Hasanamba Temple: 9 ದಿನಗಳ ದರ್ಶನದಲ್ಲಿ ಹಾಸನಾಂಬೆ ದೇವಾಲಯಕ್ಕೆ ದಾಖಲೆಯ ಆದಾಯ, ಎಷ್ಟು ಗೊತ್ತಾ?

| Updated By: ಆಯೇಷಾ ಬಾನು

Updated on: Nov 12, 2023 | 8:36 AM

ನವೆಂಬರ್ 2 ರಂದು ಹಾಸನಾಂಬೆ ದೇಗುಲದ ಬಾಗಿಲು ತೆರೆದು ನವೆಂಬರ್ 3 ರಿಂದ ಸಾರ್ವಜನಿಕ ಭಕ್ತರಿಗೆ ದರ್ಶನ ಆರಂಭವಾಗಿದೆ. ಒಂಭತ್ತು ದಿನಗಳ ದರ್ಶನದಲ್ಲಿ ಹಾಸನಾಂಬೆ ದೇವಾಲಯಕ್ಕೆ ಇತಿಹಾಸದಲ್ಲೇ ದಾಖಲೆಯ ಆದಾಯ ಸಂಗ್ರಹವಾಗಿದೆ. ಕೇವಲ 9 ದಿನಗಳಲ್ಲಿ 4 ಕೋಟಿ 56 ಲಕ್ಷದ 22 ಸಾವಿರ 580 ರೂಪಾಯಿ ಆದಾಯ ಹರಿದು ಬಂದಿದೆ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

Hasanamba Temple: 9 ದಿನಗಳ ದರ್ಶನದಲ್ಲಿ ಹಾಸನಾಂಬೆ ದೇವಾಲಯಕ್ಕೆ ದಾಖಲೆಯ ಆದಾಯ, ಎಷ್ಟು ಗೊತ್ತಾ?
ಹಾಸನಾಂಬೆ
Follow us on

ಹಾಸನ, ನ.12: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ, ಹಾಸನದ ನಾಡ ದೇವತೆ ಹಾಸನಾಂಬೆಯ (Hasanamba Temple) ದರ್ಶನಕ್ಕೆ ಜನ ಸಾಗರವೇ ಹರಿದು ಬರ್ತಿದೆ. ಕಳೆದ ಒಂಭತ್ತು ದಿನಗಳಿಂದಲೂ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿ ದೇವಿ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ. ರಾಜಕೀಯ ಗಣ್ಯರು, ಸಿನಿ ತಾರೆಯರೂ ಕೂಡ ದೇವಿ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ನವೆಂಬರ್ 2 ರಂದು ಹಾಸನಾಂಬೆ ದೇಗುಲದ ಬಾಗಿಲು ತೆರೆದು ನವೆಂಬರ್ 3 ರಿಂದ ಸಾರ್ವಜನಿಕ ಭಕ್ತರಿಗೆ ದರ್ಶನ (Devotees) ಆರಂಭವಾಗಿದೆ. ಒಂಭತ್ತು ದಿನಗಳ ದರ್ಶನದಲ್ಲಿ ಹಾಸನಾಂಬೆ ದೇವಾಲಯಕ್ಕೆ ಇತಿಹಾಸದಲ್ಲೇ ದಾಖಲೆಯ ಆದಾಯ ಸಂಗ್ರಹವಾಗಿದೆ. ಕೇವಲ 9 ದಿನಗಳಲ್ಲಿ 4 ಕೋಟಿ 56 ಲಕ್ಷದ 22 ಸಾವಿರ 580 ರೂಪಾಯಿ ಆದಾಯ ಹರಿದು ಬಂದಿದೆ. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಯಾವುದರಿಂದ ಎಷ್ಟು ಎಷ್ಟು ಆದಾಯ ಸಂಗ್ರಹ?

ವಿಶೇಷ ದರ್ಶನದ ಪಾಸ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದ ಹಾಸನಾಂಬೆಗೆ ಕೋಟಿ ಕೋಟಿ ಆದಾಯ ಹರಿದು ಬಂದಿದೆ. ನ.3 ರಿಂದ ನ.11 ರ ಮಧ್ಯಾಹ್ನ 2 ಗಂಟೆವರೆಗೆ 4,56,22,580 ರೂ ಆದಾಯ ಸಂಗ್ರಹವಾಗಿದೆ. ಸಾವಿರ ರೂ. ಟಿಕೆಟ್ ಮಾರಾಟದಿಂದ 2 ಕೋಟಿ 30 ಲಕ್ಷದ 91 ಸಾವಿರ ಬಂದ್ರೆ, 300 ರೂ ಟಿಕೆಟ್ ಮಾರಾಟದಿಂದ 1 ಕೋಟಿ 79 ಲಕ್ಷದ 65 ಸಾವಿರ 500 ರೂ ಆದಾಯ ಸಂಗ್ರಹವಾಗಿದೆ. ಲಡ್ಡು ಪ್ರಸಾದ ಮಾರಾಟದಿಂದ ಕೂಡ 45 ಲಕ್ಷ 66 ಸಾವಿರದ 080 ರೂ. ಹಣ ಸಂಗ್ರಹವಾಗಿದೆ. ಒಟ್ಟು 4 ಕೋಟಿ 56 ಲಕ್ಷದ 22 ಸಾವಿರದ 580 ರೂ ಆದಾಯ ಸಂಗ್ರಹವಾಗಿದೆ. ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲೆ ಇದು ಅತಿ ಹೆಚ್ಚಿನ ಆದಾಯವಾಗಿದೆ. ತಾಯಿ ದರ್ಶನಕ್ಕೆ ಇನ್ನೂ ಮೂರು ದಿನ ಬಾಕಿ ಇದ್ದು ಮತ್ತಷ್ಟು ಆದಾಯ ಸಂಗ್ರಹವಾಗಲಿದೆ.

ಇದನ್ನೂ ಓದಿ: ಹಾಸನ: ಹಾಸನಾಂಬ ಗರ್ಭಗುಡಿ ಪ್ರವೇಶಿಸಿ ದರ್ಶನ ಪಡೆಯುವುದಕ್ಕೆ ಸಂಪೂರ್ಣ ನಿರ್ಬಂಧ

ಹಾಸನಾಂಬೆ ಸನ್ನಿಧಿಯಲ್ಲಿ ಎತ್ತ ನೋಡಿದರೂ ಜನ, ಕಣ್ಣು ಹಾಯಿಸಿದಲ್ಲೆಲ್ಲಾ ಜನ ಸಾಗರ ಕಂಡು ಬರುತ್ತಿದೆ. ಶಕ್ತಿ ದೇವತೆಯನ್ನ ನೋಡಬೇಕು, ಬೇಡಿದ ವರಣ ಕರುಣಿಸೋ ಆ ತಾಯಿ ಹಾಸನಾಂಬೆಗೆ ನಮಿಸಬೇಕು ಎಂದು ರಾಜ್ಯ, ಹೊರ ರಾಜ್ಯಗಳಿಂದ ಜನ ಹಾಸನಕ್ಕೆ ಬಂದು ತಾಯಿ ದರ್ಶನ ಮಾಡುತ್ತಿದ್ದಾರೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡೊ ಶಕ್ತಿದೇವತೆಯ ಈ ವರ್ಷದ ದರ್ಶನ ಮಿಸ್ ಮಾಡಿಕೊಳ್ಳಬಾರದು ಎನ್ನೊ ಕಾತರ ಜನರಲ್ಲಿರುತ್ತದೆ. ಮುಂಜಾನೆ 5 ಗಂಟೆಯಿಂದಲೇ ಹಾಸನಾಂಬೆಯ ದರ್ಶನಕ್ಕೆ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಮಾಡ್ತಾರೆ.

ಹಾಸನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:31 am, Sun, 12 November 23