ದೆಹಲಿಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಕರ್ನಾಟಕದ ಯೋಧನಿಗೆ ಕಾರು ಡಿಕ್ಕಿ; ಸರ್ಕಾರಿ ಗೌರವಗಳೊಂದಿಗೆ ವಿಜಯನಗರದಲ್ಲಿ ಅಂತ್ಯಸಂಸ್ಕಾರ

ದೆಹಲಿಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಕರ್ನಾಟಕದ ಯೋಧನಿಗೆ ಕಾರು ಡಿಕ್ಕಿ; ಸರ್ಕಾರಿ ಗೌರವಗಳೊಂದಿಗೆ ವಿಜಯನಗರದಲ್ಲಿ ಅಂತ್ಯಸಂಸ್ಕಾರ
ದೆಹಲಿಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ಕರ್ನಾಟಕದ ಯೋಧನಿಗೆ ಕಾರು ಡಿಕ್ಕಿ; ಸರ್ಕಾರಿ ಗೌರವಗಳೊಂದಿಗೆ ವಿಜಯನಗರದಲ್ಲಿ ಅಂತ್ಯಸಂಸ್ಕಾರ

ದೆಹಲಿಯಲ್ಲಿ ಬೈಕ್ ಮೇಲೆ ಹೋಗುವಾಗ ಕಾರು ಡಿಕ್ಕಿ ಹೊಡೆದು ದರ್ಘಟನೆ ನಡೆದಿದೆ. ಶ್ರೀನಿವಾಸನ್ ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿರೋ ಹಿನ್ನೆಲೆ ಛತ್ತೀಸ್‌ಘಡದಿಂದ ದೆಹಲಿಗೆ ರಜೆಗೆ ಎಂದು ಬಂದಿದ್ದರು.

TV9kannada Web Team

| Edited By: Ayesha Banu

May 10, 2022 | 7:13 PM

ವಿಜಯನಗರ: ರಸ್ತೆ ಅಪಘಾತದಲ್ಲಿ CRPF ಯೋಧ ಮೃತಪಟ್ಟಿದ್ದಾರೆ. 28 ವರ್ಷಗಳಿಂದ ಭಾರತ ಮಾತೆಯ ಪುತ್ರನಾಗಿ ಸೇವೆ ಸಲ್ಲಿಸುತ್ತಿದ್ದ ಹೆಮ್ಮೆಯ ವೀರಯೋಧ ಕಮಲಾಪುರದ ಶ್ರೀನಿವಾಸನ್ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದಾರೆ. ದೆಹಲಿಯಲ್ಲಿ ಬೈಕ್ ಮೇಲೆ ಹೋಗುವಾಗ ಕಾರು ಡಿಕ್ಕಿ ಹೊಡೆದು ದರ್ಘಟನೆ ನಡೆದಿದೆ. ಶ್ರೀನಿವಾಸನ್ ಅವರ ಕುಟುಂಬ ದೆಹಲಿಯಲ್ಲಿ ನೆಲೆಸಿರೋ ಹಿನ್ನೆಲೆ ಛತ್ತೀಸ್‌ಘಡದಿಂದ ದೆಹಲಿಗೆ ರಜೆಗೆ ಎಂದು ಬಂದಿದ್ದರು. ಈ ವೇಳೆ ದೆಹಲಿಯಲ್ಲಿ ಬೈಕ್ ಮೇಲೆ ಹೋಗುವಾಗ ಕಾರು ಡಿಕ್ಕಿ ಹೊಡೆದು ಶ್ರೀನಿವಾಸನ್ ಕೊನೆಯುಸಿರೆಳೆದಿದ್ದಾರೆ. ಮೃತದೇಹವನ್ನು ತವರು ಊರಾದ ಕಮಲಾಪುರಕ್ಕೆ ತರಲಾಗಿದ್ದು ಬೃಹತ್ ಮೆರವಣಿಗೆ ಮೂಲಕ ಗ್ರಾಮಸ್ಥರು ಯೋಧನಿಗೆ ಗೌರವ ಸಲ್ಲಿಸಿದ್ದಾರೆ. ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ನೇತೃತ್ವದಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು. ತ್ರಿವರ್ಣ ಧ್ವಜದೊಂದಿಗೆ, ವೀರ ಘೋಷಣೆಗಳನ್ನು ಹಾಕುತ್ತಾ ಐದು ಕಿಮೀ ವರೆಗೂ ಮೆರವಣಿಗೆ ಸಾಗಿದೆ. ಯೋಧನಿಗೆ ಅಂತಿಮ ನಮನವನ್ನು ಸಲ್ಲಿಸಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ.

ಖತರ್ನಾಕ್ ಬೈಕ್ ಕಳ್ಳ ಅರೆಸ್ಟ್ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಕಳ್ಳನನ್ನು ಹುಣಸಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೌಡುರು ಗ್ರಾಮದ ತಿರುಪತಿ ರಾಠೋಡ್ ಬಂಧಿತ ಆರೋಪಿ. 15 ರಿಂದ 20 ಸಾವಿರ ರೂಪಾಯಿವರೆಗೆ ಬೈಕ್ ಅಡವಿಟ್ಟು ಸಾಲ ಪಡೆದು ಎಸ್ಕೇಪ್ ಆಗುತ್ತಿದ್ದ. ಒಂದೇ ತಿಂಗಳಲ್ಲೇ ಪೊಲೀಸರು ಬೈಕ್ ಕಳ್ಳನನ್ನು ಪತ್ತೆ ಮಾಡಿದ್ದಾರೆ. ಆರೋಪಿಯಿಂದ 14 ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.

ಅಂದಾಜು 6 ಲಕ್ಷ 50 ಸಾವಿರ ರೂಪಾಯಿ ಬೆಲೆ ಬಾಳುವ ಬೈಕ್ಗಳು ಜಪ್ತಿಯಾಗಿವೆ. ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾರ್ಗದರ್ಶನ, ಸಿಪಿಐ ದೌಲತ್ ಕುರಿ ನೇತೃತ್ವದಲ್ಲಿ ಕಳ್ಳನ ಬಂಧನವಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಬೈಕ್ ಕಳ್ಳತನ ಮಾಡಿ ಖದೀಮ ಪರಾರಿಯಾಗಿದ್ದ. ಬೈಕ್ ಕಳ್ಳತನ ಮಾಡಿ ಪರಾರಿಯಾಗುವ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾದಲ್ಲಿ ಸೆರೆಸಿಕ್ಕ ವಿಡಿಯೋದಿಂದ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ.

ರಾಜ್ಯದ ಇತರೆ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada