ಕೊರೊನಾ ಇನ್ನೂ 2-3 ವರ್ಷ ಹೊಸ ರೂಪ ತಾಳಲಿದೆ, ಅಫ್ಘಾನಿಸ್ತಾನದಿಂದ ಜಗತ್ತಿಗೇ ಭಯ: ಕೋಡಿಮಠ ಸ್ವಾಮೀಜಿ ಭವಿಷ್ಯ

| Updated By: guruganesh bhat

Updated on: Sep 09, 2021 | 3:30 PM

ಒಂದೂವರೆ ವರ್ಷದ ಹಿಂದೆ ದೇಶವೊಂದು ಭೂಪಟದಿಂದ ಕಾಣೆಯಾಗುವ ಭವಿಷ್ಯ ಹೇಳಿದ್ದೆ. ಈಗ ಅಫ್ಘಾನಿಸ್ತಾನ ಅಳಿಸಿ ಹೋಯಿತು ಎಂದು ಅವರು ನೆನಪಿಸಿಕೊಂಡರು.

ಕೊರೊನಾ ಇನ್ನೂ 2-3 ವರ್ಷ ಹೊಸ ರೂಪ ತಾಳಲಿದೆ, ಅಫ್ಘಾನಿಸ್ತಾನದಿಂದ ಜಗತ್ತಿಗೇ ಭಯ: ಕೋಡಿಮಠ ಸ್ವಾಮೀಜಿ ಭವಿಷ್ಯ
ಕೋಡಿಹಳ್ಳಿ ಸ್ವಾಮೀಜಿ
Follow us on

ಹಾಸನ: ‘ದೇಶದಲ್ಲಿ ಇನ್ನೂ ಮಳೆಯಾಗಲಿದೆ, ಆಪತ್ತು ಕಾಡಲಿದೆ. ಭೂಮಿ ನಡುಗಲಿದೆ, ರಾಜ ಭಯ ಎಲ್ಲವೂ ಇದೆ. ಕಾರ್ತಿಕ ಮಾಸದವರೆಗೂ ಇದೇ ವಿಪತ್ತು ಇರಲಿದೆ’ ಎಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಸ್ಚರ್ಣಗೌರಿ ಪೂಜೆಯಲ್ಲಿ ಪಾಲ್ಗೊಂಡ ಕೋಡಿಮಠದ ಶ್ರೀ ಭವಿಷ್ಯ ನುಡಿದಿದ್ದಾರೆ. ಒಂದೂವರೆ ವರ್ಷದ ಹಿಂದೆ ದೇಶವೊಂದು ಭೂಪಟದಿಂದ ಕಾಣೆಯಾಗುವ ಭವಿಷ್ಯ ಹೇಳಿದ್ದೆ. ಈಗ ಅಫ್ಘಾನಿಸ್ತಾನ ಅಳಿಸಿ ಹೋಯಿತು ಎಂದು ನೆನಪಿಸಿಕೊಂಡ ಅವರು, ಆ ಭಯ ಜಗತ್ತಿನಾದ್ಯಂತ ಇದೆ, ಇನ್ನೂ ಹೆಚ್ಚಲಿದೆ. ಅಫ್ಘಾನಿಸ್ತಾನದಿಂದ ಇಡೀ ಜಗತ್ತಿಗೆ ಭಯ ಇದೆ ಎಂದು ಅವರು ಎಚ್ಚರಿಕೆ ನೀಡಿದರು.

ಕೊರೊನಾ ಇನ್ನೂ 2-3 ವರ್ಷ ಹೊಸ ರೂಪ ತಾಳಲಿದೆ. ಆತ್ಮಗಳು ಭಂಗವಾಗಿ ಕಾಡುತ್ತವೆ. ಮುಂದಿನ ದಿನಗಳಲ್ಲಿ ಗಾಳಿಯಾಗಿ ಬೀಸಿ ಸಾವು ಹೆಚ್ಚಲಿದೆ. ನಿಧಾನವಾದರೂ ಈ ಅಲೆ ಇನ್ನೂ 2-3 ವರ್ಷ ಇರಲಿದೆ. ಸರ್ಕಾರಕ್ಕೆ‌ ತೊಂದರೆ ಆಗಲ್ಲ, ಸರ್ಕಾರ ಸುಭದ್ರವಾಗಿರಲಿದೆ. ರಾಜ್ಯ ರಾಜಕೀಯದ ಹಿಂದೆ ಸೂತ್ರದಾರಿ ಇದ್ದಾರೆ. ಹೀಗಾಗಿ ಸರ್ಕಾರ ಸುಭದ್ರವಾಗಿರಲಿದೆ ಎಂದು ಸಹ ಅವರು ಇದೇ ಸಂದರ್ಭದಲ್ಲಿ ಭವಿಷ್ಯ ಹೇಳಿದ್ದಾರೆ.


ಇದನ್ನೂ ಓದಿ: 

ಬಿಬಿಎಂಪಿ ಕಚೇರಿಯಲ್ಲಿ ಗಣೇಶ ಮೂರ್ತಿ ಸ್ಥಾಪನೆ, ಪಟಾಕಿ ಹೊಡೆದು ಪ್ರತಿಭಟನೆ; ಸಂಜೆಯೊಳಗೆ ಅಂತಿಮ ತೀರ್ಮಾನ ಎಂದ ಸಿಎಂ 

ಕೊರೊನಾ ಇನ್ನೂ ಹೆಚ್ಚಾಗಲಿದೆ: ಕೋಲಾರದಲ್ಲಿ ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ ಡಾ. ಶಿವಾನಂದ ಶಿವಯೋಗಿ
(Kodimutt Swamiji Predicts on Covid 19 will continue and Afghanistan Crisis)