545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ, ಗ್ರಾಮ ಪಂಚಾಯತಿ ಅಧ್ಯಕ್ಷ ಅರೆಸ್ಟ್! ಕಿಂಗ್ಪಿನ್ ರುದ್ರಗೌಡ ಪಾಟೀಲ್ಗೆ ನ್ಯಾಯಾಂಗ ಬಂಧನ
ಪ್ರಕರಣದ ಕಿಂಗ್ಪಿನ್ ಆಗಿರುವ ರುದ್ರಗೌಡ ಪಾಟೀಲ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಿಐಡಿ ಕಸ್ಟಡಿ ಅಂತ್ಯವಾದ ಹಿನ್ನೆಲೆ ಸಿಐಡಿ ಅಧಿಕಾರಿಗಳು ರುದ್ರಗೌಡ ಪಾಟೀಲ್ನ ಇಂದು ಜಡ್ಜ್ ಮುಂದೆ ಹಾಜರುಪಡಿಸಿದ್ದರು.
ಹಾಸನ: 545 ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು (CID Officials) ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ವಿಚಾರಣೆ ವೇಳೆ ರಾಜ್ಯದ ಕೆಲ ಜಿಲ್ಲೆಗಳಲ್ಲೂ ಈ ಅಕ್ರಮ ನಡೆದಿರುವ ಶಂಕೆ ಮೂಡಿದೆ. ಇನ್ನು ಹಗರಣದಲ್ಲಿ ಭಾಗಿಯಾಗಿರುವ ಆರೋಪದಡಿ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನು ಬಂಧಿಸಲಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವಮೂರ್ತಿ ಬಂಧನಕ್ಕೊಳಗಾಗಿದ್ದಾನೆ. ಕೇಶವಮೂರ್ತಿಯನ್ನು ವಿಚಾರಣೆಗೆ ಕರೆಸಿ ಸಿಐಡಿ ಬಂಧಿಸಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬ ಪ್ರಭಾವಿ ವ್ಯಕ್ತಿಗಾಗಿ ಸಿಐಡಿ ಶೋಧಕಾರ್ಯ ಮುಂದುವರಿಸಿದೆ.
ನೇಮಕಾತಿ ಹಗರಣದ ನಂಟು ಹಾಸನ ಜಿಲ್ಲೆಗೂ ಹಬ್ಬಿದೆ. ಸಿಐಡಿ ಜಿಲ್ಲೆಯಲ್ಲಿ ಹಲವರನ್ನು ವಶಕ್ಕೆ ಪಡೆದಿದೆ. ಪಿಎಸ್ಐ ತಾತ್ಕಾಲಿಕ ಪಟ್ಟಿಯಲ್ಲಿ ಹೆಸರಿದ್ದ ವೆಂಕಟೇಶ್ನ ವಶಕ್ಕೆ ಪಡೆಯಲಾಗಿದೆ. ವೆಂಕಟೇಶ್ಬೆಕ್ಕ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಂದ್ರಶೇಖರ್ನ ಪುತ್ರ. ಚಂದ್ರಶೇಖರ್ ಬೆಕ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವಮೂರ್ತಿಯ ಆಪ್ತ. ಕೇಶವಮೂರ್ತಿ ಮೂಲಕ ಪಿಎಸ್ಐ ನೇಮಕಾತಿಯಲ್ಲಿ ಡೀಲ್ ಮಾಡಿ ಪುತ್ರನ ಆಯ್ಕೆ ಮಾಡಿಸಿರುವ ಆರೋಪದಡಿ ವೆಂಕಟೇಶ್ನ ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರಕರಣದ ಕಿಂಗ್ಪಿನ್ ಆಗಿರುವ ರುದ್ರಗೌಡ ಪಾಟೀಲ್ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಿಐಡಿ ಕಸ್ಟಡಿ ಅಂತ್ಯವಾದ ಹಿನ್ನೆಲೆ ಸಿಐಡಿ ಅಧಿಕಾರಿಗಳು ರುದ್ರಗೌಡ ಪಾಟೀಲ್ನ ಇಂದು ಜಡ್ಜ್ ಮುಂದೆ ಹಾಜರುಪಡಿಸಿದ್ದರು.
8 ವಿಶೇಷ ತಂಡಗಳ ರಚನೆ: ಪ್ರಕರಣದ ತನಿಖೆಗೆ ಸಿಐಡಿಯಿಂದ 8 ವಿಶೇಷ ತಂಡಗಳ ರಚನೆಯಾಗಿದೆ. ಎಂಟು ಡಿವೈಎಸ್ಪಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳ ನೇಮಕ ಮಾಡಲಾಗಿದೆ. ಪ್ರತಿ ಡಿವೈಎಸ್ಪಿ ತಂಡದಲ್ಲೂ ಇನ್ಸ್ಪೆಕ್ಟರ್, ಸಿಬ್ಬಂದಿ ಇರಲಿದ್ದಾರೆ. ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಬಗೆದಷ್ಟು ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲೂ ಆತಂಕಕಾರಿ ಅಂಶ ಪತ್ತೆಯಾಗಿದೆ.
ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹಲವು ಕೇಸ್ ದಾಖಲಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ 8 ಡಿವೈಎಸ್ಪಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. 8 ತಂಡಗಳ ಪೈಕಿ ಟೆಕ್ನಿಕಲ್ ಅನಾಲಿಸಿಸ್, ಡಿಜಿಟಲ್ ಇನ್ವೆಸ್ಟಿಗೇಷನ್ಗೆ ಮೀಸಲಿಡಲಾಗಿದೆ. ಎಲ್ಲಿ ಅಕ್ರಮ ನಡೆದಿದೆಯೋ ಆಯಾ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಅನಿವಾರ್ಯ ಇದ್ದಲ್ಲಿ ಸಿಐಡಿ ಹೆಚ್ಚುವರಿ ಸಿಬ್ಬಂದಿ ಬಳಕೆ ಮಾಡಲು ಸೂಚನೆ ನಿಡಲಾಗಿದೆ.
ಇದನ್ನೂ ಓದಿ
Mother’s Day: ಗಂಡ ಅಥವಾ ಮಕ್ಕಳ ಬಾಯಿಂದ ಈ ಮಾತು ಬಂದರೆ ಅವಳ ಜನುಮ ಸಾರ್ಥಕ!
Published On - 12:07 pm, Sun, 8 May 22