ಆನೆ ದಾಳಿಗೆ ಬಲಿಯಾದ ಕುಟುಂಬಕ್ಕೆ ಪರಿಹಾರ ಹಣ 15 ಲಕ್ಷ ರೂ.ಗೆ ಹೆಚ್ಚಳ, ಸರ್ಕಾರ ನೌಕರಿ ಬಗ್ಗೆ ಚರ್ಚೆ: ಸಿಎಂ ಭರವಸೆ
ಆನೆ ದಾಳಿಗೆ ಬಲಿಯಾದ ಕುಟುಂಬಕ್ಕೆ ಪರಿಹಾರದ ಹಣ 15 ಲಕ್ಷ ರೂ.ಗೆ ಹೆಚ್ಚಿಸಿದ್ದು, ಸರ್ಕಾರಿ ಹುದ್ದೆ ನೀಡುವ ಕುರಿತು ಚರ್ಚೆ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾಸನ: ಚಿಕ್ಕಮಗಳೂರು ಹಾಗೂ ಹಾಸನ ಸೇರಿದಂತೆ ಇತರೆ ಕೆಲ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇನ್ನು ಈ ಬಗ್ಗೆ ಹಾಸನದ ಹಳೇಬೀಡಿನಲ್ಲಿ ಇಂದು(ನ.23) ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆನೆ ದಾಳಿಗೆ ಬಲಿಯಾದವರಿಗೆ ಪರಿಹಾರ ಹಣ 15 ಲಕ್ಷಕ್ಕೆ ಏರಿಕೆ ಮಾಡಿದ್ದೇವೆ. ಮೃತರ ಕುಟುಂಬಕ್ಕೆ ಉದ್ಯೋಗ ಕೊಡುವ ಬಗ್ಗೆ ಕೂಡ ಗಂಭೀರವಾಗಿ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯದ 4 ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ತಡೆಗಟ್ಟಲು ಟಾಸ್ಕ್ ಫೋರ್ಸ್ ರಚಿಸಿದ ಸರ್ಕಾರ
ಕಾಡಾನೆ ಹಾವಳಿ ವಿಚಾರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಕಾಡಾನೆ ಸ್ಥಳಾಂತರ ಮಾಡುವುದಕ್ಕಾಗಿ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ. ಕಾಡಾನೆ ದಾಳಿಗೆ ಬಲಿಯಾಗುವ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡುವ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುತ್ತೇವೆ. ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಬರಗಾಲದಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ ಪ್ರಾಣಿಗಳು ಹಿಂದಿರುಗಿಲ್ಲ. ಗುಂಪಿನಲ್ಲಿರುವ ಆನೆಗಳನ್ನು ಚದುರಿಸುವುದು ಕಷ್ಟ. ಆನೆಗಳು ಹೆಚ್ಚಾಗಿರುವ ಕಡೆ ನೂರಾರು ಸಿಬ್ಬಂದಿ ಸೇರಿ ಹಿಮ್ಮೆಟ್ಟಿಸಬೇಕು. ಅದಕ್ಕೆ ಬೇಕಾದಷ್ಟು ಹಣ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದರು.
ಪ್ರಸಕ್ತ ವರ್ಷದ ಬಜೆಟ್ನಲ್ಲಿ ನೂರು ಕೋಟಿ ಹಣ ಮೀಸಲಿಟ್ಟಿದ್ದೇವೆ. ಬಂಡೀಪುರದಲ್ಲಿ ಹೊಸ ರೀತಿಯ ಫೆನ್ಸಿಂಗ್ ಟ್ರಯಲ್ ಮಾಡಿದ್ದೇವೆ. ಗುಂಪಿನಲ್ಲಿ ಇರೋ ಆನೆ ಚದುರಿಸೋದು ಕಷ್ಟ. ಆದರೂ ಈ ವರ್ಷ16 ಆನೆಗಳನ್ನ ಹಿಮ್ಮೆಟ್ಟಿಸಲಾಗಿದೆ. ಮೊನ್ನೆ ನಾನು ಸಭೆ ಮಾಡಿ ಕಾರ್ಯಪಡೆ ರಚನೆ ಮಾಡಿದ್ದೇವೆ. ಯಾವುದೋ ಘಟನೆ ನಡೆದಾಗ ಕಾರ್ಯಾಚರಣೆ ಮಾಡೋದು ಸರಿಯಲ್ಲ ಎಂದು ನನಗನ್ನಿಸುತ್ತೆ. ನಿರಂತರವಾಗಿ ಕಾರ್ಯಾಚರಣೆ ನಡೆದಾಗ ನಿಯಂತ್ರಣ ಸಾದ್ಯ. ಹಾಗಾಗಿ ವಿಶೇಷ ಕಾರ್ಯಪಡೆ ಮಾಡಬೇಕೆಂದು ಮಾಡಿದ್ದೇವೆ. ಅದಕ್ಕಾಗಿ ಯೇ ವಿಶೇಷ ತಂಡ ಇರುತ್ತೆ, ತರಬೇತಿ ಕೊಡುತ್ತೇವೆ. ವಾಹನ ಎಲ್ಲ ಕೊಟ್ಟು ಕಂಟ್ರೋಲ್ ರೂಂಮ್ ಕೂಡ ಮಾಡುತ್ತೇವೆ ಎಂದು ತಿಳಿಸಿದರು.
ದಿನವಹಿ ಕಾರ್ಯಾಚರಣೆ ಮಾಡಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಆನೆಗಳು ಹೆಚ್ಚಾಗಿ ಇರುವ ಕಡೆ ನೂರಾರು ಸಿಬ್ಬಂದಿ ಸೇರಿ ಆನೆಗಳನ್ನು ಹಿಮ್ಮೆಟ್ಟಿಸಲು ಸೂಚನೆ ನೀಡಿದ್ದೇನೆ. ಅದಕ್ಕೆ ಬೇಕಾದಷ್ಟು ಹಣ ಕೊಡಲು ಕೂಡ ಸರ್ಕಾರ ಸಿದ್ದವಿದೆ. ಈ ವರ್ಷದ ಬಕೆಟ್ ನಲ್ಲಿ ನೂರು ಕೋಟಿ ಇಟ್ಟಿದ್ದೆವು. ಬಂಡೀಪುರದಲ್ಲಿ ಹೊಸ ರೀತಿಯ ಫೆನ್ಸಿಂಗ್ ಅನ್ನು ಟ್ರಯಲ್ ಮಾಡಿದ್ದೇವೆ. ಅದನ್ನು ಇಲ್ಲಿಗೂ ಮಾಡೋ ಪ್ರಯತ್ನ ಮಾಡುತ್ತೇವೆ. ಕಾಡಾನೆಗಳ ಸ್ಥಳಾಂತರ ಮಾಡುವ ಸಲುವಾಗಿಯೇ ವಿಶೇಷ ಕಾರ್ಯಪಡೆ ಮಾಡಿದ್ದೇವೆ ಎಂದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:04 pm, Wed, 23 November 22