ಹಾಸನ: ಕಾಂಗ್ರೆಸ್ ಬಿ ಟೀಮಾ, ಜೆಡಿಎಸ್ ಬಿ ಟೀಮಾ ಎಂದು ತಿಳಿಯುತ್ತಿಲ್ಲ ಎಂದು ಹಾಸನದಲ್ಲಿ ಕಾಂಗ್ರೆಸ್(Congress), ಜೆಡಿಎಸ್(JDS) ವಿರುದ್ಧ R.ಅಶೋಕ್(R Ashok) ವಾಗ್ದಾಳಿ ನಡೆಸಿದ್ದಾರೆ. ಮೊನ್ನೆ ರಾಜ್ಯಸಭೆ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಕಾಲು ಹಿಡಿಯೋದೇ ಬಾಕಿ ಇತ್ತು. ಜೆಡಿಎಸ್ ಕಾಂಗ್ರೆಸ್ ಕಾಲು ಹಿಡಿಯುವ ಹಂತಕ್ಕೆ ಹೋದರು. ಕೇಂದ್ರದ ನಾಯಕರು ಸೋನಿಯಾ ಖರ್ಗೆ ರಾಹುಲ್ ಮಾತಾಡಿದ್ರು. ಇದರಿಂದ ಸ್ಪಷ್ಟವಾಗಿ ಅರ್ಥವಾಗುತ್ತೆ ಇವರಿಬ್ಬರ ನಡುವೆ ಏನೋ ಒಳಒಪ್ಪಂದ ಇದೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಒಳಒಪ್ಪಂದವಿಲ್ಲದೆ ಯಾಕೆ ರಾಜ್ಯಸಭೆ ಸೀಟ್ ಬಗ್ಗೆ ಮಾತಾಡ್ತಿದ್ರು. ಹೆಚ್.ಡಿ.ಕುಮಾರಸ್ವಾಮಿ ನಾನೇ ಮುಖ್ಯಮಂತ್ರಿ ಎನ್ನುತ್ತಾರೆ. HDK ಲಾಟರಿ ಥರಾ ಮುಖ್ಯಮಂತ್ರಿ ಇರಬಹುದು. ನಾವು ಯಾವುದೇ ಕಾರಣಕ್ಕೂ ಜೆಡಿಎಸ್ಗೆ ಬೆಂಬಲ ನೀಡಲ್ಲ. 120 ಗೆದ್ದು ಸಿಎಂ ಆಗ್ತಿನಿ ಅಂತಿಲ್ಲ, ಹೆಂಗಾಗ್ತಿನೊ ಏನಾಗ್ತಿನಿ ಗೊತ್ತಿಲ್ಲ ಆದ್ರೆ ಸಿಎಂ ಆಗ್ತಿನಿ ಅಂತಾರೆ. ಅವರಿಗೆ 120 ಸ್ಥಾನ ಗೆಲ್ಲೋ ವಿಶ್ವಾಸ ಇಲ್ಲ. ಯಾವುದೇ ಕಾರಣಕ್ಕು ನಾವು ಅವರಿಗೆ ಬೆಂಬಲ ನೀಡಲ್ಲ. ನಾವೇ ಸ್ವತಂತ್ರ ವಾಗಿ ಬಿಜೆಪಿ ಗೆಲ್ಲುತ್ತೆ. ಈಗಾಗಲೆ ದೇಶದಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದೆ. ಇನ್ನೇನು ಮೂರ್ನಾಲ್ಕು ದಿನದಲ್ಲಿ ಮಹಾರಾಷ್ಟ್ರದಲ್ಲೂ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ. ಇದನ್ನೂ ಓದಿ: ಆಸ್ಕರ್ ಸಮಿತಿಯಲ್ಲಿ ಭಾರತದ ಇಬ್ಬರಿಗೆ ಸ್ಥಾನ; ಸೂರ್ಯ, ಕಾಜೋಲ್ಗೆ ಸಿಕ್ತು ವಿಶೇಷ ಗೌರವ
ಈ ಹಿಂದೆನೇ ಬರಬೇಕಿತ್ತು ಆದರೆ ಉದ್ಧವ್ ಠಾಕ್ರೆ ಮಾಡಿದ ಅನ್ಯಾಯದಿಂದ ಆಗಿರಲಿಲ್ಲ. ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಹೆಸರಿನಲ್ಲಿ ಗೆದ್ದರು. ಬಳಿಕ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡರು. ಇದನ್ನ ಜನರು ಕ್ಷಮಿಸಲ್ಲ. ಅವರ ಶಾಸಕರೆಲ್ಲಾ ಒಂದಾಗಿದ್ದಾರೆ, ಅವರಲ್ಲಿ ಅವರು ಮತ್ತು ಅವರ ಮಗ ಮಾತ್ರ ಉಳಿತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಮುಸ್ಲಿಮ್ ಸಂಘಟನೆಗಳು ಹೊರ ಬಂದು ಮಾತನಾಡಬೇಕು
ಬಿಜೆಪಿ ನಾಯಕಿ ನೂಪುರ್ ಹೇಳಿಕೆ ಬೆಂಬಲಿಸಿದವನ ಶಿರಚ್ಛೇದ ಮಾಡಿರುವ ಘಟನೆ ಸಂಬಂಧ ಹಾಸನದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ. ಮುಸ್ಲಿಮ್ ಸಂಘಟನೆಗಳು ಹೊರ ಬಂದು ಮಾತನಾಡಬೇಕು. ಶಿರಚ್ಛೇದದ ಬಗ್ಗೆ ಮುಸ್ಲಿಮ್ ನಾಯಕರು ಮಾತನಾಡುತ್ತಿಲ್ಲ. ಬಟ್ಟೆ ಹೊಲೆಯಲು ಕೊಡುತ್ತೀನಿ ಎಂದು ಚಾಕು ಹಾಕಿದ್ದಾರೆ. ಇವರಿಗೆ ಧಮ್ ಇಲ್ಲ, ಇದನ್ನೆಲ್ಲಾ ಹೇಡಿಗಳು ಮಾಡುವ ಕೆಲಸ. ಭಯೋತ್ಪಾದಕ ಮುಸ್ಲಿಂ ಸಂಘಟನೆಯವರು ಹೀಗೆ ಮಾಡಿದ್ದಾರೆ. ಈ ಹಿಂದೆ ಸಾಕಷ್ಟು ಸಂಘಟನೆಗಳನ್ನ ಬ್ಯಾನ್ ಮಾಡಿದ್ದೇವೆ. ಬ್ಯಾನ್ ಮಾಡಿದ್ರೆ ಇನ್ನೊಂದು ಹೆಸರಲ್ಲಿ ಬರ್ತಾ ಇದ್ದಾರೆ. ರಾಜಸ್ಥಾನ ಸರ್ಕಾರ ತಪ್ಪು ಮಾಡಿದ್ದರೆ, ಸರ್ಕಾರ ಉಳಿಯಲ್ಲ ಎಂದು ಆರ್.ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಸರ್ಕಾರಿ ಪಿಯು ಕಾಲೇಜುಗಳಿಗೆ ಸೇರುವ ವಿದ್ಯಾರ್ಥಿನಿಯರು ಪಾವತಿಸುವ ಶುಲ್ಕಕ್ಕೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ
Published On - 4:43 pm, Wed, 29 June 22