Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂವಿಧಾನ ಬದಲಾಯಿಸಲು ಅಧಿಕಾರಕ್ಕೆ ಬಂದಿದ್ದು ಅನ್ನುವ ಅನಂತಕುಮಾರ ಹೆಗಡೆ ಸಂಸದನಾಗಲು ಲಾಯಕ್ಕಾ? ಸಿದ್ದರಾಮಯ್ಯ

ಸಂವಿಧಾನ ಬದಲಾಯಿಸಲು ಅಧಿಕಾರಕ್ಕೆ ಬಂದಿದ್ದು ಅನ್ನುವ ಅನಂತಕುಮಾರ ಹೆಗಡೆ ಸಂಸದನಾಗಲು ಲಾಯಕ್ಕಾ? ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 24, 2024 | 2:55 PM

ಸರ್ಕಾರ ನೌಕರರಿಗೆ ಸಂಬಳ ನೀಡಲು ಬೊಕ್ಕಸದಲ್ಲಿ ಹಣವಿಲ್ಲ ಎಂದು ಹೆಗಡೆ ಯಾವ ಆಧಾರದಲ್ಲಿ ಹೇಳುತ್ತಾರೆ? ಸರ್ಕಾರೀ ನೌಕರರಲ್ಲಿ ಯಾರಾದರೂ ಸಂಬಳ ಕೊಟ್ಟಿಲ್ಲ ಅಂತ ಹೇಳಿದ್ದಾರಾ? ಹೆಗಡೆಯವರು ನಾವು ಅಧಿಕಾರಕ್ಕೆ ಬಂದರೋದೆ ಸಂವಿಧಾನ ಬದಲಾಯಿಸಲು ಅಂತ ಹೇಳಿದವರು, ಇನ್ನು ಅವರ ಮಾತಿಗೆ ಎಲ್ಲಿಂದ ಕಿಮ್ಮತ್ತು ಬಂದೀತು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಹಾಸನ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಿಜೆಪಿಯ ಅನಂತಕುಮಾರ್ ಹೆಗಡೆ (Ananth Kumar Hegde) ಸಂಸದನಾಗಲು ನಾಲಾಯಕ್ ಎಂದು ಹೇಳಿದರು. ಸರ್ಕಾರ ನೌಕರರಿಗೆ (government servants) ಸಂಬಳ ನೀಡಲು ಬೊಕ್ಕಸದಲ್ಲಿ ಹಣವಿಲ್ಲ ಎಂದು ಹೆಗಡೆ ಯಾವ ಆಧಾರದಲ್ಲಿ ಹೇಳುತ್ತಾರೆ? ಸರ್ಕಾರೀ ನೌಕರರಲ್ಲಿ ಯಾರಾದರೂ ಸಂಬಳ ಕೊಟ್ಟಿಲ್ಲ ಅಂತ ಹೇಳಿದ್ದಾರಾ? ಹೆಗಡೆಯವರು ನಾವು ಅಧಿಕಾರಕ್ಕೆ ಬಂದರೋದೆ ಸಂವಿಧಾನ ಬದಲಾಯಿಸಲು ಅಂತ ಹೇಳಿದವರು, ಇನ್ನು ಅವರ ಮಾತಿಗೆ ಎಲ್ಲಿಂದ ಕಿಮ್ಮತ್ತು ಬಂದೀತು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಯುಎಸ್ ಹಿಂದಿನ ಅಧ್ಯಕ್ಷ ದಿವಂಗತ ಅಬ್ರಹಾಂ ಲಿಂಕನ್ ಹೇಳಿದ ಮಾತನ್ನು ಉಲ್ಲೆಖಿಸಿದ ಅವರು, ಸಂಸತ್ತು ಮತ್ತು ನ್ಯಾಯಾಂಗ ಯಾವತ್ತಿಗೂ ಜನರ ಸೊತ್ತುಗಳು, ಅವರೇ ಅವುಗಳ ಮಾಲೀಕರು, ಸಂವಿಧಾನ ತಿರುಚಬೇಕೆನ್ನುವವರನ್ನು ಕಿತ್ತೊಗೆಯಬೇಕು ಎಂದು ಲಿಂಕನ್ ಹೇಳಿದ್ದರು ಅಂತ ಸಿದ್ದರಾಮಯ್ಯ ಹೇಳಿದರು. ಸಂವಿಧಾನ ಬಗ್ಗೆ ಗೌರವ ಇಲ್ಲದವರು ಸಂಸತ್ ಸದಸ್ಯನಾಗಲು ಲಾಯಕ್ಕಾ ಎಂದು ಸಿಎಂ ಪ್ರಶ್ನಿಸಿದರು. ಹೆಗಡೆಗೆ ಕಾಮಾಲೆ ರೋಗ, ಅವರಿಗೆ ಕಾಣೋದೆಲ್ಲ ಹಳದಿಯೇ! ಅವರು ಅಲ್ಪಸಂಖ್ಯಾತರ ಧರ್ಮಗಳಿಗೆ ವಿರುದ್ಧವಾಗಿರುವುದರಿಂದ ತಮ್ಮನ್ನು ಸಿದ್ರಾಮುಲ್ಲಾ ಖಾನ್ ಅಂತ ಕರೆಯುತ್ತ್ತಾರೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ