ಹಾಸನ: ಹಾಸನಾಂಬ ಗರ್ಭಗುಡಿ ಪ್ರವೇಶಿಸಿ ದರ್ಶನ ಪಡೆಯುವುದಕ್ಕೆ ಸಂಪೂರ್ಣ ನಿರ್ಬಂಧ
ಹಾಸನಾಂಬ ದೇವಾಲಯ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲೇ ಮಹತ್ವದ ನಿರ್ದಾರ ಕೈಕೊಂಡಿದೆ. ಹಾಸನಾಂಬೆ ಗರ್ಭಗುಡಿ ಒಳಗಡೆ ಪ್ರವೇಶ ಮಾಡಿ ದರ್ಶನ ಪಡೆಯುವುದಕ್ಕೆ ಸಂಪೂರ್ಣ ಬ್ರೇಕ್ ಹಾಕಿದೆ. ಶುಕ್ರವಾರ ರಾತ್ರಿಯಿಂದಲೇ ಜಾರಿಗೆ ಬರುವಂತೆ ಅರ್ಚಕರನ್ನು ಹೊರತುಪಡಿಸಿ ಉಳಿದ ಯಾರಿಗೂ ಗರ್ಭಗುಡಿ ಪ್ರವೇಶವಿಲ್ಲವೆಂದು ಆದೇಶ ಹೊರಡಿಸಿದೆ.
ಹಾಸನ ನ.11: ಹಾಸನಾಂಬ (Hasanamba) ದೇವಾಲಯ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲೇ ಮಹತ್ವದ ನಿರ್ದಾರ ಕೈಕೊಂಡಿದೆ. ಹಾಸನಾಂಬೆ ಗರ್ಭಗುಡಿ ಒಳಗಡೆ ಪ್ರವೇಶ ಮಾಡಿ ದರ್ಶನ ಪಡೆಯುವುದಕ್ಕೆ ಸಂಪೂರ್ಣ ಬ್ರೇಕ್ ಹಾಕಿದೆ. ಶುಕ್ರವಾರ ರಾತ್ರಿಯಿಂದಲೇ ಜಾರಿಗೆ ಬರುವಂತೆ ಅರ್ಚಕರನ್ನು ಹೊರತುಪಡಿಸಿ ಉಳಿದ ಯಾರಿಗೂ ಗರ್ಭಗುಡಿ ಪ್ರವೇಶವಿಲ್ಲವೆಂದು ಆದೇಶ ಹೊರಡಿಸಿದೆ. ಹಾಗೆ ಶಿಷ್ಟಾಚಾರ ದರ್ಶನ ವ್ಯವಸ್ಥೆಯನ್ನು ಕೂಡ ಸ್ಥಗಿತಗೊಳಿಸಿ ದೇವಾಲಯ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಗಣ್ಯರು, ಅತಿಗಣ್ಯರು ಗರ್ಭಗುಡಿ ಪ್ರವೇಶ ಮಾಡಿ ದರ್ಶನ ಪಡೆಯುತ್ತಿದ್ದರು. ಹಾಗೇ ಶಿಷ್ಟಾಚಾರ ಕೋಟಾದಡಿಯಲ್ಲೂ ಗರ್ಭಗುಡಿ ಒಳಗೆ ಪ್ರವೇಶ ದರ್ಶನ ಪಡೆಯುತ್ತಿದ್ದರು. ಇದರಿಂದ ಧರ್ಮದರ್ಶನ ಸಾಲಿನಲ್ಲಿ ಬರುವ ಅಪಾರ ಭಕ್ತರಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಜನರ ಒತ್ತಡಕ್ಕೆ ಮಣಿದು ಆಡಳಿತ ಮಂಡಳಿ ಮಹತ್ತರ ನಿರ್ಣಯ ಕೈಗೊಂಡಿದೆ.
ಹಾಸನಾಂಬ ದರ್ಶನಕ್ಕೆ 9 ನೇ ದಿನವೂ ಹರಿದು ಬಂದ ಭಕ್ತಸಾಗರ
ಹಾಸನಾಂಬೆ ದರ್ಶನಕ್ಕೆ 9 ನೇ ದಿನವೂ ಭಕ್ತರ ದಂಡೇ ಹರಿದು ಬಂದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬಂರುತ್ತಿದ್ದಾರೆ. ಇನ್ನೂ ದೇವಿ ದರ್ಶನಕ್ಕೆ ನಾಲ್ಕು ದಿನ ಮಾತ್ರ ಬಾಕಿ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಆಗಮಿಸಿದ್ದಾರೆ.
ಇದನ್ನೂ ಓದಿ: ಕೇವಲ 7 ದಿನಗಳಲ್ಲಿ ಹಾಸನಾಂಬೆಗೆ ಕೋಟಿ ಕೋಟಿ ಆದಾಯ: ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹೆಚ್ಚು ಹಣ ಸಂಗ್ರಹ
ವಿಐಪಿ ದರ್ಶನಕ್ಕೆ ಮುಗಿಬಿದ್ದ ಜನರು; ಮಹಿಳೆ ಅಸ್ವಸ್ಥ
ಧರ್ಮದರ್ಶನ ಸಾಲಿನಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದರಿಂದ ಭಕ್ತರು VIP ದರ್ಶನಕ್ಕೆ ಮುಗಿಬಿದ್ದಿದ್ದಾರೆ. ಭಕ್ತರು 300 ,1000 ರೂಪಾಯಿ ನೀಡಿ ವಿಐಪಿ ದರ್ಶನ ಸಾಲಿನಲ್ಲಿ ನಿಂತಿದ್ದಾರೆ. ಧರ್ಮದರ್ಶನ ಸಾಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಣ ನೀಡಿ ದರ್ಶನಕ್ಕೆ ತೆರಳುತ್ತಿದ್ದಾರೆ. ಈ ವಿಐಪಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತ ಹಿನ್ನೆಲೆಯಲ್ಲಿ ಮಹಿಳೆ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡ ಮಹಿಳೆಯನ್ನು ಪೊಲೀಸ್ ಸಿಬ್ಬಂದಿ ತಕ್ಷಣ ಆರೈಕೆ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:20 am, Sat, 11 November 23