ರಕ್ಷಣೆಗಾಗಿ ಡಾ.ಅಶ್ವತ್ಥ್ ನಾರಾಯಣ ಭೇಟಿಯಾಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿರುವುದು ಸರಿಯಲ್ಲ; ಎಂಬಿ ಪಾಟೀಲ್

ಡಿಕೆಶಿ ಮತ್ತು ನನ್ನ ಬಾಂಧವ್ಯ ಚೆನ್ನಾಗಿದೆ ಎಂದು ಹೇಳಿದ ಎಂಬಿ ಪಾಟೀಲ್, ಸಚಿವ ಅಶ್ವತ್ಥ್ ರಕ್ಷಿಸಲು ನಾನು ಸಿಎಂ ಅಲ್ಲ, ಅಧ್ಯಕ್ಷನೂ ಅಲ್ಲ ಎಂದು ತಿಳಿಸಿದರು. ಇನ್ನು ಈ ಹೇಳಿಕೆ ಬಗ್ಗೆ ಮಾತನಾಡಿರುವ ಅಶ್ವತ್ಥ್, ನನಗೆ ಯಾವುದೇ ಭಯ ಇಲ್ಲ.

ರಕ್ಷಣೆಗಾಗಿ ಡಾ.ಅಶ್ವತ್ಥ್ ನಾರಾಯಣ ಭೇಟಿಯಾಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿರುವುದು ಸರಿಯಲ್ಲ; ಎಂಬಿ ಪಾಟೀಲ್
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್
Follow us
TV9 Web
| Updated By: sandhya thejappa

Updated on:May 11, 2022 | 10:46 AM

ಬೆಂಗಳೂರು: ಸಚಿವ ಡಾ.ಅಶ್ವತ್ಥ್ ನಾರಾಯಣ (Ashwath Narayanan) ಮತ್ತು ಎಂಬಿ ಪಾಟೀಲ್ (MB Patil) ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ರಕ್ಷಣೆಗಾಗಿ ಸಚಿವ ಅಶ್ವತ್ಥ್ ಎಂಬಿಪಿ ಅವರನ್ನು ಭೇಟಿಯಾಗಿದ್ದರೆಂದು ಹೇಳಿದ್ದರು. ಈ ಹೇಳಿಕೆ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್, ರಕ್ಷಣೆಗಾಗಿ ಭೇಟಿಯಾಗಿದ್ದರೆಂದು ಡಿಕೆಶಿ ಹೇಳಿರುವುದು ಸರಿಯಲ್ಲ. ಡಿಕೆ ಶಿವಕುಮಾರ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಡಿಕೆಶಿ ಹೇಳಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದರು.

ಡಿಕೆಶಿ ಮತ್ತು ನನ್ನ ಬಾಂಧವ್ಯ ಚೆನ್ನಾಗಿದೆ ಎಂದು ಹೇಳಿದ ಎಂಬಿ ಪಾಟೀಲ್, ಸಚಿವ ಅಶ್ವತ್ಥ್ ರಕ್ಷಿಸಲು ನಾನು ಸಿಎಂ ಅಲ್ಲ, ಅಧ್ಯಕ್ಷನೂ ಅಲ್ಲ ಎಂದು ತಿಳಿಸಿದರು. ಇನ್ನು ಈ ಹೇಳಿಕೆ ಬಗ್ಗೆ ಮಾತನಾಡಿರುವ ಅಶ್ವತ್ಥ್, ನನಗೆ ಯಾವುದೇ ಭಯ ಇಲ್ಲ. ಪ್ರತಿಕ್ಷಣ ಭಯದಲ್ಲಿ ಬದುಕುತ್ತಿರುವುದು ಡಿಕೆ ಶಿವಕುಮಾರ್. ಯಾವಾಗ ಜೈಲಿಗೆ ಹೋಗುತ್ತೇನೆ ಎಂದು ಬದುಕುತ್ತಿರುವುದು ಅವರು. ಡಿಕೆ ಶಿವಕುಮಾರ್ ಹೆಸರು ಕೇಳಿದರೆ ಜನಕ್ಕೆ ಗೊತ್ತಾಗುತ್ತದೆ. ಅವರು ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂದು. ನಾನು ಯಾವುದೇ ಭ್ರಷ್ಟಾಚಾರವನ್ನು ಮಾಡಲಿಕ್ಕೆ ಬಂದಿಲ್ಲ. ನಂಬಿ ಬಂದವರ ಜನರ ಕುತ್ತಿಗೆ ಕುಯ್ಯೋದು ಇವರ ಕೆಲಸ. ಅವರ ಹೇಳಿಕೆಗೆ ಎಳ್ಳುಷ್ಟು ಬೆಲೆ ಇಲ್ಲ. ಕಾಂಗ್ರೆಸ್ ಮುಕ್ತ ರಾಮನಗರವನ್ನು ಮಾಡುತ್ತೇವೆ. ಇಂತಹ ವ್ಯಕ್ತಿಗಳನ್ನು ಮನೆಗೆ ಕಳಿಸುತ್ತೇವೆ ಎಂದರು.

ಇಬ್ಬರು ಮೌನ ವಹಿಸುವಂತೆ ಹಿರಿಯ ಕಾಂಗ್ರೆಸ್ ಮುಖಂಡ ಸಲಹೆ: ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಹೇಳಿಕೆಯಿಂದ ಪಕ್ಷಕ್ಕೆ ಮುಜಗರ ಆಗಿದೆ. ಹೀಗಾಗಿ ಪ್ರಕರಣದ ಬಗ್ಗೆ ಇಬ್ಬರು ಮೌನ ವಹಿಸುವಂತೆ ಹಿರಿಯ ಕಾಂಗ್ರೆಸ್ ಮುಖಂಡ ಸಲಹೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನ ಮುಂದುವರೆಸಿಕೊಂಡು ಹೋಗವುದು ಬೇಡ. ನಿಮ್ಮ ಹೇಳಿಕೆಗಳಿಂದ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಲಿದೆ ಎಂದು ಇಬ್ಬರ ನಾಯಕರೊಂದಿಗೆ ಹಿರಿಯ ಕಾಂಗ್ರೆಸ್ ಮುಖಂಡ ಮಾತನಾಡಿದ್ದಾರೆ.

ಪ್ರಕರಣದ ಬಗ್ಗೆ ನೀವು ಯಾವುದೇ ಹೇಳಿಕೆ ಕೊಡ ಬೇಡಿ. ಮುಂದಿನ ವರ್ಷ ಚುನಾವಣೆ ಇದೆ. ನೀವು ಜವಾಬ್ದಾರಿ ಸ್ಥಾನದಲ್ಲಿರುವವರು ಹೀಗೆ ಮಾತನಾಡಿದರೆ ಹೇಗೆ? ಸಾರ್ವಜನಿಕವಾಗಿ ಈ ರೀತಿ ಹೇಳಿಕೆಗಳಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ. ನೀವು ಈ ವಿಚಾರವನ್ನ ಇಲ್ಲಿಗೆ ಕೈಬಿಡಬೇಕೆಂದು ಮನವೊಲಿಕೆ ಮಾಡಿದ್ದಾರೆ.

ಇದನ್ನೂ ಓದಿ

ಬೇಸಿಗೆಯಲ್ಲಿ ಹನಿಮೂನ್​ಗೆ ತೆರಳಬಹುದಾದ ರೊಮ್ಯಾಂಟಿಕ್​ ತಾಣಗಳಿವು

ಫುಟ್​ಪಾತ್​ ಗುಂಡಿಗೆ ಬಿದ್ದು ಖ್ಯಾತ ಗಾಯಕ ಅಜಯ್​ ವಾರಿಯರ್​ಗೆ ಗಾಯ; ಬಿಬಿಎಂಪಿ ವಿರುದ್ಧ ಅಸಮಾಧಾನ

Published On - 10:41 am, Wed, 11 May 22

ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು