ಹಾಸನ: DySP ಉದಯ್ ಭಾಸ್ಕರ್(Hassan DySP Uday Bhaskar) ನಿಷ್ಪಕ್ಷಪಾತವಾಗಿ ಕೆಲಸ ಮಾಡದ ಆರೋಪದ ಮೇಲೆ ಉದಯ್ ಭಾಸ್ಕರ್ ವಿರುದ್ಧ ಕ್ರಮಕ್ಕೆ ಹೆಚ್ಡಿ ರೇವಣ್ಣ(HD Revanna) ಒತ್ತಾಯಿಸಿದ್ದಾರೆ. ರೇವಣ್ಣ ಅವರ ಆರೋಪಕ್ಕೆ ಬೇಸತ್ತು DySP ಉದಯ್ ಭಾಸ್ಕರ್ ಸ್ವಯಂ ವರ್ಗಾವಣೆ ಕೋರಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ವರ್ಗಾವಣೆಗೆ ಕೋರಿದ್ದಾರೆ. ಹೆಚ್ಡಿ ರೇವಣ್ಣ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ನಾನು ನಿಷ್ಪಕ್ಷಪಾತ, ನೇರ ನುಡಿ ವ್ಯಕ್ತಿತ್ವವುಳ್ಳವನು. ಅವರ ಒತ್ತಾಯಕ್ಕೆ ಮಣಿಯದ ಕಾರಣ ಅನಗತ್ಯ ಆರೋಪ ಮಾಡ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡಿ ಮೇಲಧಿಕಾರಿಗಳಿಗೆ ಒತ್ತಡ ಹಾಕ್ತಿದ್ದಾರೆ. ಇದರಿಂದ ಮೇಲಧಿಕಾರಿಗಳಿಗೂ ಇರಿಸುಮುರಿಸು ಉಂಟಾಗುತ್ತದೆ ಎಂದು ಹೆಚ್.ಡಿ.ರೇವಣ್ಣ ವಿರುದ್ಧ DySP ಉದಯ್ ಭಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕುಂದಗೋಳ ಕ್ಷೇತ್ರದಿಂದ ಎಂಆರ್ ಪಾಟೀಲ್ಗೆ ಟಿಕೆಟ್ ಪಕ್ಕಾ: ಜಗದೀಶ್ ಶೆಟ್ಟರ್ ಹಳೆ ವಿಡಿಯೋ ವೈರಲ್
ಹದಿನೈದು ವರ್ಷಗಳ ಹಿಂದೆ ಹಾಸನದಲ್ಲಿ ಪಿಎಸ್ ಐ ಆಗಿ ಕೆಲಸ ಮಾಡಿದ್ದು ಈಗ ಡಿವೈಎಸ್ಪಿ ಆಗಿ ಹಾಸನದಲ್ಲಿದಾರೆ. ಇವರು ಬಿಜೆಪಿ ಜೊತೆ ಶಾಮೀಲಾಗಿದಾರೆ. ಇವರ ವ್ಯಾಪ್ತಿಯ ಠಾಣೆಗಳಲ್ಲಿ ಬಿಜೆಪಿ ಮುಖಂಡರೇ ಇರ್ತಾರೆ. ರೌಡಿ ಶೀಟರ್ಗಳ ಎಲ್ಲ ಕೇಸ್ ಗಳ ರಾಜಿ ಸಂಧಾನ ಮಾಡಿಸ್ತಾರೆ. ಜೆಡಿಎಸ್ ಮುಖಂಡರ ಮೇಲೆ ವಿನಾಕಾರಣ ಕೇಸ್ ಹಾಕಿಸ್ತಾರೆ ಎಂದು ರೇವಣ್ಣ ಪದೇ ಪದೆ ಆರೋಪ ಮಾಡಿದ್ದಾರೆ. ಇವರನ್ನು ಕೂಡಲೆ ವರ್ಗಾವಣೆ ಮಾಡಿ ಎಂದು ಒತ್ತಾಯ ಕೂಡ ಮಾಡಿದ್ದಾರೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಕೊಲೆಯಾದ ಹಾಸನ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಕೇಸ್ ನಲ್ಲಿ ಇವರು ಆರೋಪಿಗಳಿಗೆ ಸಹಾಯ ಮಾಡಿದ್ದರು ಎಂದು ಕೂಡ ರೇವಣ್ಣ ಆರೋಪ ಮಾಡಿದ್ರು ಹಾಗಾಗಿ ತಮ್ಮ ವಿರುದ್ದ ಪದೇ ಪದೇ ಆರೋಪ ಹಿನ್ನೆಲೆಯಲ್ಲಿ ಮನನೊಂದು ಸ್ವಯಂ ವರ್ಗಾವಣೆಗೆ ಉದಯ್ ಭಾಸ್ಕರ್ ಮನವಿ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ