Hassan News: ಹಣದ ವಿಚಾರವಾಗಿ ಗ್ರಾ.ಪಂ ಸದಸ್ಯೆಯ ಪತಿಗೆ ಧಮ್ಕಿ: ಸ್ಪಷ್ಟನೆ ನೀಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ

| Updated By: ವಿವೇಕ ಬಿರಾದಾರ

Updated on: Jan 25, 2023 | 2:37 PM

ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ವಾಸು ಎಂಬವರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಣಕ್ಕಾಗಿ ಧಮ್ಕಿ ಹಾಕಿರುವ ಆಡಿಯೋ ವೈರಲ್​ ಆಗಿದ್ದು, ಇದಕ್ಕೆ ಶಿವಲಿಂಗೇಗೌಡ ಸ್ಪಷ್ಟನೆ ನೀಡಿದ್ದಾರೆ.

Hassan News: ಹಣದ ವಿಚಾರವಾಗಿ ಗ್ರಾ.ಪಂ ಸದಸ್ಯೆಯ ಪತಿಗೆ ಧಮ್ಕಿ: ಸ್ಪಷ್ಟನೆ ನೀಡಿದ ಶಾಸಕ ಕೆ.ಎಂ.ಶಿವಲಿಂಗೇಗೌಡ
ಶಾಸಕ ಕೆಎಂ ಶಿವಲಿಂಗೇಗೌಡ (ಸಂಗ್ರಹ ಚಿತ್ರ)
Follow us on

ಹಾಸನ: ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ವಾಸು ಎಂಬವರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ (K. M. Shivalingegowda) ಹಣಕ್ಕಾಗಿ ಧಮ್ಕಿ ಹಾಕಿರುವ ಆಡಿಯೋ ವೈರಲ್​ ಆಗಿದ್ದು, ಇದಕ್ಕೆ ಶಿವಲಿಂಗೇಗೌಡ ಸ್ಪಷ್ಟನೆ ನೀಡಿದ್ದಾರೆ. ನನಗೆ ಸಹಕಾರ ಕೊಡಬೇಕು ಅಂತ ವಾಸುಗೆ ಫೋನ್​ ಮಾಡಿದ್ದೆ. ಆದರೆ ಅವನು ರೆಕಾರ್ಡ್​ ಮಾಡಿಕೊಳ್ಳುತ್ತಾನೆ ಅಂತ ನನಗೆ ಗೊತ್ತಿರಲಿಲ್ಲ. ಮೊದಲು ಆತ ಮಾತನಾಡಿದ್ದನ್ನು ಬಿಟ್ಟಿದ್ದಾನೆ ಎಂದು ಹೇಳಿದರು.
ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹ್ಯಾಂಡ್‌ಪೋಸ್ಟ್​​ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಏನೋ ಸ್ವಲ್ಪ ಕಷ್ಟದಲ್ಲಿ ಇದ್ದಾನೆ ಸಹಾಯ ಮಾಡಿ ಎಂದು ವಾಸು ಹೇಳಿದ್ದರು. ಕಷ್ಟ, ಸುಖಕ್ಕೆ ಇರುತ್ತಾನೆ ಅಂತ ನಾನೇ ಅವನಿಗೆ 50 ಸಾವಿರ ರೂ. ಕೊಟ್ಟೆ. ಹಣ ಕೊಟ್ಟ ಮರುದಿನ ಚುನಾವಣೆಯಲ್ಲಿ ಬೆಂಬಲ ಕೊಡುತ್ತೇನೆ ಎಂದ್ದಿದ್ದ. ವಿಧಾನಸಭೆಯ ಚುನಾವಣೆಯಲ್ಲಿ ನಿನಗೆ ಬೆಂಬಲ ನೀಡುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಬೇರೆಯವರಿಗೆ ಬೆಂಬಲ ನೀಡುತ್ತೇನೆ ಎಂದಿದ್ದ. ಪಕ್ಷಕ್ಕೆ ದ್ರೋಹ ಮಾಡಬಾರದು, ಆಮೇಲೆ ನೋಡೋಣ ನಡಿ ಎಂದಿದ್ದೆ. ಆತನಿಗೆ ಯಾರೋ ಪಕ್ಕದಲ್ಲಿ ಹೇಳಿ ಕೊಡುತ್ತಿದ್ದಾರೆ ಎಂದರು.

ಶಿವಲಿಂಗೇಗೌಡ ಸ್ಪಷ್ಟನೆ

ಇವನು (ವಾಸು) ಮೂರು ದಿವಸ ಬಂದು ನಮ್ಮ ತೋಟದಲ್ಲಿ ಕೂತ. ರಾಮಚಂದ್ರು ಇವರೆಲ್ಲಾ ಹೇಳಿದರು ಇವನಿಗೆ ಉಪಾಧ್ಯಕ್ಷ ತಪ್ಪಿದೆ, ಏನೋ ಸ್ವಲ್ಪ ಕಷ್ಟದಲ್ಲಿ ಇದ್ದಾನೆ ಸಹಾಯ ಮಾಡಿ ಅಂದರು. ನಾನು ಮೂರು ದಿವಸ ಗಮನಕ್ಕೆ ಹಾಕಿಕೊಂಡಿರಲಿಲ್ಲ. ಆಮೇಲೆ‌ ಕರೆದು ಕಷ್ಟ, ಸುಖ ಇರುತ್ತೇವೆ ಅಂತ ಹೇಳಿ ತಗಳಪ್ಪಾ, ಎಲ್ಲಾ ಹೇಳ್ತಾ ಇದ್ದಾರೆ ಅಂತ ಹೇಳಿ ನಾನೇ ಅವನಿಗೆ 50 ಸಾವಿರ ದುಡ್ಡು ಕೊಟ್ಟೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಷ್ಟದಲ್ಲಿರುವೆ ಅಂತ ಅವಲತ್ತುಕೊಂಡು ಅವನು ನಮ್ಮ ತೋಟದಲ್ಲಿ 3 ದಿನ ಕೂತಿದ್ದಕ್ಕೆ ಹಣ ನೀಡಿದೆ: ಕೆ ಎಮ್ ಶಿವಲಿಂಗೇಗೌಡ, ಶಾಸಕ

ದುಡ್ಡು ಕೊಟ್ಟ ಮಾರನೇ ದಿನ ಬೆಳಿಗ್ಗೆ ಬಂದು ಅಣ್ಣಾ ಎಂಎಲ್‌ಎಗೆ ನಿನಗೆ ಹಾಕುತ್ತೇವೆ, ಎಂಪಿಗೆ ಬೇರೆಯವರಿಗೆ ಹಾಕುತ್ತೇವೆ ಅಂದ. ನಾನು ಹೇಳಿದೆ ಹಂಗೆಲ್ಲ ಪಾರ್ಟಿಗೆ ದ್ರೋಹ ಮಾಡಬಾರದು ಕಣಯ್ಯ. ಒಂದು ಪಾರ್ಟಿ ಅಂದ ಮೇಲೆ ಒಂದೆ ಕಡೆ ಇರಬೇಕು ಅಂತ. ಈಗ ಯಾಕೆ ಮೊದಲು ಎಂಎಲ್‌ಎ ಮುಗ್ಸಣ ನಡಿ ಆಮೇಲೆ ಇವೆಲ್ಲಾ ನೋಡೋಣ ನಡಿ ಅಂತ ಹೇಳ್ದೆ. ಹೇಳಿ ಆದ್ಮೇಲೆ ಅವರ ಮನೆಗೆ ಕರ್ಕಂಡು ಹೋಗಿ ಊಟನು ಹಾಕ್ದಾ, ಚೆನ್ನಾಗೇ ಇದ್ದ. ಈಗ್ಲೂ ಏನು ಆಗಿಲ್ಲ. ಚೆನ್ನಾಗಿದ್ದಾನೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ