ಹಾಸನ: ಹಾಸನಾಂಬೆ ದೇಗುಲದ ಹುಂಡಿ ಎಣಿಕೆ ಕಾರ್ಯ ಆರಂಭವಾಗಿದ್ದು, ಕಂದಾಯ ಇಲಾಖೆಯ 85 ಸಿಬ್ಬಂದಿಗಳು ಹಾಗೂ ಸ್ವಯಂಸೇವಕರು ಹಾಸನಾಂಬೆ ದೇಗುಲದ ಆವರಣದಲ್ಲಿ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಅಕ್ಟೋಬರ್ 28 ರಿಂದ ನವೆಂಬರ್ 6 ರ ವರೆಗೆ ನಡೆದಿದ್ದ ಹಾಸನಾಂಬೆ ಉತ್ಸವದಲ್ಲಿ 10 ದಿನಗಳಲ್ಲಿ 4 ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದರು. ಈ ವೇಳೆ ಭಕ್ತರು ನೀಡಿರುವ ಕಾಣಿಕೆ ಹಣ ಎಣಿಕೆ ಕಾರ್ಯ ಇಂದು (ನವೆಂಬರ್ 8) ಆರಂಭವಾಗಿದೆ.
ಹಾಸನಾಂಬೆ ದೇವಿಗೆ ವಿವಿಧ ಬೇಡಿಕೆ ಸಲ್ಲಿಸಿ ಭಕ್ತರಿಂದ ಪತ್ರ
ಹೊಳೆನರಸೀಪುರ ಶಾಸಕರನ್ನು ಬದಲಾಯಿಸು ತಾಯೇ ಎಂದು ಭಕ್ತರು ಹಾಸನಾಂಬೆಗೆ ಮೊರೆ ಹೋಗಿದ್ದರೆ. ಇನ್ನು ಕೆಲವರು ರಸ್ತೆ ದುರಸ್ತಿ ಮಾಡಿಸು ತಾಯೇ ಎಂದು ಶಾಸಕ ಪ್ರೀತಂ ಗೌಡಗೆ ಹಾಸನಾಂಬೆ ಮೂಲಕ ಪತ್ರ ಬರೆದಿದ್ದಾರೆ. ಗಂಡು ಮಗು ಕರುಣಿಸು, ನಾನು ಬೇಡಿದ ವರವ ಕೊಟ್ಟರೆ ಐದು ಸಾವಿರ ಕೊಡುತ್ತೇನೆ ಎಂದು ಇನ್ನೂ ಕೆಲವರು ಪತ್ರ ಬರೆದಿದ್ದಾರೆ.
ತಾನು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಮಾಡು ಎಂದು ರಕ್ತದಲ್ಲಿ ಪತ್ರ ಬರೆದ ಯುವತಿ
ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಪಾಸು ಮಾಡು ತಾಯಿ ಎಂದು, ಪಿಯುಸಿಯಲ್ಲಿ ಶೇ.90 ಅಂಕ ಬರಬೇಕೆಂದು ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದಾರೆ. ಇನ್ನು ಯುವತಿಯೊರ್ವಳು ತಾನು ಇಷ್ಟಪಟ್ಟ ಹುಡುಗನ ಜೊತೆ ಮದುವೆ ಮಾಡು ಎಂದು ರಕ್ತದಲ್ಲಿ ಪತ್ರ ಬರೆದಿದ್ದಾಳೆ. ಇನ್ನು ಪ್ರಮೋಷನ್ ಸಿಗಲಿ, ಮಗನಿಗೆ ಮದುವೆಯಾಗಲಿ ಎಂದು ಪತ್ರ ಬರೆದಿದ್ದು, ಮತ್ತೆ ಕೆಲವರು ಗಂಡನ ಕುಡಿತದ ಚಟ ಬಿಡಿಸು ತಾಯಿ ಎಂದು ಹೀಗೆ ನಾನಾ ರೀತಿಯ ಪತ್ರ ಬರೆದು ಹಾಸನಾಂಬೆಗೆ ಮೊರೆಯಿಟ್ಟಿದ್ದಾರೆ.
ಇದನ್ನೂ ಓದಿ:
ಹಾಸನದ ಹಾಸನಾಂಬೆ ದೇವಸ್ಥಾನ ಹತ್ತು ದಿನಗಳ ಉತ್ಸವದ ನಂತರ ಶನಿವಾರ ಮುಚ್ಚಲಾಯಿತು, ದೇವಿ ದರ್ಶನ ಇನ್ನು ಮುಂದಿನ ವರ್ಷವೇ!
ಹಾಸನ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಸನಾಂಬೆ ದೇವಿಯ ದರ್ಶನಕ್ಕೆ ತೆರೆ
Published On - 11:00 am, Mon, 8 November 21