ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಬಳಿ ಮಠಸಾಗರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಕಾಡಾನೆ ಬಂದಿದ್ದು, ಕಾಡಾನೆ ಬರುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಎಸೆದಿದ್ದಾರೆ. ಪಟಾಕಿ ಸಿಡಿಯುತ್ತಿದ್ದಂತೆ ರೊಚ್ಚಿಗೆದ್ದ ಒಂಟಿಸಲಗ ಅರಣ್ಯ ಇಲಾಖೆ ಆರ್‌ಆರ್‌ಟಿ ಸಿಬ್ಬಂದಿಯನ್ನು ಓಡಿಸಿಕೊಂಡು ಬಂದಿದೆ. ನಂತರ ಒಂಟಿಸಲಗ ಕಾಫಿ ತೋಟದೊಳಗೆ ಹೋಗಿದೆ.
ಉಜ್ಜನಹಳ್ಳಿ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ
ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಉಜ್ಜನಹಳ್ಳಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಉಪಟಳ ನೀಡುತ್ತಿದ್ದ ಎರಡು ವರ್ಷದ ಗಂಡು ಚಿರತೆಯನ್ನ ಸೆರೆ ಹಿಡಿಯಲು ಅರಣ್ಯ ಇಲಾಖೆಯು ಬೋನು ಇಟ್ಟಿದ್ದು, ಆಹಾರ ಅರಸಿ ಬಂದ ಚಿರತೆಯು ಅರಣ್ಯ ಇಲಾಖೆ ಸಿಬ್ಬಂದಿಯು ಇಟ್ಟಿದ್ದ ಬೋನಿಗೆ ಬಿದ್ದಿದೆ. ಜಾನುವಾರುಗಳ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿಸಿದ್ದ ಚಿರತೆ ಇದೀಗ ಸೆರೆಯಾಗಿದ್ದು, ಉಜ್ಜನಹಳ್ಳಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಎಪಿಎಂಸಿ ಆವರಣದ ಪೈಪ್ನಲ್ಲಿ ನಾಗರ ಹಾವು ಪ್ರತ್ಯಕ್ಷ
ಗದಗ: ಜಿಲ್ಲೆಯ ನರಗುಂದ ಪಟ್ಟಣದ ಹೊಸ ಎಪಿಎಂಸಿ ಆವರಣದ ಪೈಪ್ನಲ್ಲಿ ನಾಗರ ಹಾವು ಅಡಗಿಕೊಂಡಿದ್ದು, ಪೈಪ್ನಲ್ಲಿ ಕುಳಿತಿದ್ದ ಹಾವನ್ನ ಉರಗ ರಕ್ಷಕ, ಬಿ ಆರ್ ಸುರೆಬಾನ್ ಎನ್ನುವವರು ಪೈಪಿಗೆ ನೀರು ಹಾಕಿ, ನಾಗರ ಹಾವನ್ನು ಹೊರತೆಗೆದಿದ್ದಾರೆ. ಉರಗ ರಕ್ಷಕ ನಾಗರ ಹಾವು ಹೊರ ತೆಗೆಯುತ್ತಿದ್ದಂತೆ ಜನರು ಭಯಭೀತರಾಗಿ ಓಡಾಡಿದ್ದಾರೆ. ಇನ್ನು ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. .
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ