ಹಾಸನ: ಬುದ್ಧಿಮಾಂದ್ಯ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೋ ಮಾಡಿ ಸಂತ್ರಸ್ತೆಯ ಸಹೋದರನಿಗೆ ಕಳಿಸಿದ ದುರುಳರು
ಹಾಸನದಲ್ಲೊಂದು ಪೈಶಾಚಿಕ ಕೃತ್ಯ ನಡೆದಿದೆ. ಬುದ್ಧಿಮಾಂದ್ಯ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ. ದುರುಳರು ಅತ್ಯಾಚಾರವೆಸಗಿದ್ದಲ್ಲದೆ, ವಿಡಿಯೋ ಮಾಡಿ ಸಂತ್ರಸ್ತೆಯ ಸಹೋದರನಿಗೆ ಕಳುಹಿಸಿ ಡಿಲೀಟ್ ಕೂಡ ಮಾಡಿದ್ದಾರೆ. ಸದ್ಯ ಸಹೋದರನ ದೂರು ದಾಖಲಿಸಿದ್ದು, ಪೊಲೀಸರು ಮೂವರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ.

ಹಾಸನ, ಆಗಸ್ಟ್ 09: ಬುದ್ಧಿಮಾಂದ್ಯ ಯುವತಿ (girl) ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪ ಕೇಳಿಬಂದಿದ್ದು, ವಿಡಿಯೋ ಮಾಡಿ ಸಂತ್ರಸ್ತೆಯ ಸಹೋದರನಿಗೆ ಕಳಿಸಿರುವಂತಹ ಘಟನೆ ಹಾಸನದ (Hassan) ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಘಟನೆ ಸಂಬಂಧ ಸಂತ್ರಸ್ತೆ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ದುರುಳರು ಬುದ್ಧಿಮಾಂದ್ಯ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಆ ಪೈಶಾಚಿಕ ಕೃತ್ಯದ ವಿಡಿಯೋವನ್ನು ಸಂತ್ರಸ್ತೆಯ ಸಹೋದರನಿಗೆ ಕಳುಹಿಸಿ ಬಳಿಕ ಡಿಲೀಟ್ ಮಾಡಿದ್ದಾರೆ. ಇತ್ತ ವಿಡಿಯೋ ನೋಡಿದ ಸಂತ್ರಸ್ತೆಯ ಕುಟುಂಬ ಬೆಚ್ಚಿಬಿದ್ದಿದೆ.
ಇದನ್ನೂ ಓದಿ: ಬೆಂಗಳೂರು: ಮಹಿಳೆ ಎದುರು ಪ್ಯಾಂಟ್ ಬಿಚ್ಚಿ ಸೆಕ್ಯೂರಿಟಿಯಿಂದ ಅಸಭ್ಯ ವರ್ತನೆ!
ಸದ್ಯ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆ ಸಹೋದರ ಪೊಲೀಸರಿಗೆ ದೂರು ಹಿನ್ನಲೆ ಅಬ್ದುಲ್ ಅಫ್ತಾಬ್, ರಾಜಿಕ್ ಪಾಷಾ ಮತ್ತು ಉಮ್ರಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಹುಡುಕಾಟದ ಜೊತೆಗೆ ಅತ್ಯಾಚಾರ ನಡೆದ ಸ್ಥಳ, ಯಾವಾಗ ನಡೆದಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.
ಮಸಿದೀಯಲ್ಲಿ ನೀಚ ಕೃತ್ಯ: ಆರೋಪಿ ಬಂಧನ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮಸೀದಿ ವೊಂದರಲ್ಲಿ ಅಪ್ರಾಪ್ತೆಯ ಮೇಲೆ ಓರ್ವ ವ್ಯಕ್ತಿ ಅತ್ಯಾಚಾರ ಎಸಗಿದ್ದ. ಎರಡು ವರ್ಷಗಳ ಹಿಂದೆ ಈ ಮಸೀದಿಗೆ ಮುಧೋಳ ತಾಲೂಕಿನ ಮಹಾಲಿಂಗಪುರದ ತುಫೇಲ್ ಅಹ್ಮದ್ ನಾಗರ್ಚಿ ಹಪೀಜ್ ಆಗಿ ನೇಮಕಗೊಂಡಿದ್ದ. ಮಸೀದಿಯಲ್ಲಿ ಪ್ರಾರ್ಥನೆ ಮಾಡಿಸುವುದು ಹಪೀಜ್‌ಗಳ ಕೆಲಸ. ಮೊದಲೇ ಊರಿಂದ ತಂದೆ ತಾಯಿ ಜೊತೆಗೆ ಜಗಳ ಮಾಡಿಕೊಂಡು ಬಂದಿದ್ದ ಈ ತುಫೇಲ್ ಚಿಕ್ಕಮ್ಮನ ಮನೆಯ ಪಕ್ಕದಲ್ಲಿರುವ ಮಸೀದಯಲ್ಲಿ ಪ್ರಾರ್ಥನೆ ಮಾಡಿಸುವ ಕೆಲಸಕ್ಕೆ ಬಂದಿದ್ದ.
ಇದನ್ನೂ ಓದಿ: ಬೆಂಗಳೂರು: ಪ್ರತಿಷ್ಠಿತ ಕಾಲೇಜ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ; ಪಿಜಿ ಮಾಲೀಕನ ಬಂಧನ
ಬರೀ ಕೆಟ್ಟ ಕೆಲಸ ಮಾಡ್ತಾ ಓಡಾಡ್ತಿದ್ದವನನ್ನ ಸುಧಾರಿಸಿದರೆ ಆಯ್ತು ಅಂತಾ ಕರೆದುಕೊಂಡು ಬಂದವರು ಅಲ್ಲೇ ಮಸೀದಿಯಲ್ಲೇ ಇರಿಸಿಕೊಂಡಿದ್ದರು. ಹೀಗಿದ್ದಾಗಲೇ ಮನೆಯ ಪಕ್ಕದಲ್ಲಿದ್ದ ಐದು ವರ್ಷದ ಬಾಲಕಿಯನ್ನ ಪುಸಲಾಯಿಸಿ ಮಸೀದಿ ಒಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಬಾಲಕಿ ನೋವು ಅಂತಾ ತಾಯಿ ಮುಂದೆ ಹೇಳಿಕೊಂಡಾಗ ಘಟನೆ ಬೆಳಕಿಗೆ ಬಂದಿತ್ತು. ಈ ವೇಳೆ ಮುಖಂಡರು ಹಾಗೂ ಬಾಲಕಿ ತಂದೆ ಸೇರಿಕೊಂಡು ಕೇಸ್ ಅದು ಅಂತಾ ಆದರೆ ಸಮಸ್ಯೆ ಆಗುತ್ತೆ ಅಂದುಕೊಂಡು ಪ್ರಕರಣ ಅಲ್ಲೇ ಮುಚ್ಚಿ ಹಾಕುವ ಕೆಲಸ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ವಿಡಿಯೋಗಳು ಸಿಕ್ಕ ಬಳಿಕ ಆರೋಪಿಯನ್ನು ಇತ್ತೀಚೆಗೆ ಬಂಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



