Hasanamba 2023: ಮುಂದಿನ ವರ್ಷಕ್ಕೆ ಹಾಸನಾಂಬೆ ದರ್ಶನ ದಿನಾಂಕ ನಿಗದಿಯಾಯ್ತು

| Updated By: ಸಾಧು ಶ್ರೀನಾಥ್​

Updated on: Oct 27, 2022 | 4:58 PM

Hasanamba darshan: ಮುಂದಿನ ವರ್ಷ 14 ದಿನ ಹಾಸನಾಂಬೆ ಗರ್ಭಗುಡಿ ಬಾಗಿಲು ಓಪನ್ ಆಗಿರುತ್ತದೆ.

Hasanamba 2023: ಮುಂದಿನ ವರ್ಷಕ್ಕೆ ಹಾಸನಾಂಬೆ ದರ್ಶನ ದಿನಾಂಕ ನಿಗದಿಯಾಯ್ತು
ಮುಂದಿನ ವರ್ಷಕ್ಕೆ ಹಾಸನಾಂಬೆ ದರ್ಶನ ದಿನಾಂಕ ಫಿಕ್ಸ್​
Follow us on

ಹಾಸನ: ಮುಂದಿನ ವರ್ಷ 2023ನೇ ಸಾಲಿಗೆ ಜಗನ್ಮಾತೆ ಹಾಸನಾಂಬೆಯ (Hasanamba 2023) ದರ್ಶನಕ್ಕೆ ದಿನಾಂಕ ನಿಗದಿಯಾಗಿದೆ. 2023ರ ನವೆಂಬರ್ 2 ರಿಂದ 15ರವರೆಗೆ ಹಾಸನಾಂಬೆಯ ಜಾತ್ರಾ ಮಹೋತ್ಸವ ಏರ್ಪಟ್ಟಿದೆ. ಮುಂದಿನ ವರ್ಷ 14 ದಿನ ಹಾಸನಾಂಬೆ ಗರ್ಭಗುಡಿ ಬಾಗಿಲು ಓಪನ್ ಆಗಿರುತ್ತದೆ. ಗಮನಾರ್ಹವೆಂದರೆ, ಈ ವರ್ಷ 15 ದಿನಗಳ ಕಾಲ ಹಾಸನಾಂಬೆ ದರ್ಶನಕ್ಕೆ ಅವಕಾಶ ನಿಡಲಾಗಿತ್ತು ಎಂದುಮುಂದಿನ ವರ್ಷದ ಪಂಚಾಂಗದ ಪ್ರಕಾರ ಹಾಸನಾಂಬೆ ದರ್ಶನದ ಬಗ್ಗೆ ಅರ್ಚಕರ ತಂಡದಿಂದ ಮಾಹಿತಿ ಮಾಹಿತಿ ಲಭ್ಯವಾಗಿದೆ (hassan).

ಹದಿನೈದು ದಿನಗಳ ಹಾಸನಾಂಬೆ ಉತ್ಸವಕ್ಕೆ ಇಂದೇ ಕೊನೆ:

ಪ್ರಸಕ್ತ ಸಾಲಿನಲ್ಲಿ 15 ದಿನಗಳ ಹಾಸನಾಂಬೆ ಉತ್ಸವಕ್ಕೆ ಇಂದೇ ಕೊನೆ ಬಿದ್ದಿದೆ. ಇಂದು ಮಧ್ಯಾಹ್ನ 12 ಗಂಟೆ 47 ನಿಮಿಷಕ್ಕೆ ಗರ್ಭಗುಡಿ ಬಾಗಿಲು ಬಂದ್ ಆಗಿದೆ. ಉಸ್ತುವಾರಿ ಸಚಿವ ಗೋಪಾಲಯ್ಯ, ಎಸ್​ಪಿ ಹರಿರಾಮ್​ ಶಂಕರ್​, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಅರ್ಚಕರು ಗರ್ಭಗುಡಿ ಬಾಗಿಲು ಮುಚ್ಚಿದರು. ಅಕ್ಟೋಬರ್​ 13ರಂದು ದೇವಸ್ಥಾನದ ಗರ್ಭಗುಡಿ ಬಾಗಿಲು ತೆರೆಯಲಾಗಿತ್ತು.

ಹಾಸನಾಂಬೆ ಸನ್ನಿಧಿಯಲ್ಲಿ ಪೂಜಾ ವಿಧಿ ವಿಧಾನಗಳು ಇಂದು ಬೆಳಗ್ಗೆ ನೆರವೇರಿತು. ಕೊನೆ ಗಳಿಗೆಯಲ್ಲೂ ಸಾವಿರಾರು ಭಕ್ತರು ದರ್ಶನ ಪಡೆದರು. ಕೊನೆಯ ದಿನ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇಲ್ಲದಿದ್ದರೂ ಭಕ್ತರು ದೇಗುಲಕ್ಕೆ ಆಗಮಿಸಿ, ದರ್ಶನ ಪಡೆದರು. ಕೊನೆಯ ‌ದಿನ ದರ್ಶನಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಆಗಮಿಸಿದ್ದರು. ದೇಗುಲದ ಆವರಣದಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.

Published On - 4:47 pm, Thu, 27 October 22