ಹಾಸನದಲ್ಲಿ ಆನ್​ಲೈನ್​ ಸಾಲ ಪಡೆದ ವ್ಯಕ್ತಿಗೆ ಕಂಪನಿ ಕಿರುಕುಳ ಪ್ರಕರಣ; ಸಾಯುವ ಮುನ್ನ ವಿಡಿಯೋ ಮಾಡಿರುವ ಮೃತ ವ್ಯಕ್ತಿ

| Updated By: sandhya thejappa

Updated on: Mar 15, 2022 | 8:49 AM

ಹದಿನೆಂಟರಿಂದ ಇಪ್ಪತ್ತು ಚೆಕ್​ಗಳು, ದಾಖಲೆಗಳನ್ನು ಕೊಡುತ್ತಿಲ್ಲ. ಮೂರು ಲಕ್ಷ ಸಾಲಕ್ಕೆ ಬಡ್ಡಿ ಹದಿಮೂರು ಲಕ್ಷ ಆಗಿದೆ ಎಂದು ಎಲ್ಲರು ಕೇಸ್​ಗಳನ್ನ ಹಾಕುತ್ತಿದ್ದಾರೆ ಅಂತ ವಿಷದ ಬಾಟಲ್ ಇಟ್ಟುಕೊಂಡು ಅಂಬರೀಶ್ ಕಣ್ಣೀರಿಟ್ಟು ವಿಡಿಯೋ ಮಾಡಿದ್ದಾರೆ.

ಹಾಸನದಲ್ಲಿ ಆನ್​ಲೈನ್​ ಸಾಲ ಪಡೆದ ವ್ಯಕ್ತಿಗೆ ಕಂಪನಿ ಕಿರುಕುಳ ಪ್ರಕರಣ; ಸಾಯುವ ಮುನ್ನ ವಿಡಿಯೋ ಮಾಡಿರುವ ಮೃತ ವ್ಯಕ್ತಿ
ಸಾಯುವ ಮುನ್ನ ಅಂಬರೀಶ್ ವಿಡಿಯೋ ಮಾಡಿದ್ದಾರೆ
Follow us on

ಹಾಸನ: ಮೀಟರ್ ಬಡ್ಡಿ ಸಾಲದ ಕಿರುಕುಳಕ್ಕೆ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಸಾಯುವ ಮುನ್ನ ಮೃತ ವ್ಯಕ್ತಿ ಅಂಬರೀಶ್ ವಿಡಿಯೋ ಮಾಡಿದ್ದಾರೆ. ನನ್ನ ಸಾವಿಗೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ. ತಿಂಗಳಿಗೆ ಶೇ.50, 30, 52 ಬಡ್ಡಿ ತೆಗೆದುಕೊಂಡಿದ್ದಾರೆ. ನರೇಂದ್ರ, ರಾಜಪ್ಪ, ಸತ್ಯಮಂಗಲದ ಜಗ ಎಂಬುವವರಿಗೆ ಚೆಕ್ಗಳಿಗೆ ನಾನು ಸಹಿ ಹಾಕಿ ಕೊಟ್ಟಿದ್ದೆ. ಕೊರೊನಾ (Coronavirus) ಬರುವ ಮುಂಚೆಯಿಂದ ವ್ಯವಹಾರ ಮಾಡಿದ್ದೆ. ಎಲ್ಲರಿಗೂ ಇದುವರೆಗೆ ಬಡ್ಡಿ ಕೊಟ್ಟಿದ್ದೇನೆ. ನನ್ನ ಇನ್ವಾಯ್ಸ್, ಬ್ಯುಸಿನೆಸ್ ನೋಡಿ ಅವರು ಸಾಲ ಕೊಟ್ಟಿದ್ದರು. ನನ್ನ ಹೆಂಡತಿ ಸಹಿ ಮಾಡಿ ಕೊಟ್ಟಿದ್ದೇನೆ. ಅದೊಂದು ಮೋಸ ಮಾಡಿದ್ದೇನೆ ಅಂತ ಹೇಳಿದ್ದಾರೆ.

ಹದಿನೆಂಟರಿಂದ ಇಪ್ಪತ್ತು ಚೆಕ್​ಗಳು, ದಾಖಲೆಗಳನ್ನು ಕೊಡುತ್ತಿಲ್ಲ. ಮೂರು ಲಕ್ಷ ಸಾಲಕ್ಕೆ ಬಡ್ಡಿ ಹದಿಮೂರು ಲಕ್ಷ ಆಗಿದೆ ಎಂದು ಎಲ್ಲರು ಕೇಸ್​ಗಳನ್ನ ಹಾಕುತ್ತಿದ್ದಾರೆ ಅಂತ ವಿಷದ ಬಾಟಲ್ ಇಟ್ಟುಕೊಂಡು ಅಂಬರೀಶ್ ಕಣ್ಣೀರಿಟ್ಟು ವಿಡಿಯೋ ಮಾಡಿದ್ದಾರೆ. ಹಾಸನದ ಉದಯಗಿರಿಯ ನಿವಾಸಿ ಅಂಬರೀಶ್ ಭಾನುವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೂಲತಃ ಹಾಸನ ನಗರದ ಅಂಬರೀಶ್ ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿದ್ರು. ಸ್ವಂತ ಕಂಪನಿ ಮಾಡಿ ಆನ್​ಲೈನ್​ ಆಲ್ಲಿ  ಪಡೆದುಕೊಂಡಿದ್ದಾರೆ, ಆದರೆ ಕೊರೊನಾದಿಂದ ನಷ್ಟವಾಗಿ ಸಾಲ ತೀರಿಸಲು ಆಗದಿದ್ದಾಗ ಸಾಲಕೊಟ್ಟವರು ಲೀಗಲ್ ನೊಟೀಸ್ ಕೊಟ್ಟಿದ್ರು, ದೆಹಲಿ ಕೋರ್ಟ್​ನಲ್ಲಿ ಕೇಸ್ ಹಾಕಿ ಮನೆಗೆ ಬೌನ್ಸರ್ಸ್ ಬರ್ತಾರೆ, ನಿನ್ನನ್ನ ಎಳೆದೊಯ್ತಾರೆ ಎಂದು ಬೆದರಿಸೋಕೆ ಶುರುಮಾಡಿದ್ರು. ಇದಕ್ಕೂ ಮುಂದೆ ಹೋಗಿ ಅಂಬರೀಶ್ ನಂಬರ್ ಹ್ಯಾಕ್ ಮಾಡಿ ಅವರ ಎಲ್ಲಾ ವಾಟ್ಸಾಪ್ ಕಾಂಟ್ಯಾಕ್ಟ್ ಗಳಿಗೆ ಅಂಬರೀಶ್ ಹೆಸರಿನಲ್ಲಿ ವಿಡಿಯೋ ಮಾಡಿ ಈತ ಮೋಸಗಾರ, ಅಂತೆಲ್ಲಾ ಅಶ್ಲೀಲ ಪದಗಳ ಮೂಲಕ ನಿಂದಿಸಿ ಪೋಸ್ಟ್ ಮಾಡಿದ್ರು. ಇದ್ರಿಂದ ಮನನೊಂದಿದ್ದ ಅಂಬರೀಶ್  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು, ಏಳು ದಿನಗಳ ಬಳಿಕ ಅಂದರೆ ಮಾರ್ಚ್​ 13ಕ್ಕೆ ಚಿಕಿತ್ಸೆ ಫಲಿಸದೆ ಅಂಬರೀಶ್ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ

ಉಕ್ರೇನ್ ಯುದ್ಧದ ಪರಿಣಾಮ, ಪಾಕ್ ನೆಲಕ್ಕೆ ಹಾರಿದ ಭಾರತದ ಕ್ಷಿಪಣಿ ಬಗ್ಗೆ ಇಂದು ಸಂಸತ್ತಿನಲ್ಲಿ ಸರ್ಕಾರದಿಂದ ವಿವರಣೆ

‘ಜೇಮ್ಸ್​’ ಬಿಡುಗಡೆಗೆ ಕೌಂಟ್​ಡೌನ್​: ವಿದೇಶದಲ್ಲೂ ಕಾರ್​ ರ‍್ಯಾಲಿ ಮಾಡಿ, ಪಟಾಕಿ ಹೊಡೆಯಲಿರುವ ಫ್ಯಾನ್ಸ್​

Published On - 8:45 am, Tue, 15 March 22