ಹಾಸನ: 9 ವರ್ಷ ಸಂಸಾರ ಮಾಡಿ ಪತ್ನಿಗೆ ಕೈಕೊಟ್ಟ ಪತಿ; ಬೇರೊಂದು ಯುವತಿ ಜತೆ ಎಂಗೇಜ್ಮೆಂಟ್

| Updated By: preethi shettigar

Updated on: Nov 28, 2021 | 8:35 AM

ಕಾಲೇಜಿನಲ್ಲಿ ಪರಿಚಯವಾಗಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಅಕ್ಷತಾ ಹಾಗೂ ಲೋಹಿತ್ 9 ವರ್ಷಗಳ ಕಾಲ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದಾರೆ. ಆದರೆ ಅನ್ಯ ಜಾತಿಯ ಹುಡುಗಿ ಎನ್ನುವ ಕಾರಣಕ್ಕೆ ಲೋಹಿತ್ ತಂದೆ ಮಲ್ಲಿಕಾರ್ಜುನ ಹಾಗೂ ತಾಯಿ ಜಯಶೀಲಾ ಕಿರುಕುಳ ನೀಡುತ್ತಿದ್ದಾರೆ. ಈಗ ತನ್ನಿಂದ ಗಂಡನನ್ನು ದೂರ ಮಾಡಿ ಮೊದಲ ಮದುವೆ ವಿಚಾರವನ್ನೇ ಮುಚ್ಚಿಟ್ಟು ಮತ್ತೊಂದು ಮದುವೆ ಮಾಡಿಸುತ್ತಿದ್ದಾರೆ ಎಂದು ಅಕ್ಷತಾ ಆರೋಪ ಮಾಡಿದ್ದಾರೆ.

ಹಾಸನ: 9 ವರ್ಷ ಸಂಸಾರ ಮಾಡಿ ಪತ್ನಿಗೆ ಕೈಕೊಟ್ಟ ಪತಿ; ಬೇರೊಂದು ಯುವತಿ ಜತೆ ಎಂಗೇಜ್ಮೆಂಟ್
ಅಕ್ಷತಾ
Follow us on

ಹಾಸನ: ಪ್ರೀತಿಸಿ ಮದುವೆಯಾಗಿ 9 ವರ್ಷಗಳ ಕಾಲ ಸಂಸಾರ ಮಾಡಿ, ಪತ್ನಿಗೆ ಮೋಸ ಮಾಡಿದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ. ಮೊದಲ ಮದುವೆ ಮುಚ್ಚಿಟ್ಟು ಮತ್ತೊಂದು ಮದುವೆ ಆಗಲು ಪತಿ ಮುಂದಾಗಿದ್ದು, ಈಗಾಗಲೇ ನಿಶ್ಚಿತಾರ್ಥ (engagement) ಕೂಡ ಮಾಡಿಕೊಂಡಿದ್ದಾನೆ. ಹೀಗಾಗಿ ನೊಂದ ಪತ್ನಿ, ಪತಿ ಹಾಗೂ ಆತನ ಕುಟುಂಬದ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಲೇಜಿನಲ್ಲಿ ಪರಿಚಯವಾಗಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಅಕ್ಷತಾ ಹಾಗೂ ಲೋಹಿತ್ 9 ವರ್ಷಗಳ ಕಾಲ ಅನ್ಯೋನ್ಯವಾಗಿ ಸಂಸಾರ ನಡೆಸಿದ್ದಾರೆ. ಆದರೆ ಅನ್ಯ ಜಾತಿಯ ಹುಡುಗಿ ಎನ್ನುವ ಕಾರಣಕ್ಕೆ ಲೋಹಿತ್ ತಂದೆ ಮಲ್ಲಿಕಾರ್ಜುನ ಹಾಗೂ ತಾಯಿ ಜಯಶೀಲಾ ಕಿರುಕುಳ ನೀಡುತ್ತಿದ್ದಾರೆ. ಈಗ ತನ್ನಿಂದ ಗಂಡನನ್ನು ದೂರ ಮಾಡಿ ಮೊದಲ ಮದುವೆ ವಿಚಾರವನ್ನೇ ಮುಚ್ಚಿಟ್ಟು ಮತ್ತೊಂದು ಮದುವೆ ಮಾಡಿಸುತ್ತಿದ್ದಾರೆ ಎಂದು ಅಕ್ಷತಾ ಆರೋಪ ಮಾಡಿದ್ದಾರೆ.

ದಕ್ಷಿಣ ಕನ್ನಡ ಮೂಲದ ಯುವತಿ ಜೊತೆಗೆ ವಂಚಕ ಪತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಮದುವೆಯಾಗಿ 8 ವರ್ಷದ ಮಗನಿದ್ದರೂ ಬೇರೆ ಮದುವೆಯಾಗಲು ಲೋಹಿತ್ ಕುಟುಂಬ ಮುಂದಾಗಿದ್ದು, ಹುಡುಗಿಗೆ ಮೊದಲ ಮದುವೆ ವಿಚಾರ ಮುಚ್ಚಿಟ್ಟು ಲೋಹಿತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಹೀಗಾಗಿ ಸುಳ್ಳು ಹೇಳಿ ಹುಡುಗಿಯನ್ನು ನಂಬಿಸಿರುವ ಬಗೆಗಿನ ಆಡಿಯೋ ಸಾಕ್ಷಿ ಇಟ್ಟು ಕೊಂಡು ಕಾನೂನು ಹೋರಾಟಕ್ಕೆ ಪತ್ನಿ ಅಕ್ಷತಾ ಸಜ್ಜಾಗಿದ್ದಾರೆ. ಮಾವ ಮಲ್ಲಿಕಾರ್ಜುನ, ಅತ್ತೆ ಜಯಶೀಲ, ಮೈದುನ ದರ್ಶನ್ ಹಾಗೂ ಪತಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

ಪತಿ ಲೋಹಿತ್ ಆಡಿಯೋ ಜತೆಗೆ ಠಾಣೆ ಮೆಟ್ಟಿಲೇರಿದ ಪತ್ನಿ
ಅಮ್ಮನಿಗೆ ಅನಾರೋಗ್ಯ ಎಂದು ಸಂಬಂಧಿಕರ ಹುಡುಗಿ ಜೊತೆ ಎಂಗೇಜ್ಮೆಂಟ್ ನಾಟಕ ಮಾಡಿದ್ದೇನೆ ಎಂದು ಹೇಳಿರುವ ಲೋಹಿತ್ ಆಡಿಯೋ ಜತೆಗೆ ಪತ್ನಿ ದೂರು ನೀಡಿದ್ದಾರೆ. ಹೊಸದಾಗಿ ನಿಶ್ಚಿತಾರ್ಥ ಆಗಿರುವ ಹುಡುಗಿಗೆ ತನ್ನ ಮದುವೆ ಆಗಿಲ್ಲ ಎಂದು ಹೇಳಿರುವ ಆಡಿಯೋ ಕೂಡ ಸದ್ಯ ವೈರಲ್​ ಆಗಿದೆ.

ಈ ಆಡಿಯೋದಲ್ಲಿ ಅಕ್ಷತಾ ಅತ್ತೆ ಜಯಶೀಲಾ, ನಿಶ್ಚಿತಾರ್ಥ ಮಾಡಿಕೊಂಡ ಯುವತಿಗೆ, ನೀನು ನಾನು ಸೂಸೈಡ್ ಮಾಡ್ಕೊತಿನಿ ಎಂದು ಬ್ಲಾಕ್ ಮೇಲ್ ಮಾಡು, ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡ್ಕೊತಿನಿ ಅಂತಾ ಹೆದರಿಸು, ನಾನು ಹೇಳಿಕೊಟ್ಟೆ ಅಂತಾ ಯಾರಿಗೂ ಹೇಳಬೇಡಾ ಅಂತಾ ಹೇಳಿಕೊಟ್ಟಿದ್ದಾರೆ. ಮಗ ಲೋಹಿತ್​ಗೆ ಹೆದರಿಸಿ ಬೇಗ ಮದುವೆ ಆಗೊತರ ಮಾಡು ಎಂದು ಯುವತಿಗೆ ಲೋಹಿತ್​ ತಾಯಿ ಹೇಳುತ್ತಿರುವ ಆಡಿಯೋವನ್ನು ಕೂಡ ಅಕ್ಷತಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೊದಲೇ ಮದುವೆಯಾಗಿರುವ ವಿಚಾರ ಗೊತ್ತಾದ ಬಳಿಕ ಯುವತಿ ಈ ಎಲ್ಲಾ ಆಡಿಯೋಗಳನ್ನು ಮೊದಲ ಪತ್ನಿ ಅಂದರೆ ಅಕ್ಷತಾ ಅವರಿಗೆ ಕಳಿಸಿದ್ದಾರೆ.

ಇದನ್ನೂ ಓದಿ:
ಕೆಲಸ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ವಂಚನೆ! ಸಿಸಿಬಿ ಪೊಲೀಸರಿಂದ ಆರೋಪಿ ಅರೆಸ್ಟ್

ಹಾಸನ: 9 ವರ್ಷದಿಂದ ಪ್ರೀತಿಸಿದ ಯುವತಿ‌ ಕೈಕೊಟ್ಟ ಆರೋಪ; ಮನನೊಂದ‌ ಪ್ರೇಮಿ ಆತ್ಮಹತ್ಯೆಗೆ ಯತ್ನ

Published On - 8:24 am, Sun, 28 November 21