಮಿಸಿಬಿಡು. ರಮೇಶ್ ಹಾಗೂ ಮಂಜು ನೀಡುತ್ತಿರುವ ಕಿರುಕುಳ ತಡೆಯಲು ಆಗುತ್ತಿಲ್ಲ. ನಾನು ಸಾಲ ಪಡೆದಿದ್ದು 1 ಲಕ್ಷ ಸಾಲ ರೂಪಾಯಿ. ಆದರೆ ಅವರು 40 ಲಕ್ಷ ರೂಪಾಯಿ ಚೆಕ್ ಕೇಸ್ ಹಾಕಿದಾರೆ. ನನ್ನ ಸಾವಿಗೆ ನೇರ ಕಾರಣ ಈ ಅಣ್ಣ ತಮ್ಮಂದಿರು (ರಮೇಶ್ , ಮಂಜು) ಎಂದು ವಿಡಿಯೋನಲ್ಲಿ ಹೇಳಿ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಮದುವೆಯಾದ 45 ದಿನಕ್ಕೆ ಲವರ್​​ ಜೊತೆ ಯುವತಿ ಎಸ್ಕೇಪ್​​: ಪತಿ, ಸೋದರ ಮಾವ ಸೂಸೈಡ್​​

ಸೆಲ್ಫಿ ವಿಡಿಯೋನಲ್ಲಿ ಹೇಳಿದ್ದೇನು?

ಬೆಂಗಳೂರಿನ ನೆಲಮಂಗಲದ ಕೃಷ್ಣಪ್ಪ ಕಳೆದ ಮೂರು ವರ್ಷದಿಂದ ಪತ್ನಿ ಮಕ್ಕಳ ಜೊತೆ ಹಾಸನ ನಗರದಲ್ಲಿ ನೆಲೆಸಿದ್ದು, ಇಂದುಈಜನವರಿ 27) ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾನು ಪಡೆದಿದ್ದು 1 ಲಕ್ಷ ರೂ. ಸಾಲ. ಆದರೆ ಅವರು 40 ಲಕ್ಷದ ಚೆಕ್ ಕೇಸ್ ಹಾಕಿದಾರೆ. ಜಾಮೀನು ಪಡೆಯಲು ಕೂಡ ಹಣ ಹೊಂದಿಸಲು ನನ್ನಿಂದ ಸಾಧ್ಯವಿಲ್ಲ. ಹಾಗಾಗಿ ನಾನು ಸಾಯುತ್ತಿದ್ದೇನೆ. ನನ್ನ ಸಾವಿಗೆ ನೇರ ಕಾರಣ ರಮೇಶ್ ಹಾಗು ಮಂಜು ಅಣ್ಣ ತಮ್ಮಂದಿರು. ನನ್ನ ಸಾವಿಗೆ ನ್ಯಾಯ ಸಿಗಬೇಕಾದರೆ ಅವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ವಿಡಿಯೋ ಮಾಡುತ್ತಲೇ ಹಾಸನ ಹೊರವಲಯದ ದೊಡ್ಡಪುರ ಬಳಿ ವಿಷ ಸೇವಿಸಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ