ಲೂಟಿ ಹೊಡೆದಿದ್ದಕ್ಕೇ ಅವರನ್ನು ಜನರು ತಿರಸ್ಕರಿಸಿದ್ದು: ಪ್ರಲ್ಹಾದ್​ ಜೋಶಿ ಹೇಳಿಕೆಗೆ ಸಿದ್ದರಾಮಯ್ಯ ಕೌಂಟರ್

| Updated By: ಗಂಗಾಧರ​ ಬ. ಸಾಬೋಜಿ

Updated on: Feb 24, 2024 | 3:52 PM

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಿಂದೂ ದೇಗುಲಗಳನ್ನ ಲೂಟಿ ಹೊಡೆಯುತ್ತಿದ್ದಾರೆ’ ವಿಚಾರವಾಗಿ ಮಾತನಾಡಿದ ಅವರು ಪ್ರಲ್ಹಾದ್​ ಜೋಶಿಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಲೂಟಿ ಹೊಡೆದಿದ್ದಕ್ಕೇ ಅವರನ್ನ ಜನರ ವಿಧಾನಸಭೆ ಚುನಾವಣೆಯಲ್ಲಿ  ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ. ಹಿಂದೂಗಳ ದೇವಸ್ಥಾನಕ್ಕೆ ಮಾತ್ರ ಬಳಸಲಾಗುತ್ತದೆ. ಬೇರೆ ಧರ್ಮದ ದೇವಾಲಯಗಳಿಗೆ ಉಪಯೋಗಿಸಲ್ಲ ಎಂದಿದ್ದಾರೆ.

ಲೂಟಿ ಹೊಡೆದಿದ್ದಕ್ಕೇ ಅವರನ್ನು ಜನರು ತಿರಸ್ಕರಿಸಿದ್ದು: ಪ್ರಲ್ಹಾದ್​ ಜೋಶಿ ಹೇಳಿಕೆಗೆ ಸಿದ್ದರಾಮಯ್ಯ ಕೌಂಟರ್
ಸಿಎಂ ಸಿದ್ದರಾಮಯ್ಯ, ಪ್ರಲ್ಹಾದ್​ ಜೋಶಿ
Follow us on

ಹಾಸನ, ಫೆಬ್ರವರಿ 24: ಲೂಟಿ ಹೊಡೆದಿದ್ದಕ್ಕೇ ಅವರನ್ನ ಜನರ ವಿಧಾನಸಭೆ ಚುನಾವಣೆಯಲ್ಲಿ  ತಿರಸ್ಕರಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಗೆ ಕೌಂಟರ್​ ಹೊಡೆದಿದ್ದಾರೆ. ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರದಲ್ಲಿ ಮಾಧ್ಯಮದವರೊಂದಿಗೆ ‘ಹಿಂದೂ ದೇಗುಲಗಳನ್ನ ಲೂಟಿ ಹೊಡೆಯುತ್ತಿದ್ದಾರೆ’ ವಿಚಾರವಾಗಿ ಮಾತನಾಡಿದ ಅವರು ಪ್ರಲ್ಹಾದ್​ ಜೋಶಿಗೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಧಾರ್ಮಿಕ ದತ್ತಿ ಕಾಯ್ದೆ ಅಂಗೀಕಾರವಾಗದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೂಗಳ ದೇವಸ್ಥಾನಕ್ಕೆ ಮಾತ್ರ ಬಳಸಲಾಗುತ್ತದೆ. ಬೇರೆ ಧರ್ಮದ ದೇವಾಲಯಗಳಿಗೆ ಉಪಯೋಗಿಸಲ್ಲ. ಅದಕ್ಕೆ ಈ‌ ವಿಧೇಯಕ ತಂದರೆ ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿಗರ ವಿರುದ್ಧ ಹರಿಹಾಯ್ದಿದ್ದಾರೆ.

ಇಂತಹ ಹೇಸಿಗೆ ಸರ್ಕಾರ ನೋಡಿಲ್ಲ ಎಂದ ಸಿದ್ದರಾಮಯ್ಯ 

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​, ರಾಹುಲ್ ಗಾಂಧಿಗೆ ಸಮನ್ಸ್ ವಿಚಾರವಾಗಿ ಮಾತನಾಡಿದ ಅವರು, ನಾವು ಕಾನೂನು ಹೋರಾಟ ಮಾಡುತ್ತೇವೆ. ನಮ್ಮ ಲಾಯರ್‌ಗಳು ಸರಿಯಾದ ಉತ್ತರ ಕೊಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಿದರೆ ತಪ್ಪಲ್ಲ. ಜಾಹೀರಾತು ಕೊಟ್ಟರೆ ಮಾನನಷ್ಟ ಮೊಕದ್ದಮೆ ಆಗಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಇಂತಹ ಹೇಸಿಗೆ ಸರ್ಕಾರ ನೋಡಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಅರವಿಂದ ಬೆಲ್ಲದ್

ಸಿದ್ರಾಮುಲ್ಲಾಖಾನ್ ಎಂಬ ಸಂಸದ ಅನಂತ್‌ಕುಮಾರ್ ಹೆಗ್ದೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಯಾರಾದರೂ ಸಂಬಳ ಕೊಟ್ಟಿಲ್ಲ ಅಂತ ಹೇಳಿದ್ದಾರಾ? ಯಾರಾದರೂ ಈ ಸರ್ಕಾರದಲ್ಲಿ ಸಂಬಳ ಕೊಟ್ಟಿಲ್ಲ ಅಂತ ಹೇಳಿದ್ದಾರಾ? ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಾವಣೆ ಮಾಡಲು ಬಂದವರು. ಲೋಕಸಭಾ ಸದಸ್ಯರಾಗಲು ಲಾಯಕ್ಕಾ? ಅಂತಹವರು ಇಂತಹ ಹೇಳಿಕೆ ಕೊಟ್ಟರೆ ಯಾವ ಕಿಮ್ಮತ್ತು ಇರುತ್ತದೆ ಎಂದು ಕಿಡಿಕಾರಿದ್ದಾರೆ.

ಮಿನಿಸ್ಟರ್ ಆಗಿದ್ದಾಗ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದಿದ್ದರು. ಅಬ್ರಾಹಂ ಲಿಂಕನ್ ಏನು ಹೇಳಿದ್ದರು. ಸಂಸತ್ತು ಮತ್ತು ನ್ಯಾಯಾಲಯಗಳಿಗೆ ಜನರೇ ಮಾಲೀಕರು. ಜನರು ಸಂವಿಧಾನ ಕಿತ್ತು ಒಗೆಯಿರಿ ಎಂದು ಹೇಳುವುದಲ್ಲ. ಜನರು ಹೇಳಬೇಕಿರುವುದು ಯಾರು ಸಂವಿಧಾನವನ್ನು ತಿರುಚುತ್ತಾರೆ ಅವರನ್ನೇ ಕಿತ್ತು ಎಸೆಯಿರಿ ಎಂದು ಹೇಳಬೇಕು.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ-ಡಿಕೆ ಶಿವಕುಮಾರ್​​

ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಲೋಕಸಭಾ ಸದಸ್ಯರಾಗಲು ಲಾಯಕ್ಕಾ? ಕಾಮಾಲೆ ರೋಗದವರಿಗೆ ಎಲ್ಲಾ ಹಳದಿಯಾಗಿ ಕಾಣುತ್ತೆ, ಅಂತಹವರಿಗೆ ಏನು ಮಾಡಲು ಆಗುತ್ತೆ. ಅವರಿಗೆ ಕಾಮಾಲೆ ರೋಗ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತ ಮಾತಾಡುವುದು. ಮುಸಲ್ಮಾರನ್ನು ವಿರೋಧ ಮಾಡುವುದು. ನನಗೆ ಏಕೆ ಸಿದ್ರಾಮುಲ್ಲಾಖಾನ್ ಅಂತಾ ಕರೆಯುತ್ತಾರೆ. ಅವರು ಅಲ್ಪಸಂಖ್ಯಾತರ ಧರ್ಮಕ್ಕೆ ವಿರುದ್ಧವಾಗಿರುವವರು. ಅದಕ್ಕೆ ಹಾಗೆ ಕರೆಯುತ್ತಾರೆ ಅಷ್ಟೇ ಎಂದು ಕಿಡಿಕಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.