ಸಾಲ ತೀರಿಸಲಿಲ್ಲ ಎಂದು ವ್ಯಕ್ತಿಯನ್ನು ನಗ್ನಗೊಳಿಸಿ ಹಲ್ಲೆ ನಡೆಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿದ ಕಿರಾತಕ

ಸಾಲ ತೀರಿಸಲಿಲ್ಲ ಎಂದು ವ್ಯಕ್ತಿಯನ್ನು ನಗ್ನಗೊಳಿಸಿ ಹಲ್ಲೆ ನಡೆಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿದ ಕಿರಾತಕ
ಪ್ರಾತಿನಿಧಿಕ ಚಿತ್ರ

ಹಲ್ಲೆಗೊಳಗಾಗಿರುವ ಸತೀಶ್, 2 ಲಕ್ಷ ಸಾಲ‌ ಮಾಡಿದ್ದ. ಸತೀಶ್ ಸಾಲ ವಾಪಸ್ ನೀಡದ ಕಾರಣ ಮಂಜು ಅಲಿಯಾಸ್ ಪುಲಿ ಮಂಜು ಎಂಬುವವನು ಸತೀಶ್ನನ್ನು ನಗ್ನಗೊಳಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದ

TV9kannada Web Team

| Edited By: Ayesha Banu

Mar 14, 2022 | 2:59 PM

ದೇವನಹಳ್ಳಿ: ಕೊಟ್ಟ ಸಾಲ 2 ಲಕ್ಷ ಹಣ ವಾಪಸ್ ಕೊಡಲಿಲ್ಲ ಎಂದು ವ್ಯಕ್ತಿಯನ್ನ ನಗ್ನಗೊಳಿಸಿ ಡ್ಯಾನ್ಸ್ ಮಾಡಿಸಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಬೆಂಗಳೂರು ಪೂರ್ವ ತಾಲೂಕಿನ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆ.ಆರ್.ಪುರಂ‌ನ ಸತೀಶ್ ಎಂಬುವರನ್ನು ನಗ್ನಗೊಳಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು‌ ವಿಕೃತಿ ಮೆರೆಯಲಾಗಿದೆ.

ಹಲ್ಲೆಗೊಳಗಾಗಿರುವ ಸತೀಶ್, 2 ಲಕ್ಷ ಸಾಲ‌ ಮಾಡಿದ್ದ. ಸತೀಶ್ ಸಾಲ ವಾಪಸ್ ನೀಡದ ಕಾರಣ ಮಂಜು ಅಲಿಯಾಸ್ ಪುಲಿ ಮಂಜು ಎಂಬುವವನು ಸತೀಶ್ನನ್ನು ನಗ್ನಗೊಳಿಸಿ ದೊಣ್ಣೆಗಳಿಂದ ಹಲ್ಲೆ ನಡೆಸಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದ. 2 ತಿಂಗಳಿಂದೆ ನಡೆದಿರೂ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಸತೀಶ್ನ ಪತ್ನಿ ಘಟನೆ ಸಂಬಂಧ ಮೊದಲಿಗೆ ಕೆಆರ್ ಪುರಂ ಪೊಲೀಸರಿಗೆ ದೂರು ನೀಡಿದ್ದರು. ನಂತರ ಆವಲಹಳ್ಳಿ ವ್ಯಾಪ್ತಿಯಲ್ಲಿ ಘಟನೆ ನಡೆದ ಕಾರಣ ಕೇಸ್ ಆವಲಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ. ಹಲ್ಲೆ ನಡೆಸಿದ ನಂತರ ಆರೋಪಿ ದಯಾಲು ಮಂಜು ಅಲಿಯಾಸ್ ಪುಲಿ ಮಂಜು ನಾಪತ್ತೆಯಾಗಿದ್ದಾನೆ. ಆವಲಹಳ್ಳಿ ಪೊಲೀಸರಿಂದ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ‌ ಶೋಧ ಕಾರ್ಯ ಶುರು ಮಾಡಲಾಗಿದೆ.

ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ ಇನ್ನು ಮತ್ತೊಂದು ಕಡೆ ರಾಯಚೂರು ಲಿಂಗಸುಗೂರು ತಾಲೂಕಿನ ಕಸಬಾ ಲಿಂಗಸುಗೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಚೈತ್ರಾ(19) ಶವ ಪತ್ತೆಯಾಗಿದೆ. ಚೈತ್ರಾ ಪತಿ ಕುಪ್ಪಣ್ಣ ವಿರುದ್ಧ ಕೊಲೆ‌ ಆರೋಪ ಕೇಳಿ ಬಂದಿದ್ದು ಪತಿ ಕುಪ್ಪಣ್ಣ ಸೇರಿ ಒಟ್ಟು 6 ಜನರ‌ ವಿರುದ್ಧ ಲಿಂಗಸುಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೌಡಿಶೀಟರ್ ಹತ್ಯೆ; ನಾಲ್ವರ ಬಂಧನ ಹುಬ್ಬಳ್ಳಿ: ರೌಡಿಶೀಟರ್ ಹತ್ಯೆ ಕೇಸ್​ಗೆ ಸಂಬಂಧಿಸಿ ಹಳೇ ಹುಬ್ಬಳ್ಳಿಯ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಮಾಚ್೯ 12 ರಂದು ರೌಡಿ ಶೀಟರ್ ಅಕ್ಬರ್ ಮುಲ್ಲಾ ಹತ್ಯೆಯಾಗಿತ್ತು. ಹುಬ್ಬಳ್ಳಿಯ ಅರವಿಂದ್ ನಗರದಲ್ಲಿ ಹತ್ಯೆ ನಡೆದಿತ್ತು. ಹತ್ಯೆಯ ನಂತರ ನಾನೇ ಕೊಲೆ ಮಾಡಿದ್ದಾಗಿ ಸದಾನಂದ ಕುರ್ಲಿ ಶರಣಾಗಿದ್ದ. ಪಕ್ಕಾ ಪ್ಲ್ಯಾನ್ ಮಾಡಿಕೊಂಡೆ ಮರ್ಡರ್ ಮಾಡಿರೋದು ಎನ್ನೋದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಹತ್ಯೆಯ ಆರೋಪಿಗಳಾದ ನವೀನ್ ಪೆರೂರ, ರೋಹಿತ್, ವರುಣ್, ಗೋಪಾಲ ಮತ್ತು ಮಹೇಶ್​ನನ್ನ ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿ, ಸಿಸಿಬಿ ಪೊಲೀಸರಿಂದ ಹಂತಕರ ಜಾಡು ಪತ್ತೆಯಾಗಿದೆ. ಎರಡು ಗ್ಯಾಂಗ್ ಗಳ ಮಧ್ಯೆ ಫೈಟ್ ನಡೆದು ಅಕ್ಬರ್ ಮುಲ್ಲಾ ಗ್ಯಾಂಗ್ ಮುಗಿಸೋಕೆ ಸಂಚು ರೂಪಿಸಲಾಗಿತ್ತು.

ಬೈಕ್ ಗೆ ಟ್ಯಾಂಕರ್ ಡಿಕ್ಕಿ, ಓರ್ವ ಯುವಕ ಸಾವು ಕಲಬುರಗಿ: ನಗರದ ಹೊರವಲಯದ ಕೇಂದ್ರ ಕಾರಾಗೃಹದ ಬಳಿ ಟ್ಯಾಂಕರ್ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಸುದರ್ಶನ್(23) ಮೃತಪಟ್ಟಿದ್ದಾರೆ. ಶ್ರುತಿ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಲಬುರಗಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 2 ವರ್ಷ ಕೆಲಸ ಕೊಟ್ಟು ಜೀವನ ಪೂರ್ತಿ ಪಿಂಚಣಿ ಕೊಡುವ ಒಂದೇ ರಾಜ್ಯ ನಿಮ್ಮದು: ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

ಉತ್ತರ ಪ್ರದೇಶದಲ್ಲಿ ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿದ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ

Follow us on

Related Stories

Most Read Stories

Click on your DTH Provider to Add TV9 Kannada