ನರ್ಸ್ ಸಮವಸ್ತ್ರದಲ್ಲಿ ಬಂದು ನವಜಾತ ಶಿಶು ಅಪಹರಣ; ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡುಮಗು ಕಳ್ಳತನ!

ರಾತ್ರಿ ಏಳು ಗಂಟೆ ಸುಮಾರಿಗೆ ಆಸ್ಪತ್ರೆಗೆ ಎಂಟ್ರಿಯಾಗಿದ್ದ ಚೋರರು, ಕೆಲಹೊತ್ತು ಹೊಂಚು ಹಾಕಿ ತಡರಾತ್ರಿ 12 ಗಂಟೆ ವೇಳೆಗೆ ಹೆರಿಗೆ ವಾರ್ಡ್​ಗೆ ತೆರಳಿ ಹಸುಗೂಸು ಹೊತ್ತೊಯ್ದಿದ್ದಾರೆ. ನರ್ಸ್ ಸಮವಸ್ತ್ರ ಧರಿಸಿ ಹೊಂಚು ಹಾಕಿ ಮಗು ಎಸ್ಕೇಪ್ ಮಾಡಲಾಗಿದೆ. ಆಸ್ಪತ್ರೆ ಹಿಂಭಾಗದ ಬಾಗಿಲಿನಿಂದ ಮಗು ಅಪಹರಿಸಿ ಪರಾರಿಯಾಗಿದ್ದಾರೆ.

ನರ್ಸ್ ಸಮವಸ್ತ್ರದಲ್ಲಿ ಬಂದು ನವಜಾತ ಶಿಶು ಅಪಹರಣ; ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡುಮಗು ಕಳ್ಳತನ!
ಹಾಸನ ಸರ್ಕಾರಿ ಆಸ್ಪತ್ರೆ
Follow us
TV9 Web
| Updated By: ganapathi bhat

Updated on: Mar 14, 2022 | 12:55 PM

ಹಾಸನ: ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗು ಅಪಹರಣ ಮಾಡಿದ ಘಟನೆ ಹಾಸನ ಜಿಲ್ಲೆ ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಅಸ್ಸಾಂನ ಕೂಲಿ ಕಾರ್ಮಿಕ ಮಹಿಳೆಯ ಶಿಶು ಅಪಹರಣ ಮಾಡಲಾಗಿದೆ. ನರ್ಸ್ ಸಮವಸ್ತ್ರದಲ್ಲಿ ಬಂದು ಮಧ್ಯರಾತ್ರಿ ಶಿಶು ಅಪಹರಣ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆಸ್ಪತ್ರೆ ಹಿಂಬಾಗಿಲಿನಿಂದ ಬಂದು ಮಗು ಅಪಹರಿಸಿ ಪರಾರಿ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲದೆ, ಆಸ್ಪತ್ರೆಯ ಸಿಸಿ ಟಿವಿ ಕ್ಯಾಮರಾದಲ್ಲಿ ಕಳ್ಳರ ಕೈಚಳಕ ಸೆರೆ ಆಗಿದೆ. ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್​ರಿಂದ ದೂರು ನೀಡಲಾಗಿದೆ. ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮಹಿಳೆ ನಿನ್ನೆ ಸಂಜೆ ಏಳು ಗಂಟೆ ವೇಳೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅಸ್ಸಾಂ ಮೂಲದ ಕೂಲಿ ಕಾರ್ಮಿಕ ಮಹಿಳೆ ಅರಕಲಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಮಧ್ಯೆ, ರಾತ್ರಿ ಏಳು ಗಂಟೆ ಸುಮಾರಿಗೆ ಆಸ್ಪತ್ರೆಗೆ ಎಂಟ್ರಿಯಾಗಿದ್ದ ಚೋರರು, ಕೆಲಹೊತ್ತು ಹೊಂಚು ಹಾಕಿ ತಡರಾತ್ರಿ 12 ಗಂಟೆ ವೇಳೆಗೆ ಹೆರಿಗೆ ವಾರ್ಡ್​ಗೆ ತೆರಳಿ ಹಸುಗೂಸು ಹೊತ್ತೊಯ್ದಿದ್ದಾರೆ. ನರ್ಸ್ ಸಮವಸ್ತ್ರ ಧರಿಸಿ ಹೊಂಚು ಹಾಕಿ ಮಗು ಎಸ್ಕೇಪ್ ಮಾಡಲಾಗಿದೆ. ಆಸ್ಪತ್ರೆ ಹಿಂಭಾಗದ ಬಾಗಿಲಿನಿಂದ ಮಗು ಅಪಹರಿಸಿ ಪರಾರಿಯಾಗಿದ್ದಾರೆ.

ಚಿಕ್ಕೋಡಿ: ಅಪಘಾತಕ್ಕೆ ತುತ್ತಾಗಿದ್ದ ವೈದ್ಯ ಚಿಕಿತ್ಸೆ ಫಲಿಸದೇ ಸಾವು

ನಿನ್ನೆ (ಮಾರ್ಚ್ 13) ಸಾಯಂಕಾಲ ರಾಷ್ಟ್ರೀಯ ಹೆದ್ದಾರಿ 4ರ ಭೀಕರ ರಸ್ತೆ ಅಪಘಾತದಲ್ಲಿ ಬದುಕುಳಿದಿದ್ದ ವೈದ್ಯ ಸಚಿನ್ ಮುರಗೋಡ ಎಂಬವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನರಸಿಂಗಪೂರ ಗ್ರಾಮದ ಬಳಿ ಅಪಘಾತ ನಡೆದಿತ್ತು.ವೈದ್ಯ ಸಚಿನ್​ರನ್ನ ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಚಿನ್ ಸಾವನ್ನಪ್ಪಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 4ರ ರಸ್ತೆ ಬದಿ ನಿಂತಿದ್ದ ಕ್ಯಾಂಟರ್ ಗೆ ಇನೋವಾ ಕಾರು ಡಿಕ್ಕಿ ಆಗಿ ಅಪಘಾತ ಸಂಭವಿಸಿತ್ತು. ಸ್ಥಳದಲ್ಲೆ ವೈದ್ಯ ಸಚಿನ್ ಪತ್ನಿ ಶ್ವೇತಾ ಹಾಗೂ ಪುತ್ರಿ ಶಿಯಾ (ಶ್ರೇಯಾ) ಮೃತಪಟ್ಟಿದ್ದರು. ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ಇದನ್ನೂ ಓದಿ: ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು ಮತ್ತೊಂದು ಜೀವ ಬಲಿ; ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆಕ್ರೋಶ

ಇದನ್ನೂ ಓದಿ: ತುಮಕೂರಿನಲ್ಲಿ ತಾಯಿ ಎದುರೇ 17 ವರ್ಷದ ಮಗಳ ಅಪಹರಣ! ಬಾಗಿಲು ಮುರಿದು ಮನೆಗೆ ನುಗ್ಗಿ ಬಾಲಕಿ ಕಿಡ್ನ್ಯಾಪ್