Hassan News:ಹಾಸ್ಟೆಲ್​ನಲ್ಲಿ ದುರ್ವರ್ತನೆ ಆರೋಪ: ಪೊಲೀಸ್ ಕಾನ್ಸ್​ಟೇಬಲ್ ಅಮಾನತು, ಮೂವರಿಗೆ ನೊಟೀಸ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 04, 2023 | 12:45 PM

ಹಾಸನದ ವಿದ್ಯಾನಗರದ ಮೆಟ್ರಿಕ್ ನಂತರದ ಹಾಸ್ಟೆಲ್​ನಲ್ಲಿ ಪೊಲೀಸ್ ಸಿಬ್ಬಂದಿ ದುರ್ವರ್ತನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಎಸ್ಪಿ ಹರಿರಾಮ್ ಶಂಕರ್ ಅವರು ಓರ್ವ ಪೊಲೀಸ್ ಕಾನ್ಸಟೆಬಲ್​ನ್ನು ಅಮಾನತು ಮಾಡಿದ್ದು, ಮೂವರಿಗೆ ನೊಟೀಸ್ ನೀಡಿದ್ದಾರೆ.

Hassan News:ಹಾಸ್ಟೆಲ್​ನಲ್ಲಿ ದುರ್ವರ್ತನೆ ಆರೋಪ: ಪೊಲೀಸ್ ಕಾನ್ಸ್​ಟೇಬಲ್ ಅಮಾನತು, ಮೂವರಿಗೆ ನೊಟೀಸ್
ಹಾಸನ ಹಾಸ್ಟೆಲ್​
Follow us on

ಹಾಸನ, ಆ.4: ವಿದ್ಯಾನಗರದ ಮೆಟ್ರಿಕ್ ನಂತರದ ಹಾಸ್ಟೆಲ್(Hostel)​ನಲ್ಲಿ ಪೊಲೀಸ್ ಸಿಬ್ಬಂದಿ ದುರ್ವರ್ತನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಎಸ್ಪಿ ಹರಿರಾಮ್ ಶಂಕರ್ ಓರ್ವ ಪೊಲೀಸ್ ಕಾನ್ಸ್​ಟೇಬಲ್​ನ್ನು ಅಮಾನತು ಮಾಡಿದ್ದು, ಮೂವರಿಗೆ ನೊಟೀಸ್ ನೀಡಿದ್ದಾರೆ. ಕಾನ್ಸಟೆಬಲ್ ವೇದಕುಮಾರ್ ಅಮಾನತುಗೊಂಡ ಅಧಿಕಾರಿ. ಇನ್ನು ಅಗಸ್ಟ್ 2 ರಂದು ರಾತ್ರಿ ನೈಟ್ ಬೀಟ್​ನಲ್ಲಿದ್ದ ಓರ್ವ ಪಿಎಸ್​ಐ ಹಾಗೂ ಮತ್ತಿಬ್ಬರು ಕಾನ್ಸಟೇಬಲ್​ಗಳಿಗೆ ನೊಟೀಸ್​ ನೀಡಲಾಗಿದೆ. ಅಂದು ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ಗೆ ಎಂಟ್ರಿಯಾಗಿದ್ದ ಪೊಲೀಸರು ವಿದ್ಯಾರ್ಥಿಗಳ ಜೊತೆ ದುರ್ವರ್ತನೆ ಮಾಡಿ, ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಮಾತನಾಡಿದ್ದರು ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದರು. ಈ ಬಗ್ಗೆ ಡಿವೈಎಸ್ಪಿ ಅವರ ವರದಿ ಆಧರಿಸಿ ಅಮಾನತು ಆದೇಶ ಕೊಡಲಾಗಿದೆ.

ಬೈಕ್ ಸವಾರರನ್ನು ಉಳಿಸಲು ಹೋಗಿ ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆ‌ದ ಆಟೋ; ಓರ್ವ ಮಹಿಳೆ ಸಾವು

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಬಳಿ ಬೈಕ್ ಸವಾರರನ್ನು ಉಳಿಸಲು ಹೋಗಿ ಬೊಲೇರೋ ವಾಹನಕ್ಕೆ ಆಟೋವೊಂದು ಡಿಕ್ಕಿ ಹೊಡೆದು, ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಶರಣಮ್ಮ (38) ಮೃತ ಮಹಿಳೆ. ಇನ್ನುಳಿದಂತೆ 6 ಜನರಿಗೆ ಗಾಯವಾಗಿದ್ದು, ಸ್ಥಳೀಯರು ಮಾನವೀಯತೆ ಮೆರೆದು ಗಾಯಾಳುಗಳನ್ನು ಆರೈಕೆ ಮಾಡಿ, ಬಳಿಕ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಈ ಆಟೋದಲ್ಲಿದ್ದವರು ಉಡಮಕಲ್ ಗ್ರಾಮದವರಾಗಿದ್ದು, ಗಂಗಾವತಿಗೆ ತೆರಳುತ್ತಿದ್ದರು. ಈ ವೇಳೆ ದುರಂತ ಸಂಭವಿಸಿದೆ.

ಇದನ್ನೂ ಓದಿ:ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ನಾಲ್ವರು ಸಾವು ಪ್ರಕರಣ; ನಗರಸಭೆ ಎಇಇ, ಜೆಇ, ವಾಲ್ವ್​ಮ್ಯಾನ್​ ಅಮಾನತು

ಕಡಲೇಕಾಯಿ ತಿನ್ನಲು ಬಂದು ಬೋನಿಗೆ ಬಿದ್ದ ಕರಡಿ

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಕರಡಿ ಬಿದ್ದಿದೆ. ನಿನ್ನೆ(ಆ.3) ಕಡಲೇಕಾಯಿ ತಿನ್ನಲು ಬಂದಿದ್ದ ಕರಡಿ ಬೋನಿಗೆ ಬಿದ್ದಿದ್ದು ಗ್ರಾಮಸ್ಥರಲ್ಲಿದ್ದ ಭಯದ ವಾತಾವರಣ ದೂರವಾಗಿದೆ. ಇನ್ನು ಕಳೆದ ಹಲವು ದಿನಗಳಿಂದ ಕರಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಇದೀಗ ಸೆರೆ ಹಿಡಿದ ಕರಡಿಯನ್ನ ತಿಮ್ಲಾಪುರ ಅರಣ್ಯಕ್ಕೆ ರವಾನೆ ಮಾಡಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ