ಕಾರ್ಯಕರ್ತನನ್ನು ಅಟ್ಟಾಡಿಸಿ ಹೊಡೆದಿದ್ದ ಕೇಸ್​​: ಅರಸೀಕೆರೆ ಪೊಲೀಸರಿಂದ ಬಿಜೆಪಿ ಮುಖಂಡ ಮತ್ತು ಕಾರು ಚಾಲಕನ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 26, 2023 | 4:15 PM

ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ನಡುರಸ್ತೆಯಲ್ಲಿ ಬಿಜೆಪಿ ಮುಖಂಡ ಕಾರ್ಯಕರ್ತರ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ್ದ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಯಕರ್ತನನ್ನು ಅಟ್ಟಾಡಿಸಿ ಹೊಡೆದಿದ್ದ ಕೇಸ್​​: ಅರಸೀಕೆರೆ ಪೊಲೀಸರಿಂದ ಬಿಜೆಪಿ ಮುಖಂಡ ಮತ್ತು ಕಾರು ಚಾಲಕನ ಬಂಧನ
ಬಂಧನಕ್ಕೊಳಗಾದ ಬಿಜೆಪಿ ಮುಖಂಡ ವಿಜಯ್​ ಕುಮಾರ್
Follow us on

ಹಾಸನ: ಜಿಲ್ಲೆಯಲ್ಲಿ ಬಿಜೆಪಿ ನಾಯಕರೊಬ್ಬರು ಸ್ವಪಕ್ಷೀಯ ಕಾರ್ಯಕರ್ತನನ್ನು ಅಟ್ಟಾಡಿಸಿಕೊಂಡು ಹೊಡೆದಿರುವಂತಹ ಘಟನೆ ನಿನ್ನೆ(ಜ. 25) ಅರಸೀಕೆರೆ (arsikere) ಯಲ್ಲಿ ನಡೆದಿತ್ತು. ಸದ್ಯ ಈ ವಿಚಾರವಾಗಿ ಅರಸೀಕೆರೆ ಪೊಲೀಸರಿಂದ ಬಿಜೆಪಿ ಘಟಕದ ಉಪಾಧ್ಯಕ್ಷ ವಿಜಯ್ ಕುಮಾರ್​ ಬಂಧನ ಮಾಡಲಾಗಿದೆ. ಜೊತೆಗೆ ಕಾರು ಚಾಲಕನನ್ನೂ ಸಹ ಪೊಲೀಸರು ಬಂಧಿಸಿದ್ದಾರೆ. ಕೊಲೆ ಯತ್ನ ಆರೋಪದಡಿ ಐಪಿಸಿ ಸೆಕ್ಷನ್​ 307ರಡಿ ಕೇಸ್ ದಾಖಲು ಮಾಡಲಾಗಿದೆ. ನಿನ್ನೆ ಸಂಜೆ ನಡುರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತ ಕುಮಾರ್​ ಮೇಲೆ ದೊಣ್ಣೆಯಿಂದ ವಿಜಯ್ ಕುಮಾರ್​ ಮಾರಣಾಂತಿಕ ಹಲ್ಲೆ ಮಾಡಿದ್ದ. ಬಿಜೆಪಿ ಕಾರ್ಯಕರ್ತ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳು ಕುಮಾರ್​ಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅರಸೀಕೆರೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆ ಹಿನ್ನೆಲೆ:

ಬಿಜೆಪಿ ನಾಯಕರೊಬ್ಬರು ಸ್ವಪಕ್ಷೀಯ ಕಾರ್ಯಕರ್ತನನ್ನು ಅಟ್ಟಾಡಿಸಿಕೊಂಡು ಹೊಡೆದಿರುವ ಘಟನೆ ಅರಸೀಕೆರೆಯಲ್ಲಿ ನಡೆದಿತ್ತು. ಬಿಜೆಪಿಯ ಬೂತ್ ವಿಜಯ್ ಅಭಿಯಾನ ಕಾರ್ಯಕಮದಲ್ಲಿ ತಮಗೆ ಅವಮಾನ ಮಾಡಿದ್ದಾನೆಂದು ವಿಜಯ್ ಕುಮಾರ್ ತನ್ನ ಕಾರು ಚಾಲಕನ ಜೊತೆ ಸೇರಿಕೊಂಡು ಕುಮಾರ್​ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು.

ಇದನ್ನೂ ಓದಿ: ವಿರುದ್ಧವಾಗಿ ಬಂದ ತೀರ್ಪು: ರೊಚ್ಚಿಗೆದ್ದು 40ಕ್ಕೂ ಹೆಚ್ಚು ಬಾರಿ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ಪಾಪಿ

ವರ್ಷದ ಹಿಂದೆ ಗಲಾಟೆ

ವರ್ಷದ ಹಿಂದೆ ಬಿಜೆಪಿ ಸಮಾವೇಶದ ವೇಳೆ ಬಿಜೆಪಿ ಅರಸೀಕೆರೆ ಬಿಜೆಪಿ ಟಿಕೇಟ್ ಆಕಾಂಕ್ಷಿ ಎನ್.ಆರ್.ಸಂತೋಚ್ ಹಾಗೂ ವಿಜಯ್ ಕುಮಾರ್ ಬಣದ ನಡುವೆ ಗಲಾಟೆ ನಡೆದಿತ್ತು. ಹಲ್ಲೆಗೊಳಗಾದ ಕುಮಾರ್ ಎನ್.ಆರ್ ಸಂತೋಷ್ ಬಣದಲ್ಲಿ ಗುರ್ತಿಸಿಕೊಂಡಿದ್ದರು. ಅಲ್ಲದೇ ಇತ್ತೀಚೆಗೆ ಬಿಜೆಪಿಯ ಬೂತ್​ ವಿಜಯ್ ಅಭಿಯಾನ​ ನಿಮಿತ್ತ ಗ್ರಾಮಗಳಿಗೆ ತೆರಳಿದ್ದ ವೇಳೆ ಕೆಲ ಜನರಿಂದ ವಿಜಯ್ ಕುಮಾರ್​ಗೆ ಅವಮಾನವಾಗಿತ್ತು. ಆ ಘಟನೆ ವಿಡಿಯೋ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಆರ್ಕಿಡ್​ ಇಂಟರ್​ನ್ಯಾಷನಲ್ ಶಾಲೆ ವಿರುದ್ಧ ದೂರು ದಾಖಲು​, ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ

ಲಾಠಿಯಿಂದ ಹಿಗ್ಗಾಮುಗ್ಗಾ ಥಳಿತ

ಈ ಎಲ್ಲಾ ಬೆಳವಣಿಗೆಗಳಿಂದ ವಿಜಯ್ ಕುಮಾರ್ ಕುಪಿತಗೊಂಡು ನಿನ್ನೆ ಅರಸೀಕೆರೆ ನಗರಸಭೆ ಎದುರು ನೂರಾರು ಜನರ ಎದುರೇ ತಮ್ಮ ಕಾರು ಚಾಲಕನ ಜೊತೆ ಸೇರಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದರು. ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಕುಮಾರ್ ಅವರನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.