ಪಿಎಸ್ಐ ಹಗರಣದಲ್ಲಿ ಭಾಗಿಯಾಗಿದ್ದ ಆರೋಪಿ ಅಣ್ಣ ಹಾಸನದಲ್ಲಿ ಆತ್ಮಹತ್ಯೆ!

| Updated By: sandhya thejappa

Updated on: May 11, 2022 | 12:01 PM

ಏಪ್ರಿಲ್ 30ರಂದು ಹೈಗ್ರೌಂಡ್ಸ್ ಠಾಣೆ ಪೊಲೀಸರು ಮನುಕುಮಾರ್ನ ಅರೆಸ್ಟ್ ಮಾಡಿದ್ದಾರೆ. ಊರಿಗೆ ಕರೆದೊಯ್ದು ಮಹಜರು ಮಾಡಿದ್ದಾರೆ. ಪ್ರಸ್ತುತ ಮನುಕುಮಾರ್ ಸಿಐಡಿ ಪೊಲೀಸರ ವಶದಲ್ಲಿದ್ದಾನೆ.

ಪಿಎಸ್ಐ ಹಗರಣದಲ್ಲಿ ಭಾಗಿಯಾಗಿದ್ದ ಆರೋಪಿ ಅಣ್ಣ ಹಾಸನದಲ್ಲಿ ಆತ್ಮಹತ್ಯೆ!
ಆತ್ಮಹತ್ಯೆಗೆ ಶರಣಾಗಿರುವ ವಾಸು
Follow us on

ಹಾಸನ: ಪಿಎಸ್ಐ (PSI) ಹಗರಣದಲ್ಲಿ ಬಂಧನಕ್ಕೊಳಗಾದ ಆರೋಪಿಯ ಅಣ್ಣ ಇಂದು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಹೊಳೆನರಸೀಪುರ ತಾಲೂಕಿನ ಗುಂಜೇವು ಗ್ರಾಮದಲ್ಲಿ ಮನುಕುಮಾರ್ ಅಣ್ಣ ವಾಸು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಿಎಸ್ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಮನುಕುಮಾರ್ ಹೆಸರಿತ್ತು. ಪಟ್ಟಿಯಲ್ಲಿ ಮನುಕುಮಾರ್ 50ನೇ ಱಂಕ್ ಪಡೆದಿದ್ದ. ತಮ್ಮನ ಬಂಧನದಿಂದ ಅಣ್ಣ ಸಾಕಷ್ಟು ನೊಂದಿದ್ದರಂತೆ. ತಮ್ಮ ಪಿಎಸ್ಐ ಆಗಲಿ ಎಂದು ಸಾಲ ಮಾಡಿ ಅಣ್ಣ ಹಣ ನೀಡಿರುವ ಶಂಕೆ ವ್ಯಕ್ತವಾಗಿದೆ. ತಮ್ಮ ಪಿಎಸ್ಐ ಆಗಲಿಲ್ಲ, ಕೊಟ್ಟ ಹಣ ಮತ್ತೆ ಕೈಸೇರಿರಲಿಲ್ಲ. ಇದರಿಂದ ಮನನೊಂದು ವಾಸು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಏಪ್ರಿಲ್ 30ರಂದು ಹೈಗ್ರೌಂಡ್ಸ್ ಠಾಣೆ ಪೊಲೀಸರು ಮನುಕುಮಾರ್ನ ಅರೆಸ್ಟ್ ಮಾಡಿದ್ದಾರೆ. ಊರಿಗೆ ಕರೆದೊಯ್ದು ಮಹಜರು ಮಾಡಿದ್ದಾರೆ. ಪ್ರಸ್ತುತ ಮನುಕುಮಾರ್ ಸಿಐಡಿ ಪೊಲೀಸರ ವಶದಲ್ಲಿದ್ದಾನೆ. ಮನುಕುಮಾರ್ನನ್ನು ಅಂತಿಮ ದರ್ಶನಕ್ಕೆ ಕರೆದೊಯ್ಯಲು ವಕೀಲ ಲೋಹಿತ್ ಅರ್ಜಿ ಸಲ್ಲಿಸಿದ್ದಾರೆ.

ಟಿವಿ9ಗೆ ಹೇಳಿಕೆ ನೀಡಿರುವ ಮೃತ ವಾಸು ತಾಯಿ ಶಿವಮ್ಮ, ನನ್ನ ಮಗನ ಸಾವಿಗೂ, ಪಿಎಸ್​ಐ ಅಕ್ರಮಕ್ಕೂ ಸಂಬಂಧ ಇಲ್ಲ. ಹಿರಿಯ ಮಗ ವಾಸು ಆತ್ಮಹತ್ಯೆಗೆ ಯಾವುದೇ ಸಂಬಂಧ ಇಲ್ಲ. ಹಣ ಕಳೆದುಕೊಂಡ ಆತಂಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಅನುಮಾನ ಇದೆ ಎಂದು ಹೇಳಿದರು.

ಜೈಲುಪಾಲಾಗಿರುವ ಹಾಗರಗಿ ದಂಪತಿ:
2 ದಿನದಿಂದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಜೈಲಿನಲ್ಲಿದ್ದಾಳೆ. ಕಲಬುರಗಿ ಹೊರವಲಯದ ಕೇಂದ್ರ ಕಾರಾಗೃಹದಲ್ಲಿದ್ದಾಳೆ. ದಿವ್ಯಾ ಹಾಗರಗಿ ಐಷಾರಾಮಿ ಜೀವನ ನಡೆಸುತ್ತಿದ್ದಳು. ದಿವ್ಯಾ ಪತಿ ರಾಜೇಶ್ ಹಾಗರಗಿ ಕೂಡಾ‌ ಜೈಲಿನಲ್ಲಿದ್ದಾನೆ. ಸೆಂಟ್ರಲ್​ ಜೈಲಿನಲ್ಲಿ ಪತಿ ನೋಡಿ ದಿವ್ಯಾ ಕಣ್ಣೀರು ಹಾಕಿದ್ದಾಳೆ.

ಪ್ರಕರಣದ ಕಿಂಗ್​ಪಿನ್​ ಆಗಿರುವ ಮಂಜುನಾಥ ಮೇಳಕುಂದಿ, ಕಾಶೀನಾಥ್​ಗೆ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಇಬ್ಬರ ಸಿಐಡಿ ಕಸ್ಟಡಿ ಅಂತ್ಯವಾದ ಹಿನ್ನೆಲೆ ವೈದ್ಯಕೀಯ ಪರೀಕ್ಷೆಗೆ ರವಾನೆ ಮಾಡಲಾಗಿದೆ. ವೈದ್ಯಕೀಯ ತಪಾಸಣೆ ಬಳಿಕ ಆರೋಪಿಗಳನ್ನ ಕಲಬುರಗಿ 3ನೇ JMFC ಕೋರ್ಟ್​ಗೆ ಹಾಜರುಪಡಿಸಲಾಗುತ್ತದೆ.

ಇದನ್ನೂ ಓದಿ

ರಕ್ಷಣೆಗಾಗಿ ಡಾ.ಅಶ್ವತ್ಥ್ ನಾರಾಯಣ ಭೇಟಿಯಾಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿರುವುದು ಸರಿಯಲ್ಲ; ಎಂಬಿ ಪಾಟೀಲ್

ಎಲ್ರೂ ಬದುಕಬೇಕಲ್ವಾ?: ಲೆಕ್ಕಾಚಾರದ ಮಾವ ಆನ್​ಲೈನ್​ ಶಾಪಿಂಗ್​ಗೆ​ ಒಪ್ಪಿದರೆ?

Published On - 11:50 am, Wed, 11 May 22