ಹಾಸನ: ಎಟಿಎಂಗೆ ಹಾಕಲು ಕೊಂಡೊಯ್ಯುತ್ತಿದ್ದ ಹಣವನ್ನೇ ಎಗರಿಸಿದ ಕಳ್ಳರು; 42 ಲಕ್ಷ ರೂಪಾಯಿ ಕಳ್ಳತನ!
Crime News: ಎಟಿಎಂಗೆ ಹಣ ತುಂಬಿ ವಾಹನದೊಳಗೆ ಬಂದು ನೋಡಿದಾಗ ಹಣದ ಬ್ಯಾಗ್ ಕಳವು ಆಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅದಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಸನ: ಎಟಿಎಂಗಳಿಗೆ ಹಾಕಲು ಕೊಂಡೊಯ್ಯುತ್ತಿದ್ದ ಹಣ ಕಳ್ಳತನ ಮಾಡಿದ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಎಟಿಎಂಗೆ ಹಣ ಹಾಕಲು ಕೊಂಡೊಯ್ಯುತ್ತಿದ್ದ ಹಣವನ್ನೇ ಕದಿಯಲಾಗಿದೆ. ಬರೋಬ್ಬರಿ 42 ಲಕ್ಷ ರೂಪಾಯಿಯನ್ನು ಕಳ್ಳರು ಎಗರಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗೆ ಹಣ ಹಾಕಲು ತೆರಳಿದ್ದ ವೇಳೆ ಕಳ್ಳತನ ಮಾಡಲಾಗಿದೆ.
ಎಟಿಎಂಗೆ ಹಣ ತುಂಬಿ ಹಿಂತಿರುಗಿದಾಗ ಬ್ಯಾಗ್ ಕಳವು ಮಾಡಲಾಗಿದೆ. ಬಾಣಾವರದ ಬಸ್ ನಿಲ್ದಾಣದ ಬಳಿ ಇರುವ ಎಟಿಎಂ ಬಳಿ ಘಟನೆ ನಡೆದಿದೆ. ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಎಟಿಎಂಗೆ ಹಣ ತುಂಬಿ ವಾಹನದೊಳಗೆ ಬಂದು ನೋಡಿದಾಗ ಹಣದ ಬ್ಯಾಗ್ ಕಳವು ಆಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅದಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
MDMA ಮಾರುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳ ಸೆರೆ ಎಮ್ಡಿಎಮ್ಎ ಮಾರುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಸೆರೆಹಿಡಿಯಲಾಗಿದೆ. ಬೆಂಗಳೂರು ನಗರ ಅಬಕಾರಿ ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ರೆಸಿಡೆನ್ಸಿ ರಸ್ತೆಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 26 ಗ್ರಾಂ ಎಂಡಿಎಂಎ, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇನ್ಸ್ಪೆಕ್ಟರ್ ಅರುಣ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತರ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಬಾಗಲಕೋಟೆ: ಬೆತ್ತಲೆ ದೇಹಕ್ಕೆ ಕೊಬ್ಬರಿ ಎಣ್ಣೆ ಬಳಿದು ಕಳ್ಳತನ; ಅಂತಾರಾಜ್ಯ ಕಳ್ಳನನ್ನು ಬಂಧಿಸಿದ ಪೊಲೀಸರು
ಇದನ್ನೂ ಓದಿ: ನೀವು ಸಾಲ ಮಾಡಿ ಕಳ್ಳತನ ಮಾಡಿ; ಆದ್ರೆ ಮೂಲ ಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ: ಸರ್ಕಾರಕ್ಕೆ ಕೋರ್ಟ್ ತರಾಟೆ
Published On - 5:53 pm, Wed, 27 October 21