ಪ್ರತಿದಿನ ಹಾಸನಾಂಬೆ ದರ್ಶನ, ಪೂಜೆಗೆ ಭಕ್ತರ ವಿರೋಧ; ವಿವಾದದ ಸುಳಿಯಲ್ಲಿ ಸಿಲುಕಿದ ಶಕ್ತಿದೇವತೆ

| Updated By: ಆಯೇಷಾ ಬಾನು

Updated on: Feb 03, 2022 | 10:31 AM

ಹಾಸನದಲ್ಲಿ ವರ್ಷಕ್ಕೊಮ್ಮೆ ಶಕ್ತಿದೇವತೆ ಹಾಸನಾಂಬೆ ಭಕ್ತರಿಗೆ ದರ್ಶನ ನೀಡುತ್ತಾಳೆ.. ಬಲಿಪಾಡ್ಯಮಿಯ ಮಾರನೇ ದಿನ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಿದ್ರೆ ಮತ್ತೆ ತೆರೆಯೋದು ಮುಂದಿನ ವರ್ಷವೇ.. ಅಲ್ದೆ, ವಾರದಲ್ಲಿ ಎರಡು ದಿನ ದೇಗುಲದ ಇತರೆ ಎರಡು ಬಾಗಿಲು ತೆಗೆದು ಗರ್ಭಗುಡಿ ಬಾಗಿಲಿಗೆ ಪೂಜೆ ನಡೆಯುತ್ತೆ.

ನಾಡಿನ ಶಕ್ತಿದೇವತೆ.. ಹಾಸನದ ಗ್ರಾಮದೇವತೆ.. ವರ್ಷಕ್ಕೊಮ್ಮೆ ದರ್ಶನ ಕೊಡೋ ಅಧಿದೇವತೆ. ಈಕೆ ಲಕ್ಷಂತರ ಭಕ್ತರ ಆರಾಧ್ಯ ದೇವಿ. ಭಕ್ತರು ವರ್ಷಕ್ಕೊಮ್ಮೆ ಮಾತ್ರ ಇಲ್ಲಿಗೆ ಬರ್ತಾರೆ. ಆದ್ರೆ, ಇತ್ತೀಚೆಗೆ ಪ್ರತಿದಿನವೂ ಭಕ್ತರು ದೇಗುಲಕ್ಕೆ ಬರ್ತಿದ್ದಾರೆ. ಪ್ರತಿದಿನವೂ ಅದ್ಧೂರಿಯಾಗಿ ಪೂಜೆ ನಡೀತಿದೆ. ಹೀಗಾಗಿ ವರ್ಷಕ್ಕೊಮ್ಮೆ ದರ್ಶನ ನೀಡುವ ದೇವಿಯನ್ನು ಪ್ರತಿ ದಿನ ದರ್ಶನಕ್ಕೆ ಅವಕಾಶ ನೀಡಿರುವುದು ಸದ್ಇಯ ವಿವಾದದ ಸುಳಿಯಲ್ಲಿ ಸಿಲುಕಿದೆ. ಗರ್ಭಗುಡಿ ಎದುರೇ ಹಾಸನಾಂಬೆ ಕಳಶ ಪ್ರತಿಷ್ಠಾಪನೆ ಮಾಡಲಾಗಿದ್ದು ಪ್ರತಿದಿನವೂ ವಿಶೇಷ ಪೂಜೆ, ವಿಭಿನ್ನ ಅಲಂಕಾರ ಮಾಡಿ ಅಧಿದೇವತೆಯ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ. ಆದ್ರಿಲ್ಲಿ ವರ್ಷಕ್ಕೊಮ್ಮೆ ದರ್ಶನ ನೀಡ್ತಿದ್ದ ಅಧಿದೇವತೆಯನ್ನ ನಿತ್ಯ ಪೂಜೆ ಮಾಡ್ತಿರೋದೇ ವಿವಾದ ಎಬ್ಬಿಸಿದೆ. ಭಕ್ತರನ್ನ ಕೆರಳುವಂತೆ ಮಾಡಿದೆ.

ಹಾಸನಾಂಬೆ ದೇಗುಲದ ಬಾಗಿಲಲ್ಲೇ ಮೂರ್ತಿ ಪ್ರತಿಷ್ಠಾಪನೆ
ಹಾಸನದಲ್ಲಿ ವರ್ಷಕ್ಕೊಮ್ಮೆ ಶಕ್ತಿದೇವತೆ ಹಾಸನಾಂಬೆ ಭಕ್ತರಿಗೆ ದರ್ಶನ ನೀಡುತ್ತಾಳೆ. ಬಲಿಪಾಡ್ಯಮಿಯ ಮಾರನೇ ದಿನ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚಿದ್ರೆ ಮತ್ತೆ ತೆರೆಯೋದು ಮುಂದಿನ ವರ್ಷವೇ. ಅಲ್ದೆ, ವಾರದಲ್ಲಿ ಎರಡು ದಿನ ದೇಗುಲದ ಇತರೆ ಎರಡು ಬಾಗಿಲು ತೆಗೆದು ಗರ್ಭಗುಡಿ ಬಾಗಿಲಿಗೆ ಪೂಜೆ ನಡೆಯುತ್ತೆ. ಉಳಿದಂತೆ ದೇಗುಲ ಕ್ಲೋಸ್ ಆಗಿರುತ್ತೆ. ಆದ್ರೆ, ಕೆಲ ದಿನಗಳಿಂದ ಗರ್ಭಗುಡಿ ಬಾಗಿಲಿನ ಎದುರು ಹಾಸನಾಂಬೆ ಗರ್ಭಗುಡಿ ಒಳಗಿರುವಂತೆ ಮೂರ್ತಿಗಳನ್ನ ಪ್ರತಿಷ್ಠಾಪಿಸಲಾಗಿದೆ. ಸೀರೆ ಹೂಗಳಿಂದ ಅಲಂಕಾರ ಮಾಡಿ ಪೂಜೆ ನಡೆಸಲಾಗುತ್ತಿದೆ. ಆದ್ರೆ ಅರ್ಚಕರು ಕಾಣಿಕೆ ಹುಂಡಿ ಇಟ್ಟು ಹಣದಾಸೆಗೆ ಹೀಗೆ ಮಾಡುತ್ತಿದ್ದಾರೆ. ಇದ್ರಿಂದ ದೇಗುಲದ ಮಹತ್ವ ಹಾಳಾಗುತ್ತೆ ಅಂತಾ ಭಕ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.

ಇನ್ನು, ಕಳೆದ ವರ್ಷ ಅಕ್ಟೋಬರ್ ಕೊನೆಯವಾರ ಆರಂಭಗೊಂಡಿದ್ದ ಹಾಸನಾಂಬೆ ದರ್ಶನ ನವೆಂಬರ್ 6ಕ್ಕೆ ಕೊನೆಯಾಗಿತ್ತು. ಆದ್ರೆ ಕಳೆದ ಒಂದೆರಡು ವಾರಗಳಿಂದ ಹೀಗೆ ಹೊಸ ರೀತಿಯ ಪೂಜೆ ನಡೆಯುತ್ತಿರೋದು ಏಕೆ ಅನ್ನೋ ಅನುಮಾನ ಮೂಡಿದೆ. ಈ ಬಗ್ಗೆ ಅರ್ಚಕರನ್ನ ಕೇಳಿದ್ರೆ ಹಳೇ ಕಾಲದಿಂದ್ಲೂ ಪೂಜೆ ನಡೀತಿದೆ. ಈಗ ಅಲಂಕಾರ ಮಾಡಿ ಪೂಜೆ ಮಾಡ್ತಿದ್ದೇವೆ ಅಷ್ಟೇ ಅಂತಿದ್ದಾರೆ. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡ್ತಿದ್ದಂತೆ ದೇಗುಲಕ್ಕೆ ಆಡಳಿತಾಧಿಕಾರಿ ಜಗದೀಶ್ ಆಗಮಿಸಿದ್ರು. ಪೂಜೆ ಬಗ್ಗೆ ಅರ್ಚಕರ ಜೊತೆ ಮಾತನಾಡಿ ಮಾಹಿತಿ ಪಡೆದ್ರು.. ಅಲ್ದೆ, ಈ ಬಗ್ಗೆ ನಾಳೆ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡೋದಾಗಿ ಹೇಳಿದ್ರು. ಸದ್ಯ, ಮುಂದಿನ ವರ್ಷದ ದರ್ಶನಕ್ಕಾಗಿ ಭಕ್ತರು ಕಾಯುತ್ತಿರೋವಾಗಲೇ ಹಾಶನಾಂಬೆ ದೇಗುಲದ ಎದುರು ಹೊಸದಾಗಿ ಪೂಜೆ ನಡೀತಿದೆ. ಇದು ವಿಭಿನ್ನ ಆಚರಣೆ ಅಂತಾ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

Published on: Jan 31, 2022 07:46 AM