
ಹಾಸನ, ಜ.29: ರಾಜ್ಯದಲ್ಲಿ ಅನೈತಿಕ ಸಂಬಂಧಗಳ ಪ್ರಕರಣಗಳು ಹೆಚ್ಚಾಗಿದೆ. ಈ ಕಾರಣಕ್ಕೆ ಕೊಲೆಗಳು ಕೂಡ ನಡೆಯುತ್ತಿದೆ. ಇದೀಗ ಹಾಸನದಲ್ಲಿ (Hassan) ಅನೈತಿಕ ಸಂಬಂಧದ ವಿಚಾರವಾಗಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ನೆನ್ನೆ (ಜ.28) ತಡರಾತ್ರಿ ಅನೈತಿಕ ಸಂಬಂಧದ ವಿಚಾರವಾಗಿ ಅಡುಗೆ ಕಂಟ್ರಾಕ್ಟರ್ನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚಾಕುವಿನಿಂದ ಇರಿದು ಅಡುಗೆ ಗುತ್ತಿಗೆದಾರ ಆನಂದ್(48) ಎಂಬುವವರನ್ನು ಹತ್ಯೆ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.
ಧರ್ಮೇಂದ್ರ ಎಂಬ ವ್ಯಕ್ತಿ ಅಡುಗೆ ಗುತ್ತಿಗೆದಾರ ಆನಂದ್ ಎಂಬುವವರಿಗೆ ಐದಾರು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಆನಂದ್ ಮೇಲೆ ಧರ್ಮೇಂದ್ರ ದಾಳಿ ಮಾಡಿದ್ದಾರೆ. ಒಂದೇ ಮಹಿಳೆ ಜತೆಗೆ ಆನಂದ್ ಮತ್ತು ಧಮೇಂದ್ರ ಅನೈತಿಕ ಸಂಬಂಧ ಹೊಂದಿದ್ದರು. ಇದೇ ವಿಚಾರಕ್ಕೆ ಆನಂದ್ ಮೇಲೆ ಧರ್ಮೇಂದ್ರ ನಡುವೆ ಜಗಳ ನಡೆದಿತ್ತು. ಇಬ್ಬರು ಕೂಡ ಬಾರ್ನಲ್ಲಿ ಭೇಟಿಯಾಗಿದ್ದು, ಮಹಿಳೆ ಜತೆಗಿನ ಸಂಬಂಧ ಬಗ್ಗೆ ಮಾತುಕತೆಯಾಗಿದೆ. ಅಲ್ಲಿಂದ ಆನಂದ್ ಮನೆಗೆ ಹೋಗಿದ್ದಾರೆ. ಆದರೆ ಮತ್ತೆ ಫೋನ್ ಮಾಡಿ ಧರ್ಮೇಂದ್ರ ಕರೆಸಿಕೊಂಡಿದ್ದಾರೆ. ಧರ್ಮೇಂದ್ರ ಫೋನ್ ಮಾಡಿದ ಕಾರಣ ಆನಂದ್ ವಾಪಸ್ಸು ಬಂದಿದ್ದಾರೆ.
ಇದನ್ನೂ ಓದಿ: ರಾಜಕಾರಣಿಗಳ ಮಗಳಂದಿರ ಜತೆ ಯುವಕನ ಕಾಮಕೇಳಿ: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಮೊಹಮ್ಮದ್ ಸವದ್ ಬಂಧನ
ಈ ವೇಳೆ ಮತ್ತೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಮಾತಿನ ಭರದಲ್ಲಿ ಧಮೇಂದ್ರ ಆನಂದ ಅವರಿಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಧರ್ಮೇಂದ್ರ ಅವರು ಮಹಿಳೆ ಜೊತೆ ಕಳೆದ ಎಂಟು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿದೆ. ಇದರ ನಡುವೆ ಮಹಿಳೆ ಆನಂದ ಜತೆಗೂ ಸಂಬಂಧ ಹೊಂದಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆನಂದ ಹಾಗೂ ಧರ್ಮೇಂದ್ರ ನಡುವೆ ಆಗ್ಗಾಗೆ ಜಗಳ ನಡೆಯುತ್ತಿತ್ತು. ನೆನ್ನೆ ರಾತ್ರಿ ಕುಡಿದ ಅಮಲಿನಲ್ಲಿ ಧರ್ಮೇಂದ್ರ ಆನಂದ್ ಅವರನ್ನು ಕೊಲೆ ಮಾಡಿದ್ದಾರೆ. ಹತ್ಯೆ ಮಾಡಿದ ನಂತರ ಧಮೇಂದ್ರ ಅಲ್ಲಿ ಪರಾರಿಯಾಗಿದ್ದಾನೆ. ಇದೀಗ ಹಾಸನ ನಗರದ ಕೆ.ಆರ್.ಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. ತೀವ್ರ ರಕ್ತಸ್ರಾವದಿಂದ ಆನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:02 am, Thu, 29 January 26