ಭ್ರಷ್ಟಾಚಾರದ ಗ್ಯಾಂಗ್ ಲೀಡರ್ ಡಿಕೆ ಶಿವಕುಮಾರ್ Vs ಪಿಎಸ್‌ಐ ನೇಮಕಾತಿ ಅಕ್ರಮ ಕಿಂಗ್‌ಪಿನ್ ಸಚಿವ ಡಾ. ಅಶ್ವತ್ಥ್ ನಾರಾಯಣ – ಮಾತಿನ ಸಮರ
Corruption: ಡಾ.ಅಶ್ವತ್ಥ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಅವನು (ಡಾ.ಅಶ್ವತ್ಥ್) ಬಹಳ ದೊಡ್ಡ ಮನುಷ್ಯನೆಂದು ಕಿಡಿಕಾರಿದ್ದಾರೆ. ಸಚಿವ ಅಶ್ವತ್ಥ್ ನಾರಾಯಣಗೆ ಮಂಪರು ಪರೀಕ್ಷೆ ನಡೆಸಬೇಕಿದೆ. ಪಿಎಸ್‌ಐ ನೇಮಕ ಅಕ್ರಮದಲ್ಲಿ ಬೆಂಗಳೂರು ಜಿಲ್ಲೆಯಲ್ಲಿ ನಡೆದಿರುವ ಪರೀಕ್ಷೆ ಅಕ್ರಮಕ್ಕೆ ಸಚಿವ ಡಾ. ಅಶ್ವತ್ಥ್ ನಾರಾಯಣ ಕಿಂಗ್‌ಪಿನ್ ಎಂದು ಆರೋಪಿಸಿದ್ದಾರೆ.
ಬೆಂಗಳೂರು/ ರಾಮನಗರ: 545 ಪಿಎಸ್‌ಐಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಸಮ್ಮುಖದಲ್ಲಿ (PSI Recruitment Scam) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ನಡುವೆ ಮಾತಿನ ಜಟಾಪಟಿ ತಾರಕಕ್ಕೆ ಏರಿದೆ. ಭ್ರಷ್ಟಾಚಾರದ ಗ್ಯಾಂಗ್ ಲೀಡರ್ ಡಿಕೆ ಶಿವಕುಮಾರ್ (KPCC president DK Shivakumar). ಅವರು ಜೈಲಿಗೆ ಹೋಗಿಬಂದವರು. ಅವರ ಮಾತನ್ನ ಕೇಳಿಕೊಂಡು ದಾಖಲೆ ಇಲ್ಲದೇ ಸಿದ್ದರಾಮಯ್ಯನವರು ಆರೋಪ ಮಾಡಬಾರದು. ದಾಖಲೆ ಇದ್ರೆ ಬಿಡುಗಡೆ ಮಾಡಲಿ ಎಂದ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ (Minister Dr Ashwath Narayan) ಸವಾಲು ಎಸೆದಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಮಾತನಾಡಿರುವ ಡಿಕೆ ಶಿವಕುಮಾರ್, 545 ಪಿಎಸ್‌ಐಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣದಲ್ಲಿ ಬೆಂಗಳೂರು ಜಿಲ್ಲೆಯಲ್ಲಿ ನಡೆದಿರುವ ಪರೀಕ್ಷೆ ಅಕ್ರಮಕ್ಕೆ ಸಚಿವ ಡಾ. ಅಶ್ವತ್ಥ್ ನಾರಾಯಣ ಕಿಂಗ್‌ಪಿನ್ ಎಂದು ಎಂದು ನೇರ ಆರೋಪ ಮಾಡಿದ್ದಾರೆ.
ಡಾ.ಅಶ್ವತ್ಥ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಅವನು (ಡಾ.ಅಶ್ವತ್ಥ್) ಬಹಳ ದೊಡ್ಡ ಮನುಷ್ಯನೆಂದು ಕಿಡಿಕಾರಿದ್ದಾರೆ. ಸಚಿವ ಅಶ್ವತ್ಥ್ ನಾರಾಯಣಗೆ ಮಂಪರು ಪರೀಕ್ಷೆ ನಡೆಸಬೇಕಿದೆ. ಡಾ.ಅಶ್ವತ್ಥ್ ನಾರಾಯಣ ಏನೇನು ಬಿಚ್ಚುತ್ತಾನೋ ಬಿಚ್ಚಲಿ. ಕೆಲವರು ಬಿಚ್ಚಿದ್ದು ನೋಡಿದ್ದೇನೆ, ಇವನೂ ಬಿಚ್ಚಲಿ. ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿ ಭಾರಿ ಅಕ್ರಮ ನಡೆಯುತ್ತಿದೆ. ಹಣ ಪಡೆದು ವಿವಿಗಳಲ್ಲಿ ನೇಮಕಾತಿ ಮಾಡಲಾಗುತ್ತಿದೆ. ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪ ಇಲ್ಲ. ನಾನು ಸಚಿವನಾಗಿದ್ದಾಗ ನೇಮಕಾತಿಯಲ್ಲಿ ಅಕ್ರಮವೆಸಗಿಲ್ಲ. ನಾನು ಸಚಿವನಾಗಿದ್ದಾಗ ಯಾವುದೇ ಸ್ಕ್ಯಾಂ ಮಾಡಿರಲಿಲ್ಲ. ಆದರೆ ಗುಜರಾತ್ ಶಾಸಕರಿಗೆ ಆಶ್ರಯ ನೀಡಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಯಿತು. ಐಟಿ ರೇಡ್ ಮಾಡಿಸಿದರು. ನಾನು ಜೈಲಿನಲ್ಲಿದ್ದಾಗ ಬಿಎಸ್‌ವೈ ಏನು ಹೇಳಿದ್ದರೆಂದು ಗೊತ್ತಿದೆ. ಬಿಜೆಪಿಯವರೂ ತುಂಬಾ ಜನ ಜೈಲಿಗೆ ಹೋಗಿದ್ದಾರೆ ಎಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡಆಲಹಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸೆಮಿ ಕಂಡಕ್ಟರ್ ಘಟಕ ಕೊಡಿಸಿದ್ದಾರೆ; ಅದಕ್ಕೆ ಮೊದಲು ಸಚಿವ ಡಾ. ಅಶ್ವತ್ಥ್‌ಗೆ ಧನ್ಯವಾದ ಹೇಳಿ: ಸಚಿವ ಡಾ.ಅಶ್ವತ್ಥ್ ನಾರಾಯಣ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದು, ರಾಜೀನಾಮೆಗೆ ಒತ್ತಾಯ ಮಾಡುತ್ತಿರುವ ವಿಚಾರವಾಗಿ ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ನಾಯಕರು ಡಾ. ಅಶ್ವತ್ಥ್‌ರನ್ನು ಟಾರ್ಗೆಟ್ ಮಾಡಿದ್ದಾರೆ.
ಇದು ವೈಯಕ್ತಿಕ ದ್ವೇಷದ ರಾಜಕಾರಣ. ಯಾವುದೇ ದಾಖಲೆ ಇಲ್ಲದೆ ಆರೋಪ ಮಾಡುತ್ತಿದ್ದಾರೆ. ತನಿಖೆ ಆಗುತ್ತಿದೆ, ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ. ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿರುವುದು ದ್ವೇಷದ ರಾಜಕಾರಣ. ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರು ಸಾವಿರಾರು ಕೋಟಿ ರೂಪಾಯಿಯ ಸೆಮಿ ಕಂಡಕ್ಟರ್ ಘಟಕವನ್ನು ರಾಜ್ಯಕ್ಕೆ ಕೊಡಿಸಿದ್ದಾರೆ. ಇದಕ್ಕೆ ಮೊದಲು ಸಚಿವ ಡಾ. ಅಶ್ವತ್ಥ್‌ಗೆ ಧನ್ಯವಾದ ಹೇಳಿ. ಅದನ್ನು ಬಿಟ್ಟು ಪಿಎಸ್‌ಐ ಪ್ರಕರಣದಲ್ಲಿ ಸಿಲುಕಿಸಲು ನೋಡಬೇಡಿ. ಯಾರೋ ದರ್ಶನ್ ಗೌಡ ಸಿಕ್ಕಿ ಬಿದ್ದಿದ್ದಾನೆ. ಇವನಿಗೂ, ಸಚಿವರಿಗೆ ಸಂಬಂಧ ಇದೆ ಅಂತ ಎಳೆಯೋದು ಬೇಡ ಎಂದು ಕಿವಿಮಾತು ಹೇಳಿದ್ದಾರೆ.
ಇದನ್ನೂ ಓದಿ: ಪಿಯು ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿ ಮೊಬೈಲ್ ಗೇಮ್ ಗೀಳು ಹತ್ತಿಸಿಕೊಂಡು, ಕಟ್ಟಡದಿಂದ ಹಾರಿ ಅತ್ಮಹತ್ಯೆ ಮಾಡಿಕೊಂಡ
ಇದನ್ನೂ ಓದಿ: Lord Ganesha: ಇಂದು ಬುಧವಾರ ಗಣಪತಿಗೆ ಈ ವಸ್ತುಗಳ ಅರ್ಪಿಸಿದರೆ, ಗಣೇಶ ಸಂತುಷ್ಟನಾಗಿ ಶುಭ ತರುವುದು ಖಚಿತ
Published On - 3:09 pm, Wed, 4 May 22