ಶಿವಮೊಗ್ಗ: ಫಲಾನುಭವಿಗಳ ಸಮಾವೇಶದಲ್ಲಿ ಕವಿಯಾಗಿ ಸರ್ಕಾರದ ಸಾಧನೆ ಹೇಳಿಕೊಂಡ ಡಿಕೆ ಶಿವಕುಮಾರ್!

ಶಿವಮೊಗ್ಗ: ಫಲಾನುಭವಿಗಳ ಸಮಾವೇಶದಲ್ಲಿ ಕವಿಯಾಗಿ ಸರ್ಕಾರದ ಸಾಧನೆ ಹೇಳಿಕೊಂಡ ಡಿಕೆ ಶಿವಕುಮಾರ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 24, 2024 | 5:29 PM

ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮುಂದಿನ ನಾಲ್ಕು ವರ್ಷಗಳವರೆಗೆ ಮುಂದುವರಿಯುತ್ತವೆ ಮತ್ತು ಫಲಾನುಭವಿ ತಾಯಂದಿರ ಆಶೀರ್ವಾದ ತಮ್ಮ ಮೇಲಿದ್ದರೆ ಮತ್ತೊಂದು ಅವಧಿಯ 5 ವರ್ಷಗಳಿಗೂ ಮುಂದುವರಿಯುತ್ತವೆ ಎಂದು ಹೇಳಿದರು.

ಶಿವಮೊಗ್ಗ: ಮಲ್ನಾಡು ಶಿವಮೊಗ್ಗ ನೆಲದ ಗುಣವೇ ಹೀಗಿರಬಹುದು ಮಾರಾಯ್ರೇ. ಇಲ್ಲಿಗೆ ಬರುವ ರಾಜಕಾರಣಿಗಳು ಕವಿಗಳಾಗಿ (poets) ಬಿಡುತ್ತಾರೆ. ಜನರಿಗೆ ನೀಡಿದ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ ಬಳಿಕ ಹೆಮ್ಮೆಯಿಂದ ಬೀಗುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ನಗರದಲ್ಲಿಂದು ಸರ್ಕಾರದ 5 ಗ್ಯಾರಂಟಿ ಯೋಜನೆ ಫಲಾನುಭವಿಗಳ (guarantee scheme beneficiaries) ಸಮಾವೇಶದಲ್ಲಿ ಭಾಗವಹಿಸಿ ಮಾತಾಡುವಾಗ ಕವಿ ಕೂಡ ಆದರು! ಅವರ ಕವನನದ ಸಾಲುಗಳು: ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು, ಅದನ್ನು ನೋಡಿ ಅರಳಿದ ಕಮಲ ಉದುರಿ ಹೋಯಿತು, ತೆನೆ ಹೊತ್ತ ಮಹಿಳೆ ತೆನೆ ಎಸೆದುಬಿಟ್ಟಳು ಎಂದು ಹೇಳಿ ಕುಮಾರಣ್ಣ ಕಮಲದ ಹಿಂದೆ ಹೋಗಿದ್ದಾರೆ, ಗ್ಯಾರಂಟಿಗಳಿಂದ ಕರ್ನಾಟಕ ಪ್ರಬುದ್ಧವಾಯಿತುಮ ಕರ್ನಾಟಕ ಸಮೃದ್ಧವಾಯಿತು ಅಂದರು. ತಮ್ಮ ಸರ್ಕಾರದ ಬಗ್ಗೆ ಮಾತಾಡಿದ ಶಿವಕುಮಾರ್, ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 141 ಸೀಟು ಬರುತ್ತವೆ ಅಂದಿದ್ದೆ, ಅದರೆ ಸ್ವಲ್ಪ ಹೆಚ್ಚು ಕಡಿಮೆಯಾಯಿತು ಎಂದರು. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ರಚನೆಯಾದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮುಂದಿನ ನಾಲ್ಕು ವರ್ಷಗಳವರೆಗೆ ಮುಂದುವರಿಯುತ್ತವೆ ಮತ್ತು ಫಲಾನುಭವಿ ತಾಯಂದಿರ ಆಶೀರ್ವಾದ ತಮ್ಮ ಮೇಲಿದ್ದರೆ ಮತ್ತೊಂದು ಅವಧಿಯ 5 ವರ್ಷಗಳಿಗೂ ಮುಂದುವರಿಯುತ್ತವೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ