AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀ ಬೆರಕಿ ಇದೀಯಾ, ಬೇಲೂರು ಪಾಲಿಟಿಕ್ಸ್ ನನಗೆ ಗೊತ್ತು: ವೇದಿಕೆಯಲ್ಲೇ ಶಾಸಕ ಲಿಂಗೇಶ್​ ಕಾಲೆಳೆದ ಸಿಎಂ ಬೊಮ್ಮಾಯಿ

ಬೇಲೂರು ತಾಲ್ಲೂಕು ಹಳೇಬೀಡಿನಲ್ಲಿ ನಡೆದ ಧಾರ್ಮಿಕ‌ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ಶಾಸಕ ಲಿಂಗೇಶ್ ಅವರನ್ನು ನಗುನಗುತ್ತಲೇ ಕಾಲೆಳೆದರು. ‘

ನೀ ಬೆರಕಿ ಇದೀಯಾ, ಬೇಲೂರು ಪಾಲಿಟಿಕ್ಸ್ ನನಗೆ ಗೊತ್ತು: ವೇದಿಕೆಯಲ್ಲೇ ಶಾಸಕ ಲಿಂಗೇಶ್​ ಕಾಲೆಳೆದ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Nov 24, 2022 | 9:29 AM

Share

ಹಾಸನ: ಬೇಲೂರು ತಾಲ್ಲೂಕು ಹಳೇಬೀಡಿನಲ್ಲಿ ನಡೆದ ಧಾರ್ಮಿಕ‌ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೆಡಿಎಸ್ ಶಾಸಕ ಲಿಂಗೇಶ್ ಅವರನ್ನು ನಗುನಗುತ್ತಲೇ ಕಾಲೆಳೆದರು. ‘ನೀ ಬೆರಕಿ ಇದೀಯಾ’ ಎಂದು ತುಂಬಿದ ಸಭೆಯಲ್ಲಿ ಕುಟುಕಿದರು. ಮೇಲ್ನೋಟಕ್ಕೆ ಸಿಎಂ ಮಾತು ಲಘುವಾಗಿದ್ದಂತೆ ಅನ್ನಿಸಿದರೂ ಆಳದಲ್ಲಿ ಹಲವು ಅರ್ಥಗಳನ್ನು ಧ್ವನಿಸಿದ್ದು ಸುಳ್ಳಲ್ಲ. ಸಭೆಯಲ್ಲಿದ್ದವರೂ ಮೊದಲು ಸಿಎಂ ಮಾತಿಗೆ ನಕ್ಕರೂ, ನಂತರ ಗುಸುಗುಸು ಮಾತನಾಡಿಕೊಂಡರು. ‘ಬೇಲೂರು ರಾಜಕಾರಣ ನನಗೆ ಸಂಪೂರ್ಣ ಗೊತ್ತಿದೆ’ ಎಂದು ಅವರು ತಿಳಿಸಿದರು.

ಹಳೇಬೀಡು ಪುಷ್ಪಗಿರಿ ಮಠದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಣಘಟ್ಟ ನೀರಾವರಿ ಯೋಜನೆಗಾಗಿ ಪುಷ್ಪಗಿರಿ ಮಠದ ಸ್ವಾಮೀಜಿ ಉಪವಾಸ ಕುಳಿತಿದ್ದರು. ರೈತರು, ಸ್ವಾಮೀಜಿಗಳು, ರಾಜಕೀಯ ಪಕ್ಷಗಳ ನಾಯಕರು ಹೋರಾಟ ಮಾಡಿದ್ದರು. ಈ ಹೋರಾಟದಲ್ಲಿ ಲಿಂಗೇಶ್ ನೀನು ಇದ್ಯಾ? ಆಗಿನ್ನೂ ನೀನು ಎಂಎಲ್​ಎ ಆಗಿರಲಿಲ್ಲ. ಗೊತ್ತಿದೆ ನನಗೆ, ಆ ಹೋರಾಟವೇ ನಿನ್ನ ಎಂಎಲ್ಎ ಮಾಡೋಕೆ ಕಾರಣವಾಯಿತು’ ಎಂದು ಹೇಳಿದರು.

‘ನಮ್ಮ ಲಿಂಗೇಶಣ್ಣ ಬಹಳ ಬುದ್ದಿವಂತ ಇದ್ದಾನೆ. ನಾಟಕದಲ್ಲಿ ಹೆಂಗೆಂಗೆ ಪಾತ್ರ ಇರುತ್ತೆ, ಹಂಗಂಗೆ ಡೈಲಾಗ್ ಇರುತ್ವೆ. ಅದು ಹೇಗೆ ಮಾಡಿದರೂ ಜನರ ಹಿತದೃಷ್ಟಿ, ರೈತರ ಹಿತದೃಷ್ಟಿ ಇರುತ್ತೆ. ಹೀಗಾಗಿ ನಾವು ಯಾವತ್ತಿದ್ದರೂ ಅವನ ಒಳ್ಳೆಯ ಕೆಲಸಕ್ಕೆ ಬೆಂಬಲ ಕೊಡ್ತೇವೆ. ರಣಘಟ್ಟ ನೀರಾವರಿ ಯೋಜನೆ ಹೋರಾಟಕ್ಕೆ ಬಂದಾಗಲೇ ನಾನು ಹೇಳಿದ್ದೆ. ನಾನು ಆಗ ವಿರೋಧ ಪಕ್ಷದಲ್ಲಿದ್ದೆ. ಯಾವುದೇ ಸರ್ಕಾರವಿದ್ದರೂ ಆಗಲೇಬೇಕು ಎಂದು ಹೇಳಿದ್ದೆ. ನಂತರ ನನಗೆ ಸಿಕ್ಕ ಪ್ರಥಮ ಅವಕಾಶದಲ್ಲಿ ನಮ್ಮ ನಾಯಕರಾದ ಯಡಿಯೂರಪ್ಪ ಅವರಿಗೆ ಹೇಳಿದೆ. ಇವ್ನೇ ಲಿಂಗೇಶ್ ಬಂದಿದ್ದ. ಯಡಿಯೂರಪ್ಪ ಅವರಿಗೆ ಹೇಳಣ್ಣ. ಅವರ ಮನಸ್ಸಿಗೆ ತಗೋತಿಲ್ಲ ಅಂತಾ ಹೇಳಿದ್ದ. ನಾ ಹೋಗಿ ಕೂತ್ಕೊಂಡು ಇದು ಆಗಲೇಬೇಕು. ಆ ಭಾಗದ ಜನರ ಹಲವಾರು ವರ್ಷದ ಬರ ನೀಗಿಸಬೇಕಾದ್ರೆ ಇದಾಗಲೇಬೇಕು ಎಂದು ಒತ್ತಾಯ ಮಾಡಿದ್ದೆ’ ಎಂದು ನೆನಪಿಸಿಕೊಂಡರು.

‘ಲಿಂಗೇಶ್​ ಆಗ ಅವರಿಗೂ ಸನ್ಮಾನ ಮಾಡಿದ, ನನಗೂ ಸನ್ಮಾನ ಮಾಡಿದ’ ಎಂದ ಅವರ ನಾಟಕೀಯವಾಗಿ ಲಿಂಗೇಶ್ ಅವರ ಕಡೆಗೆ ನೋಡಿದರು. ‘ಅದೆಲ್ಲಾ ಮಾಡ್ತಿಯಾ ನೀನು’ ಎಂದರು. ಮಧ್ಯ ಪ್ರವೇಶಿಸಿ ಮಾತನಾಡಿದ ಲಿಂಗೇಶ್, ‘ನಾನು ನಿಮಗೂ ಸನ್ಮಾನ ಮಾಡಿದ್ದೆ’ ಎಂದರು. ‘ಹೌದು, ನನಗೂ ನೀ ಸನ್ಮಾನ ಮಾಡಿದ್ದಿಯಾ ಅಂತ ಹೇಳಿದ್ನಲ್ಲ. ಬಹಳ ಬೆರಿಕಿ ಇದಿಯಾ ನೀ’ ಎಂದು ತಮ್ಮದೇ ದಾಟಿಯಲ್ಲಿ ಕುಟುಕಿದರು. ಸಿಎಂ ಮಾತಿನಿಂದ ಗಲಿಬಿಲಿಯಾದ ಲಿಂಗೇಶ್, ‘ಅದು ನಿಯತ್ತು ಅಣ್ಣ’ ಎಂದರು. ‘ನಿಯತ್ತು ಯಾವುದು, ಬೆರಿಕಿ ಯಾವುದು ಅನ್ನೋ ವ್ಯತ್ಯಾಸ ನನಗೆ ಗೊತ್ತಿದೆ’ ಎಂದು ಮತ್ತೊಮ್ಮೆ ಸಿಎಂ ಶಾಸಕನ ಕಾಲೆಳೆದರು.

‘ಮೊದಲು ಹಳೇಬೀಡು-ಮಾದಿಹಳ್ಳಿ ಯೋಜನೆಗೆ ಮಂಜೂರಾತಿ ಕೊಟ್ಟಿದ್ದೆವು. 20 ಕೆರೆಗಳಿಗೆ ನೀರು ತುಂಬಿಸಲು ದುಡ್ಡು ಬಿಡುಗಡೆ ಮಾಡಿದ್ದೆವು. ತಾಂತ್ರಿಕ ತೊಂದರೆಯು ಈಗ ನೀಗಿದ್ದು, 20 ಕೆರೆಗಳು ತುಂಬಿವೆ. ಆ ಯೋಜನೆಯೂ ಕೂಡ ಬಿಜೆಪಿ ಸರ್ಕಾರ ಇದ್ದಾಗಲೇ ಆಗಿದ್ದು. ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪನವರು ಸಿಎಂ, ನಾನು ನೀರಾವರಿ ಸಚಿವನಾಗಿದ್ದಾಗ ಅದಕ್ಕೆ ಮಂಜೂರಾತಿ ಕೊಟ್ಟಿದ್ದೆವು. ರಣಘಟ್ಟ ಯೋಜನೆಗೂ ಬಿಜೆಪಿ ಸರ್ಕಾರ ಇದ್ದಾಗಲೇ ಮಂಜೂರಾತಿ ಸಿಕ್ಕಿದ್ದು’ ಎಂದರು.

ಮುಂದಿನ ತಿಂಗಳು ಹೊಯ್ಸಳೋತ್ಸವ

ಹೊಯ್ಸಳರ ನಾಡು ಹಾಸನದಲ್ಲಿ ಮತ್ತೆ ಹೊಯ್ಸಳೋತ್ಸವ ಆಚರಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ಮುಂದಿನ ತಿಂಗಳೇ ಕಾರ್ಯಕ್ರಮ ನಡೆಯಲಿದೆ. ಹಾಸನವು ಹೊಯ್ಸಳರು ಆಡಳಿತ ಮಾಡಿರುವ ನಾಡು. ಬೇಲೂರು ಮತ್ತು ಹಳೇಬೀಡು ಜಿಲ್ಲೆಯನ್ನು ವಿಶ್ವವಿಖ್ಯಾತವಾಗಿಸಿವೆ. ಹಾಗಾಗಿ ತಕ್ಷಣದ ಪ್ರವಾಸಿ ಸರ್ಕೀಟ್​ನಲ್ಲಿ ಇವೆರಡನ್ನು ಸೇರಿಸಿಕೊಂಡಿದ್ದೇನೆ. ಕೆಲವೇ ದಿನಗಳಲ್ಲಿ ಈ ತಾಣಗಳು ಯುನೆಸ್ಕೋ ಮಾನ್ಯತೆ ಹೊಂದಿದ ಜಗತ್ಪ್ರಸಿದ್ಧ ತಾಣ ಆಗಲಿದೆ. ಬಹಳ ವರ್ಷಗಳಿಂದ‌ ಇಲ್ಲಿ ಹೊಯ್ಸಳೋತ್ಸವ ಆಗಿಲ್ಲ. ಮುಂದಿನ ತಿಂಗಳು ಅದ್ಭುತ ಹೊಯ್ಸಳೋತ್ಸವವನ್ನು ನಮ್ಮ ಸರ್ಕಾರ ನಡೆಸಿಕೊಡಲಿದೆ ಎಂದು ಘೋಷಿಸಿದರು.

Published On - 9:29 am, Thu, 24 November 22

‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
‘ಬಂದೂಕ್’ ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ ನಟಿ ಶ್ವೇತಾ ಪ್ರಸಾದ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ರಿಸೆಪ್ಷನಿಸ್ಟ್​​ಗೆ ಒದ್ದು, ಕೂದಲು ಎಳೆದಾಡಿದ ರೋಗಿಯ ವಿಡಿಯೋ ವೈರಲ್
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ