ಕಾನ್ಸ್ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ ಪ್ರಕರಣ: ಹಾಸನ ಎಸ್ಪಿ ಶ್ರೀನಿವಾಸ ಗೌಡ ಪ್ರತಿಕ್ರಿಯೆ
ಕಾನ್ಸ್ಟೇಬಲ್ ಗೆ ಮಧ್ಯಾಹ್ನ ಊಟ ಮಾಡದೆ ಇದ್ದ ಕಾರಣ ಬಿಪಿ ವ್ಯತ್ಯಾಸ ಆಗಿದೆ ಅಷ್ಟೇ ಎಂದು ಕಾನ್ಸ್ಟೇಬಲ್ ಮೇಲೆ ಹಾಸನ ಉಪವಿಭಾಗದ ಡಿವೈಎಸ್ಪಿ ಉದಯಭಾಸ್ಕರ್ ಹಲ್ಲೆ ಮಾಡಿರುವುದನ್ನು ಎಸ್ಪಿ ಶ್ರೀನಿವಾಸ ಗೌಡ ಅಲ್ಲಗಳೆದಿದ್ದಾರೆ. ಇದೊಂದು ಆಕಸ್ಮಿಕ ಘಟನೆ ಎಂದು ಸ್ಪಷ್ಟನೆ ನೀಡಿರುವ ಎಸ್ಪಿ, ತಮ್ಮ ಸಮ್ಮುಖದಲ್ಲೇ ನಡೆದ ಘಟನೆ ಬಗ್ಗೆ ವಿವರಿಸಿದರು.
ಹಾಸನ: ಹಾಸನ ನಗರ ಠಾಣೆ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ ಆರೋಪ ಪ್ರಕರಣದ ಬಗ್ಗೆ ಹಾಸನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶ್ರೀನಿವಾಸ ಗೌಡ ಪ್ರತಿಕ್ರಿಯಿಸಿದ್ದಾರೆ. ನಿನ್ನೆ ಶುಕ್ರವಾರ ಠಾಣೆ ಪರಿವೀಕ್ಷಣೆ ವೇಳೆ ಶಸ್ತ್ರಾಸ್ತ್ರ ಸಂಬಂಧ ವಿವರಣೆ ಕೇಳಿದರು. ಆ ವೇಳೆ ಕಾನ್ಸ್ಟೇಬಲ್ ವೇಣುಗೋಪಾಲ ಸರಿಯಾಗಿ ವಿವರಣೆ ನೀಡಲಿಲ್ಲ. ಹಾಗಾಗಿ ಡಿವೈಎಸ್ಪಿ ಅವರನ್ನು ಗದರಿದರು. ನಾನೇ ಹೇಳಿಕೊಡ್ತಿನಿ ಎಂದು ಅವರಿಂದ ವೆಪನ್ ಪಡೆಯೋ ವೇಳೆ ಅವರ ಮಾಸ್ಕ್ ಗೆ ಕೈ ತಾಗಿತ್ತು. ಡಿವೈಎಸ್ಪಿ ಉದ್ದೇಶಪೂರ್ವಕವಾಗಿ ಅವರ ಮೇಲೆ ಕೈ ಮಾಡಿಲ್ಲ ಎಂದು ಎಸ್ಪಿ ಶ್ರೀನಿವಾಸ ಗೌಡ ಹೇಳಿದ್ದಾರೆ.
ಕಾನ್ಸ್ಟೇಬಲ್ ಗೆ ಮಧ್ಯಾಹ್ನ ಊಟ ಮಾಡದೆ ಇದ್ದ ಕಾರಣ ಬಿಪಿ ವ್ಯತ್ಯಾಸ ಆಗಿದೆ ಅಷ್ಟೇ ಎಂದು ಕಾನ್ಸ್ಟೇಬಲ್ ಮೇಲೆ ಹಾಸನ ಉಪವಿಭಾಗದ ಡಿವೈಎಸ್ಪಿ ಉದಯಭಾಸ್ಕರ್ ಹಲ್ಲೆ ಮಾಡಿರುವುದನ್ನು ಎಸ್ಪಿ ಶ್ರೀನಿವಾಸ ಗೌಡ ಅಲ್ಲಗಳೆದಿದ್ದಾರೆ. ಇದೊಂದು ಆಕಸ್ಮಿಕ ಘಟನೆ ಎಂದು ಸ್ಪಷ್ಟನೆ ನೀಡಿರುವ ಎಸ್ಪಿ, ತಮ್ಮ ಸಮ್ಮುಖದಲ್ಲೇ ನಡೆದ ಘಟನೆ ಬಗ್ಗೆ ವಿವರಿಸಿದರು. ಜೂನ್ 23 ರ ಸಂಜೆ ಹಾಸನ ನಗರ ಠಾಣೆ ಪರಿವೀಕ್ಷಣೆ ವೇಳೆ ಕಾನ್ಸ್ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ ಆರೋಪ ಕೇಳಿ ಬಂದಿತ್ತು.
ನಮ್ಮದು ಶಿಸ್ತಿನ ಇಲಾಖೆ, ಕೆಲಸದ ವೇಳೆ ನಮ್ಮ ಕೆಳ ಹಂತದ ಅಧಿಕಾರಿಗಳನ್ನ ಶಿಸ್ತಿನಿಂದ ನಡೆಸಿಕೊಳ್ಳಬೇಕಾಗುತ್ತೆ. ಘಟನೆಯ ಹಿಂದೆ ವೈಯಕ್ತಿಕ ದ್ವೇಷವಾಗಲಿ, ಯಾವುದೇ ವೈಯಕ್ತಿಕ ಹಿನ್ನೆಲೆಯಲ್ಲಿ ನಡೆದಿಲ್ಲ. ಹೇಳಿಕೊಡುವ ಹುಮ್ಮಸ್ಸಿನಲ್ಲಿ ನಡೆದಿರೊ ಘಟನೆ ಇದಾಗಿದೆ. ಆದರೂ ಈ ಬಗ್ಗೆ ಡಿವೈಎಸ್ಪಿ ಅವರಿಗೆ ವಾರ್ನ್ ಮಾಡಿ, ತಾಳ್ಮೆಯಿಂದ ವರ್ತಿಸುವಂತೆ ಹೇಳಿದ್ದೇನೆ. ಇಬ್ಬರನ್ನೂ ಕೂಡ ಕರೆಸಿ ಮಾತನಾಡಿ, ಪರಿಸ್ಥಿತಿ ಅರ್ಥ ಮಾಡಿಸಿದ್ದೇನೆ ಎಂದು ಎಸ್ಪಿ ಶ್ರೀನಿವಾಸ ವಿವರಣೆ ನೀಡಿದ್ದಾರೆ.
Also Read:
ಹಾಸನ ಎಸ್ಪಿ ಸಮ್ಮುಖದಲ್ಲೇ ಕಾನ್ಸ್ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ, ಆಸ್ಪತ್ರೆಗೆ ದಾಖಲು Also Read: ಭ್ರೂಣ ಪತ್ತೆ ಪ್ರಕರಣ: ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ಎಂದ ಆರೋಗ್ಯ ಸಚಿವ ಸುಧಾಕರ್, ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ದಿಢೀರ್ ದಾಳಿ
Published On - 4:00 pm, Sat, 25 June 22