ಬೆಳಗಾವಿಯಲ್ಲಿ ತಹಶೀಲ್ದಾರ್ ಕಚೇರಿ ಮುಂದೆ ಕಂಠಪೂರ್ತಿ ಕುಡಿದು ಮಲಗಿದ ಗ್ರಾಮಲೆಕ್ಕಾಧಿಕಾರಿ; ದುರ್ವರ್ತನೆ ವಿಡಿಯೋ ಇಲ್ಲಿದೆ
ಗ್ರಾಮಲೆಕ್ಕಾಧಿಕಾರಿಯ ವರ್ತನೆ ಕಂಡು ಕಾಣದಂತೆ ತಹಶೀಲ್ದಾರ್ ಇದ್ದಾರೆ. ಹಲವು ಬಾರಿ ಸಂಜು ದುರ್ವರ್ತನೆ ಕಂಡು ಸಾರ್ವಜನಿಕರು ಬೇಸತ್ತಿದ್ದಾರೆ. ಗ್ರಾಮಲೆಕ್ಕಾಧಿಕಾರಿಯ ರಂಪಾಟ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಳಗಾವಿ: ಸರ್ಕಾರಿ ನೌಕರಿಗಾಗಿ ಜನರು ಪರದಾಡುತ್ತಾರೆ. ಇಲ್ಲ ಸಲ್ಲದ ಕಷ್ಠ ಪಡುತ್ತಾರೆ. ಆದರೆ ಜಿಲ್ಲೆಯಲ್ಲೊಬ್ಬ ಸರ್ಕಾರಿ ನೌಕರ ತನ್ನ ಕೆಲಸಕ್ಕೆ ಮರ್ಯಾದೆ ಕೊಡದೆ ರಂಪಾಟ ಮಾಡಿದ್ದಾನೆ. ಕರ್ತವ್ಯದಲ್ಲಿದ್ದಾಗ ಕಂಠಪೂರ್ತಿ ಕುಡಿದು ಗ್ರಾಮಲೆಕ್ಕಾಧಿಕಾರಿ ದುರ್ವರ್ತನೆ ಮೆರೆದಿದ್ದಾನೆ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ತಹಶೀಲ್ದಾರ್ (Tahsildar) ಕಚೇರಿ ಮುಂದೆ ಈ ಘಟನೆ ನಡೆದಿದೆ. ಗ್ರಾಮಲೆಕ್ಕಾಧಿಕಾರಿ ಸಂಜು ಬೆಣ್ಣಿ ಕಂಠಪೂರ್ತಿ ಕುಡಿದು ಕಚೇರಿ ಮುಂದೆಯೇ ಮಲಗಿದ್ದಾರೆ. ಗ್ರಾಮಲೆಕ್ಕಾಧಿಕಾರಿಯ ವರ್ತನೆ ಕಂಡು ಕಾಣದಂತೆ ತಹಶೀಲ್ದಾರ್ ಇದ್ದಾರೆ. ಹಲವು ಬಾರಿ ಸಂಜು ದುರ್ವರ್ತನೆ ಕಂಡು ಸಾರ್ವಜನಿಕರು ಬೇಸತ್ತಿದ್ದಾರೆ. ಗ್ರಾಮಲೆಕ್ಕಾಧಿಕಾರಿಯ ರಂಪಾಟ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ
ಎಲ್ರೂ ಬದುಕಬೇಕಲ್ವಾ?: ಲೆಕ್ಕಾಚಾರದ ಮಾವ ಆನ್ಲೈನ್ ಶಾಪಿಂಗ್ಗೆ ಒಪ್ಪಿದರೆ?
ರಕ್ಷಣೆಗಾಗಿ ಡಾ.ಅಶ್ವತ್ಥ್ ನಾರಾಯಣ ಭೇಟಿಯಾಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿರುವುದು ಸರಿಯಲ್ಲ; ಎಂಬಿ ಪಾಟೀಲ್