ಮಂಡ್ಯ: 545 ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮದ ಬಗ್ಗೆ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯಲ್ಲಿ ಕಲಬುರಗಿ ಜೊತೆ ಬೇರೆ ಬೇರೆ ಜಿಲ್ಲೆಗಳಲ್ಲೂ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನು ಈ ಅಕ್ರಮಕ್ಕೆ ಸಂಬಂಧಿಸಿ ಮಂಡ್ಯದ ಮಾಜಿ ಸಚಿವರ ಆಪ್ತನ್ನು ಬಂಧಿಸಲಾಗಿದೆ. ಶರತ್ ರಾಮಣ್ಣ ಎಂಬಾತನನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶರತ್ ಮಂಡ್ಯ ಜಿಲ್ಲೆಯ ನಾಗಮಂಗಲದವನು. ಈತ ಮಾಜಿ ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಸಚಿವ ಎನ್ ಚಲುವರಾಯಸ್ವಾಮಿ (N Narayanaswamy) ಅವರ ಆಪ್ತನಾಗಿದ್ದಾನೆ.
ಶರತ್ ಶ್ರವಣಬೆಳಗೊಳದ ಪಿಎಸ್ಐ ಅಭ್ಯರ್ಥಿ ಪರವಾಗಿ ಪರೀಕ್ಷೆಯಲ್ಲಿ ಅಕ್ರಮವೆಸಗಿರುವ ಆರೋಪ ಕೇಳಿಬಂದಿದೆ. ಸಿಐಡಿ ಅಧಿಕಾರಿಗಳು ಮೊನ್ನೆ ರಾತ್ರಿ ಶರತ್ನ ವಶಕ್ಕೆ ಪಡೆದಿದ್ದಾರೆ. ದಿನದಿಂದ ದಿನಕ್ಕೆ ಆರೋಪಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಿಐಡಿ ಅಧಿಕಾರಿಗಳು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ.
ಅತ್ತ ಪಿಎಸ್ಐ ಅಕ್ರಮದ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಇತ್ತ ಅದೇ ಪಕ್ಷದ ಯುವ ನಾಯಕನನ್ನು ಸಿಐಡಿ ವಶಕ್ಕೆ ಪಡೆಯಲಾಗಿದೆ.
ಪಿಡಬ್ಲೂಡಿ ಪರೀಕ್ಷಾ ಅಕ್ರಮದಲ್ಲೂ ರುದ್ರಗೌಡ ಪಾಟೀಲ್ ಕೈವಾಡ: 545 ಪಿಎಸ್ಐ ನೇಮಕಾತಿಯಲ್ಲಿ ನಡೆದ ಅಕ್ರಮದ ಆರೋಪಿ ರುದ್ರಗೌಡ ಪಾಟೀಲ್ನನ್ನು ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಪಿಡಬ್ಲ್ಯುಡಿ ಜೆಇ ಪರೀಕ್ಷಾ ಅಕ್ರಮ ಸಂಬಂಧ ರುದ್ರಗೌಡನ ವಿಚಾರಣೆ ಮಾಡಲಾಗುತ್ತದೆ. ಬಾಡಿ ವಾರಂಟ್ ಮೇಲೆ ಪೊಲೀಸರು ರುದ್ರಗೌಡನನ್ನು ಕರೆತಂದಿದ್ದಾರೆ. ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ. 2021ರ ಡಿಸೆಂಬರ್ ತಿಂಗಳಲ್ಲಿ ಪಿಡಬ್ಲೂಡಿ ಪರೀಕ್ಷಾ ಅಕ್ರಮ ನಡೆದಿತ್ತು. ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸುವಾಗ ಓರ್ವ ಅಭ್ಯರ್ಥಿ ಮೇಲ್ವಿಚಾರಕರ ಕೈಗೆ ಸಿಕ್ಕಿಬಿದ್ದಿದ್ದ. ಅಭ್ಯರ್ಥಿ ವೀರಣ್ಣಗೌಡ ಚಿಕ್ಕೇಗೌಡನನ್ನು ಪೊಲೀಸರು ಬಂಧಿಸಿದ್ದರು. ಬನಿಯನ್ನಲ್ಲಿ ಬ್ಲೂಟೂತ್ ಇಟ್ಟು ಪರೀಕ್ಷೆ ಬರೆಯುತ್ತಿದ್ದ. ಈ ಪ್ರಕರಣದಲ್ಲೂ ಆರ್.ಡಿ.ಪಾಟೀಲ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ
ಅಸನಿ ಚಂಡಮಾರುತ ಪ್ರಭಾವ: ಮುಂದುವರಿದ ಮಳೆ, ಮಂಡ್ಯ, ತುಮಕೂರಿನಲ್ಲಿ ಧರೆಗುರುಳಿದ ಮರಗಳು