ಹಾಸನಾಂಬೆ ದರ್ಶನಕ್ಕೆ ಸಾಲಿನಲ್ಲಿ ಬಾರದ ಜಿಪಂ ನೌಕರನಿಗೆ ಕುಟುಂಬದ ಎದುರೇ ಉಪ ವಿಭಾಗಾಧಿಕಾರಿಯಿಂದ ಕಪಾಳ ಮೋಕ್ಷ

| Updated By: ಆಯೇಷಾ ಬಾನು

Updated on: Oct 18, 2022 | 8:04 AM

ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿ ಹಾಸನದ ಉವಿಭಾಗಧಿಕಾರಿ ಜಗದೀಶ್ ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡರಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ಸಾಲಿನಲ್ಲಿ ಬಾರದ ಜಿಪಂ ನೌಕರನಿಗೆ ಕುಟುಂಬದ ಎದುರೇ ಉಪ ವಿಭಾಗಾಧಿಕಾರಿಯಿಂದ ಕಪಾಳ ಮೋಕ್ಷ
ಜಿಪಂ ನೌಕರನಿಗೆ ಕುಟುಂಬದ ಎದುರೇ ಉಪ ವಿಭಾಗಾಧಿಕಾರಿಯಿಂದ ಕಪಾಳ ಮೋಕ್ಷ
Follow us on

ಹಾಸನ: ಕುಟುಂಬ ಸಮೇತ ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ಅವರು ಸರತಿ ಸಾಲಿನಲ್ಲಿ ಬರದೆ ಬೇಕಾಬಿಟ್ಟಿಯಾಗಿ ದೇವಾಲಯಕ್ಕೆ ನುಗ್ಗಿದ ಹಿನ್ನೆಲೆ ಹಾಸನದ ಉವಿಭಾಗಧಿಕಾರಿ ಜಗದೀಶ್ ಕಪಾಳಮೋಕ್ಷ ಮಾಡಿದ್ದಾರೆ. ಕುಟುಂಬಸ್ಥರು, ಭಕ್ತರು, ಅಧಿಕಾರಿಗಳು ನಡುವೆ ಎಸಿ ಜಗದೀಶ್ ಕಪಾಳಮೋಕ್ಷ ಮಾಡಿದ ಹಿನ್ನೆಲೆ ಎಸಿ ಜಗದೀಶ್ ಅವರ ನಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವರ್ಷಕ್ಕೊಮ್ಮೆ ದರ್ಶನ ನೀಡುವ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿದ್ದು ಲಕ್ಷಾಂತರ ಜನ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆಯುತ್ತಿದ್ದಾರೆ. ಅದರಂತೆಯೇ ದೇವಿ ದರ್ಶನಕ್ಕಾಗಿ ಜಿಲ್ಲಾ ಪಂಚಾಯತ್ ನೌಕರ ಶಿವೇಗೌಡ ಅವರು ತಮ್ಮ ಪರಿವಾರ ಸಮೇತರಾಗಿ ದೇವಿ ದರ್ಶನಕ್ಕೆ ಬಂದಿದ್ದಾರೆ. ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಮನವಿ‌ ಮಾಡಿ ವಿಐಪಿ ಗೇಟ್ ನಲ್ಲಿ ಎಂಟ್ರಿ ಆಗಿದ್ದಾರೆ. ಇದನ್ನು ಕಂಡ ಎಸಿ ಜಗದೀಶ್ ಅವರು ಶಿವೇಗೌಡರನ್ನು ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿಯೇ ನಿಲ್ಲಿಸಿ ಯಾಕೋ ಓಡಿ ಬರ್ತಿದ್ದಿಯಾ? ನಿನಗೆ ಈ ಗೇಟ್ ನಲ್ಲಿ ಯಾರು ಒಳಬಿಟ್ಟಿದ್ದು ಎಂದು ಏಕವಚನದಲ್ಲಿ ನಿಂದಿಸಿದ್ದಾರೆ. ಕ್ಯೂ ನಲ್ಲಿ ಹೋಗೋದ್ ಬಿಟ್ಟು ಇಲ್ಲಿ ಯಾಕೆ ಬರ್ತಿದ್ದಿಯಾ ಅಂತ ಸಿಟ್ಟಾಗಿದ್ದಾರೆ. ಆಗ ಶಿವೇಗೌಡರು ತಾನೂ ಜಿ.ಪಂ ನೌಕರ ಎಂದು ಗುರುತಿನ ಚೀಟಿ ತೋರಿಸಿದ್ದಾರೆ. ಇದನ್ನೂ ಓದಿ: ಗುಂಡಿ ತಪ್ಪಿಸುವ ಯತ್ನದಲ್ಲಿ ಕೆಳಗೆ ಬಿದ್ದಿದ್ದ ಉಮಾದೇವಿ ನಿಧನ: ಕೆಎಸ್​ಆರ್​ಟಿಸಿ ಬಸ್ ಚಾಲಕನ ಬಂಧನ

ಕುಟುಂಬದ ಎದುರೇ ಕಪಾಳ ಮೋಕ್ಷ

ಕೊರಳಲ್ಲಿ ಧರಿಸಿದ್ದ ಕಾರ್ಡ್ ಕಿತ್ತು ಎಸೆದ ಎಸಿ ಜಗದೀಶ್ ಶಿವೇಗೌಡ ಕುಟುಂಬದವರ ಮುಂದೆಯೇ ಕಪಾಳಮೋಕ್ಷ ಮಾಡಿದ್ದಾರೆ. ಈ ವೇಳೆ ಸುತ್ತಮುತ್ತ ನೆರೆದಿದ್ದ ನೂರಾರು ಭಕ್ತರು, ಪೊಲೀಸರು, ಅಧಿಕಾರಿಗಳು ತಬ್ಬಿಬ್ಬಾದರು. ಎಸಿ ತಮ್ಮ ಕೆಳ ಹಂತದ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿದ ಕೆಲ ಜನರು ಎಸಿ ಜಗದೀಶ ದರ್ಪ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಮತ್ತೊಂದಷ್ಟು ಜನ ಎಲ್ಲರಿಗೂ ಒಂದೇ ನ್ಯಾಯ. ಯಾರೇ ಆದರೂ ಸರತಿ ಸಾಲಿನಲ್ಲೇ ದರ್ಶನ ಮಾಡಬೇಕು ಎಂದಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:01 am, Tue, 18 October 22