ರಾಮನಗರ: ಕೊಂಡ ಹಾಯುವಾಗ ಎಡವಿಬಿದ್ದ ಅರ್ಚಕರು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲು

ಎರಡು ಬಾರಿ ಬಿದ್ದರೂ ಎದೆಗುಂದದ ಅರ್ಚಕ ನಂದೀಶ್ ಕೊಂಡದ ಆ ಭಾಗ ತಲುಪಿ ಬಿಡುತ್ತಾರೆ. ಅವರ ಸಾಹಸ ಮೆಚ್ಚುವಂಥದ್ದೇ. ಅದರೆ ದೇಹದ ಹಲವಾರು ಭಾಗಗಳಲ್ಲಿ ಸುಟ್ಟ ಗಾಯಗಳನ್ನು ಅನುಭವಿಸಿರುವ ಅರ್ಚಕರನ್ನು ಚನ್ನಪಟ್ಟಣ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

TV9kannada Web Team

| Edited By: Arun Belly

May 10, 2022 | 8:54 PM

ರಾಮನಗರ: ದುರ್ಬಲ ಹೃದಯದರು ಈ ವಿಡಿಯೋ ವೀಕ್ಷಿಸುವುದು ಒಳಿತಲ್ಲ ಮಾರಾಯ್ರೇ. ಕೊಂಡ ಹಾಯುವುದು ನಮ್ಮ ರಾಜ್ಯದ ಹಲವು ಭಾಗಗಳಲ್ಲಿ ಧಾರ್ಮಿಕ ವಿಧಿ, ಆಚರಣೆಯಾಗಿದೆ (religious act). ಆದರೆ ಕೊಂಡ ಹಾಯುವ ವೇಳೆ ಸಂಭವಿಸುವ ಅವಗಢಗಳ (mishap) ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ಆ ಕ್ಷಣಕ್ಕೆ ಅಯ್ಯೋ ಪಾಪ ಅಂತ ವಿಷಾದ ವ್ಯಕ್ತಪಡಿಸಿ ನಾವು ಸುಮ್ಮನಾಗುತ್ತೇವೆ. ಅದೊಂದು ಧಾರ್ಮಿಕ ಆಚರಣೆ ಆಗಿರುವದರಿಂದ ನಿಲ್ಲಿಸುವುದು ಕೂಡ ಸಾಧ್ಯವಿಲ್ಲ. ಎಲ್ಲ ಕಡೆ ಅವಗಢ ಸಂಭವಿಸುತ್ತವೆ ಅಂತೇನಿಲ್ಲ. ಆದರೆ ಸಂಭವಿಸಿದಾಗ ಆ ವ್ಯಕ್ತಿ-ಅದು ಅರ್ಚಕರಾಗಿರಬಹುದು (priest) ಇಲ್ಲವೇ ಭಕ್ತ; ಅನುಭವಿಸುವ ಯಾತನೆ ಘೋರವಾದದ್ದು.

ನಾವಿಲ್ಲಿ ತೋರಿಸುವ ವಿಡಿಯೋ ರಾಮನಗರದ ಚನ್ನಪಟ್ಟಣ ತಾಲ್ಲೂಕಿನ ಮುಕುಂದ ಗ್ರಾಮದಲ್ಲಿ ನಡೆದ ಕೊಂಡೋತ್ಸವ ಸಂದರ್ಭದಲ್ಲಿ ಜರುಗಿದ್ದು. ಮೊದಲು ಒಬ್ಬ ಭಕ್ತ ಕೊಂಡದಲ್ಲಿ ಓಡುತ್ತಾ ಅನಾಯಾಸವಾಗಿ ಆ ಬದಿ ತಲುಪುತ್ತಾರೆ. ಅದರೆ ಎರಡನೇ ವ್ಯಕ್ತಿ ಕೆಂಡ ಹಾಯುವಾದ ದುರ್ಘಟನೆ ಸಂಭವಿಸುತ್ತದೆ.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಎರಡನೇ ವ್ಯಕ್ತಿ ದೇವಸ್ಥಾನದ ಅರ್ಚಕರಂತೆ, ಅವರ ಹೆಸರು ನಂದೀಶ್. ಅವರು ಕೊಂಡಕ್ಕೆ ಇಳಿಯವ ಮೊದಲು ಮೈಮೇಲೆ ಆವೇಶ ಬಂದಂತೆ ಅಡುತ್ತಾರೆ. ತಮ್ಮ ಕೈಯಲ್ಲಿರುವ ಖಡ್ಗವನ್ನು ಝಳಪಳಿಸುತ್ತಾರೆ. ಆಮೇಲೆ ಕೊಂಡದಲ್ಲಿ ಓಡಲು ಪ್ರಾರಂಭಿಸುತ್ತಾರೆ. ಆದರೆ 3-4 ಅಡಿಗಳಷ್ಟು ದೂರ ಕ್ರಮಿಸಿದ್ದಾಗಲೇ ಆಯತಪ್ಪಿ ಬೆಂಕಿಯಲ್ಲಿ ಬಿದ್ದುಬಿಡುತ್ತಾರೆ. ಸಾವರಿಸಿಕೊಂಡು ಓಡಲಾರಂಭಿಸಿ ಪುನಃ ಎಡವಿ ಬೀಳುತ್ತಾರೆ.

ಎರಡು ಬಾರಿ ಬಿದ್ದರೂ ಎದೆಗುಂದದ ಅರ್ಚಕ ನಂದೀಶ್ ಕೊಂಡದ ಆ ಭಾಗ ತಲುಪಿ ಬಿಡುತ್ತಾರೆ. ಅವರ ಸಾಹಸ ಮೆಚ್ಚುವಂಥದ್ದೇ. ಅದರೆ ದೇಹದ ಹಲವಾರು ಭಾಗಗಳಲ್ಲಿ ಸುಟ್ಟ ಗಾಯಗಳನ್ನು ಅನುಭವಿಸಿರುವ ಅರ್ಚಕರನ್ನು ಚನ್ನಪಟ್ಟಣ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:  ಮಂಡ್ಯ: ಮೂಕಮಾರಮ್ಮ ಹಬ್ಬದ ಕೊಂಡೋತ್ಸವದಲ್ಲಿ ಕೊಂಡ ಹಾಯುವಾಗ ಬಿದ್ದ ಅರ್ಚಕ; ಸ್ಥಳೀಯರಿಂದ ರಕ್ಷಣೆ

Follow us on

Click on your DTH Provider to Add TV9 Kannada