ಹಾಸನ: ಸಿದ್ದರಾಮಯ್ಯನವರು (Siddramaiah) ದಡ್ಡರಲ್ಲ, ಬಹಳ ಬುದ್ಧಿವಂತರು. ಮಾಜಿ ಸಿಎಂ ಸಿದ್ದರಾಮಯ್ಯರದ್ದು ಓಲೈಕೆ ರಾಜಕಾರಣ.ಇಡಿಗಂಟಾಗಿ ಯಾವ ವೋಟ್ ಸಿಗುತ್ತದೆ ಎಂದು ಅವರಿಗೆ ಗೊತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ಟಿಪ್ಪು ವ್ಯತ್ಯಾಸ ಬಗ್ಗೆ ಅವರಿಗೆ ಗೊತ್ತಿದೆ. ಆದರೂ ಅವರ ಬಾಯಲ್ಲಿ ಟಿಪ್ಪು ಸುಲ್ತಾನ್ ಹೆಸರು ಬರುತ್ತೆ. ವೋಟ್ ಬ್ಯಾಂಕ್‌ನ ದುರಾಸೆಗೆ ಅವರು ಸುಳ್ಳು ಹೇಳುತ್ತಾರೆ. RSS ಬಗ್ಗೆ ಆಪಾದನೆ ಮಾಡುವುದು ಆ ವೋಟ್ ಬ್ಯಾಂಕಿಗಾಗಿ ದೇಶ ಒಡೆದ ಜಿನ್ನಾ ಹೆಸರು ಹೇಳಿದರೂ ಆಶ್ಚರ್ಯ ಪಡಬೇಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಹಾಸನ (Hassan) ಜಿಲ್ಲೆ ಬೇಲೂರು ತಾಲೂಕಿನ ಚಿಲ್ಕೂರು ಗ್ರಾಮದಲ್ಲಿ ಹೇಳಿದ್ದಾರೆ.
ಕುಲಕ್ಕೆ ಮೂಲ ಕೊಡಲಿ ಕಾವು ಅನ್ನೋ ಗಾದೆ ಮಾತಿದೆ. ದೇಶಕ್ಕೆ, ದೇಶ ಒಡೆಯುವ ಸಂಚಿಗೆ ನೀವು ಕೊಡಲಿ ಕಾವು ಆಗಬೇಡಿ ಅಂತ ಹೇಳಿದ್ದೆ. ಅವರು ಈಗ ನಡೆದುಕೊಳ್ಳುತ್ತಿರುವ ರೀತಿ, ದೇಶ ಒಡೆಯುವಂತಹ ಕೊಡಲಿಗೆ ಕಾವು ಆಗುತ್ತಿದ್ದಾರೆ ಎಂದರು.
ಇದನ್ನು ಓದಿ: ಪ್ರಧಾನಿ ಮೋದಿ ಮಾಡಿದ ಯಾವ ಒಳ್ಳೆಯ ಕೆಲಸ ಮುಂದಿಟ್ಟುಕೊಂಡು ಬಿಜೆಪಿ ವೋಟು ಕೇಳುತ್ತದಂತೆ? ಸಿದ್ದರಾಮಯ್ಯ
ಕಾಂಗ್ರೆಸ್‌ನವರಿಗೆ ಕೆಲಸ ಇಲ್ಲ ಎಂದು ಚಡ್ಡಿ ಸುಡುತ್ತಿದ್ದಾರೆ. ಅವರು ಚಡ್ಡಿ ಸುಡಬಹುದು, ಆದರೆ ನಮ್ಮ ರಾಷ್ಟ್ರಭಕ್ತಿಯ ವಿಚಾರವನ್ನು ಸುಡಲು ಆಗಲ್ಲ. ರಾಜ್ಯದ ಜನರಿಗೆ ನಿಮ್ಮ ಹಳೇ ಚಡ್ಡಿ ಕಳಿಸಿ ಅಂದಿದ್ದೇವೆ. ಕೆಪಿಸಿಸಿ ಕಚೇರಿಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ನಲಪಾಡ್ ಮನೆಗೂ ಹಳೇ ಚಡ್ಡಿಗಳನ್ನ ಕಳುಹಿಸಬಹುದು. ವೇಸ್ಟ್ ಆಗಿ ಬಿದ್ದಿರುವ ಹಳೇ ಚಡ್ಡಿಗಳನ್ನ ಪಾರ್ಸೆಲ್ ಮಾಡಿ ಎಂದು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.
ರಾಷ್ಟ್ರೀಯ ಸ್ಬಯಂ ಸೇವಕರ ಸಂಘ 1925 ರಲ್ಲಿ ಆರಂಭವಾಯಿತು. ಪ್ರಾರಂಭವಾಗಿದ್ದು ಒಂದು ಶಾಖೆಯ ಮೂಲಕ. ವಿದ್ಯುಕ್ತವಾಗಿ ದೊಡ್ಡ ಸ್ಟೇಜ್ ಹಾಕಿ ಪ್ರಾರಂಭವಾದುದ್ದಲ್ಲ. ಭಗವಾದ್ ಧ್ವಜ, ಒಂದು ಶಾಖೆ, ಅದರಲ್ಲಿ ಕಬ್ಬಡಿ ಆಟದ ಮೂಲಕ ಎಲ್ಲರನ್ನು ಒಗ್ಗೂಡಿಸುವ ಕೆಲಸ ಮಾಡಿತು. ಜಾತೀಯತೆ, ಅಸ್ಪುಶೃತೆ ಇರಬಾರದು, ರಾಷ್ಟ್ರ ಭಕ್ತಿ ಪ್ರೇರಣೆ ಸಿಗಬೇಕು ಎಂಬುದು ಇದರ ಉದ್ದೇಶ. ದೇಶಕ್ಕಾಗಿ ಕೆಲಸ ಮಾಡುವ ಒಂದು ದೊಡ್ಡ ಪಡೆಯನ್ನು ನಿರ್ಮಾಣ ಮಾಡಿತು. ನೂರಾರು ಸ್ವಯಂ ಸೇವಕ ಸಂಘಟನೆಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಪ್ರೇರಣೆಯಿಂದ ಹುಟ್ಟಿವೆ. ಪ್ರಧಾನಮಂತ್ರಿ, ಕೇಂದ್ರಸಚಿವರು, ರಾಷ್ಟ್ರಪತಿ, ರಾಜ್ಯಪಾಲರು, ಮುಖ್ಯಮಂತ್ರಿಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರು ಎಂದು ಹೇಳಿದ್ದಾರೆ.
ಇದನ್ನು ಓದಿ: ಪಿಯುಸಿ ಪಠ್ಯ ಪರಿಷ್ಕರಣೆ ಇಲ್ಲ- ಶಿಕ್ಷಣ ಸಚಿವ ಬಿಸಿ ನಾಗೇಶ್, ಪರಿಷ್ಕರಣೆ ಕೈಬಿಟ್ಟಿಲ್ಲ- ಸಚಿವ ಶ್ರೀನಿವಾಸ ಪೂಜಾರಿ
ಒಂದು ಕುಟುಂಬದಲ್ಲಿ ಹುಟ್ಟಿದವರನ್ನೇ ನಾಯಕರಾಗಿ ಮಾಡುವಂತಹ ವಂಶಪಾರಂಪರ್ಯದ ರಾಜನೀತಿ, ಪ್ರಜಾಪ್ರಭುತ್ವಕ್ಕೆ ಶೋಭೆನಾ ಅಥವಾ ಕುಟುಂಬದ ಬಡಜನರನ್ನು, ವಿವಿಧ ಜಾತಿಯ ಜನರನ್ನು ಮೇಲಕ್ಕೆ ತಂದು ಅವರಿಗೆ ಉನ್ನತ ಹುದ್ದೆ ಕೊಡುವುದು, ಪ್ರಜಾಪ್ರಭುತ್ವದ ಶೋಭೆನೋ? . ಪ್ರಾಕೃತಿಕ ವಿಕೋಪವಾದಾಗ ಜೀವದ ಹಂಗು ತೊರೆದು ಕೆಲಸ ಮಾಡುವಂತಹದ್ದು ಶೋಭೆನೋ? ಏನೇ ಬಂದರು, ನನಗೆ, ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಅಣ್ಣ-ತಮ್ಮಂದಿರಿಗೆ ಇರಲಿ ಅನ್ನೋದು ಶೋಭೆನೋ? ಆ ದೃಷ್ಟಿಯಲ್ಲಿ ನಮ್ಮನ್ನು ಚಡ್ಡಿ ಅಂತ ಕರೆದರೆ ನಾವು ರಾಷ್ಟ್ರಭಕ್ತಿ ಚಡ್ಡಿಯವರು. ನಾವು ದೇಶ ದ್ರೋಹ ಮಾಡುವವರು ಅಲ್ಲ, ದೇಶ ದ್ರೋಹ ಮಾಡುವವರಿಗೆ ಬೆಂಬಲವನ್ನು ಕೊಡುವವರಲ್ಲ ಎಂದರು.
ವಿಜಯೇಂದ್ರ ಮುಂದೆ ಸಿಎಂ ಆಗುತ್ತಾರೆ ಎಂದು ಕ್ರೀಡಾ ಸಚಿವ ನಾರಾಯಣ ಗೌಡ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಯಾರ ಯಾರ ಹಣೆಯಲ್ಲಿ ಯೊಗ ಬರೆದಿರುತ್ತೋ ಅದನ್ನ ತಪ್ಪಿ ಸಲು ಆಗಲ್ಲ. ಅಂತಹ ಯೋಗ ಬರೆದಿದ್ದರೆ ಯಾರು ಬೇಕಾದರು ಆಗಬಹುದು. ಪ್ರತಾಪ್ ಸಿಂಹ ಪತ್ರಕರ್ತರಾಗಿದ್ದರು ಯೋಗ ಇತ್ತು ಮೈಸೂರು ಸಂಸದರಾದರು. ಹಾಗೆಯೆ ಯೋಗ ಇದ್ದರೆ ಏನು ಬೇಕಿದ್ದರೂ ಆಗಬಹುದು. ಬಸವರಾಜ್ ಬೊಮ್ಮಾಯಿ ಸಿಎಂ ಆಗಬೇಕು ಅಂತಾ ಯಾವುದೆ ಪ್ರಯತ್ನ ಮಾಡಿರಲಿಲ್ಲ. ಯೋಗ ಕೂಡಿ ಬಂತು ಸಿಎಂ ಆದರು, ಯೋಗ ಕೂಡಿ ಬಂದರೆ ಏನು ಬೇಕಾದರು ಆಗಬಹುದು. ವಿಜಯರೆಂದ್ರಗೆ ಯೋಗ ಇದೆಯಾ ನನಗೆ ಗೊತ್ತಿಲ್ಲ. ಪ್ರಜಾಪ್ರಭುತ್ವ ದಲ್ಲಿ ಯೋಗ ಬರೆಯೋದು ರಾಜ್ಯದ ಜನ. ರಾಜ್ಯದ ಜನ ಬರೆದರೆ ಏನು ಬೇಕಾದರು ಯಾರು ಬೇಕಾದರು ಆಗಬಹುದು. ಬಿಜೆಪಿ ಗೆ ಭವಿಷ್ಯ ದಲ್ಲಿ ಒಳ್ಳೆ ದಿನಗಳು ಇವೆ ಹಾಗಾಗಿ ಬಿಜೆಪಿ ಜೊತೆಗಿರೋರಿಗು ಒಳ್ಳೆ ದಿನ ಇದೆ ಎಂದು ಹೇಳಿದ್ದಾರೆ
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:57 pm, Tue, 7 June 22