ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜೊತೆ ತಾಯಿಯೂ ಪಾಸ್; ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 09, 2024 | 4:07 PM

ಇಂದು ಎಸ್​ಎಸ್​ಎಲ್​ಸಿ ಫಲಿತಾಂಶ ಬಂದಿದ್ದು, ಪ್ರತಿವರ್ಷದಂತೆ ಈ ವರ್ಷವೂ ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಇತ್ತ ಯಾದಗಿರಿ ಕೊನೆಯ ಸ್ಥಾನ ಹೊಂದಿದೆ. ಹಾಸನ ಜಿಲ್ಲೆಯ ಸಕಲೇಶಪುರ (Sakleshpur) ತಾಲ್ಲೂಕಿನ ಚಿನ್ನಳ್ಳಿ ಗ್ರಾಮದಲ್ಲಿ ಅಪರೂಪದ ಫಲಿತಾಂಶವೊಂದು ಬಂದಿದೆ. ಹೌದು, ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜೊತೆ ತಾಯಿಯೂ ಪಾಸ್ ಆದ ಅಚ್ಚರಿ ಘಟನೆ ನಡೆದಿದೆ.

ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜೊತೆ ತಾಯಿಯೂ ಪಾಸ್; ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ
ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜೊತೆ ತಾಯಿಯೂ ಪಾಸ್
Follow us on

ಹಾಸನ, ಮೇ.09: ಇಂದು ಎಸ್‌ಎಸ್‌ಎಲ್ ಪರೀಕ್ಷೆ ಫಲಿತಾಂಶ(SSLC Result) ಪ್ರಕಟವಾಗಿದ್ದು, ಹಾಸನ ಜಿಲ್ಲೆಯ ಸಕಲೇಶಪುರ (Sakleshpur) ತಾಲ್ಲೂಕಿನ ಚಿನ್ನಳ್ಳಿ ಗ್ರಾಮದಲ್ಲಿ ಅಪರೂಪದ ಫಲಿತಾಂಶವೊಂದು ಬಂದಿದೆ. ಹೌದು, ಎಸ್‌ಎಸ್‌‌ಎಲ್‌ಸಿ ಪರೀಕ್ಷೆಯಲ್ಲಿ ಮಗನ ಜೊತೆ ತಾಯಿಯೂ ಪಾಸ್ ಆದ ಅಚ್ಚರಿ ಘಟನೆ ನಡೆದಿದೆ. ಎರಡನೇ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ 38 ವರ್ಷದ ಜ್ಯೋತಿ.ಪಿ.ಆರ್.  ಸಕಲೇಶಪುರ ತಾಲ್ಲೂಕಿನ, ಬಾಳ್ಳುಪೇಟೆಯ ಸಿದ್ದಣ್ಯಯ್ಯ ಹೈಸ್ಕೂಲ್‌ನಲ್ಲಿ ಮಗನಾದ ನಿತಿನ್.ಸಿ.ಬಿ. ಜೊತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು.

ಮಗನ ಜೊತೆ ತಾಯಿಯೂ ಪಾಸ್; ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ

ಇನ್ನು ಜ್ಯೋತಿ.ಪಿ.ಆರ್ ಪತಿ ಭುವನೇಶ್ ಚಿನ್ನಳ್ಳಿ ಗ್ರಾಮದಲ್ಲಿ ಬೇಕರಿ ಇಟ್ಟುಕೊಂಡಿದ್ದಾರೆ. ಮಗನಾದ ನಿತಿನ್.ಸಿ.ಬಿ ಅನ್ನು ಬಾಳ್ಳುಪೇಟೆಯಲ್ಲಿರುವ ವಿವೇಕ ಕಾನ್ವೆಂಟ್‌ನಲ್ಲಿ ಓದುತ್ತಿದ್ದ. ಇಂದು ಫಲಿತಾಂಶ ಪ್ರಕಟವಾಗಿದ್ದು 250 ಅಂಕ ಪಡೆದು ಜ್ಯೋತಿ.ಪಿ.ಆರ್ ತೇರ್ಗಡೆ ಆದರೆ, ಇತ್ತ ಪುತ್ರ ನಿತಿನ್.ಸಿ.ಬಿ  582 ಅಂಕ ಪಡೆದಿದ್ದಾನೆ. ಮಗನ ಜೊತೆ ತಾಯಿಯೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಇದನ್ನೂ ಓದಿ:SSLC ಫಲಿತಾಂಶದಲ್ಲಿ ಪ್ರದೀಪ್ ಈಶ್ವರ್ ದತ್ತು ಪಡೆದ ವಿದ್ಯಾರ್ಥಿಗಳ ಮೇಲುಗೈ; ಸನ್ಮಾನ ಮಾಡಿ ಶುಭ ಹಾರೈಕೆ

SSLC ಪರೀಕ್ಷೆ ಫಲಿತಾಂಶದಲ್ಲಿ ಮತ್ತೆ ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ

ಯಾದಗಿರಿ: SSLC ಪರೀಕ್ಷಾ ಫಲಿತಾಂಶದಲ್ಲಿ ಮತ್ತೆ ಯಾದಗಿರಿ ಜಿಲ್ಲೆಗೆ ಕೊನೆ ಸ್ಥಾನ ಬಂದಿದ್ದು, ಈ ಮೂಲಕ ಸತತ 5 ವರ್ಷಗಳಿಂದ ಕೊನೆಯ ಸ್ಥಾನ ಪಡೆದಂತಾಗಿದೆ. ಹಿಂದುಳಿದ ಹಣೆಪಟ್ಟಿವುಳ್ಳ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದ್ದು, SSLC ಫಲಿತಾಂಶ ಸುಧಾರಣೆ ಮಾಡುವಲ್ಲಿ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಆದ್ದರಿಂದ ಯಾದಗಿರಿ ಜಿಲ್ಲೆಯಲ್ಲಿ 100ಕ್ಕೆ 50.59% ವಿದ್ಯಾರ್ಥಿಗಳು ಮಾತ್ರ ಪಾಸ್ ಆಗುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Thu, 9 May 24