ಬಿಬಿಎಂಪಿ ಕಚೇರಿಯಲ್ಲಿ ಗಣೇಶ ಮೂರ್ತಿ ಸ್ಥಾಪನೆ, ಪಟಾಕಿ ಹೊಡೆದು ಪ್ರತಿಭಟನೆ; ಸಂಜೆಯೊಳಗೆ ಅಂತಿಮ ತೀರ್ಮಾನ ಎಂದ ಸಿಎಂ

Ganesh Chaturthi 2021: ಬೆಂಗಳೂರಿನ 12 ಕಡೆಗಳಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ನೀಡಲಾಗಿದೆ

ಬಿಬಿಎಂಪಿ ಕಚೇರಿಯಲ್ಲಿ ಗಣೇಶ ಮೂರ್ತಿ ಸ್ಥಾಪನೆ, ಪಟಾಕಿ ಹೊಡೆದು ಪ್ರತಿಭಟನೆ; ಸಂಜೆಯೊಳಗೆ ಅಂತಿಮ ತೀರ್ಮಾನ ಎಂದ ಸಿಎಂ
ಗಣೇಶ ವಿಸರ್ಜನೆ ಮಾಡಲು ಸಿದ್ಧಪಡಿಸಿದ ವ್ಯವಸ್ಥೆಗಳನ್ನು ಪರಿಶೀಲಿಸಿದ ಸಚಿವ ಆರ್ ಅಶೋಕ್

ಬೆಂಗಳೂರು: ಬಿಬಿಎಂಪಿ ಮುಖ್ಯ ಕಚೇರಿಗೆ 5 ಅಡಿಗಿಂತ ದೊಡ್ಡದಾದ ಗಣೇಶ ಮೂರ್ತಿಗಳನ್ನು ತಂದ ಗಣೇಶ ಮೂರ್ತಿ ತಯಾರಕರು ಕಚೇರಿಯಲ್ಲಿಯೇ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಿಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಬಿಬಿಎಂಪಿ ಕಮಿಷನರ್ ಸ್ಥಳಕ್ಕೆ ಆಗಮಿಸಿ ಮಾರ್ಗಸೂಚಿಗಳನ್ನು ಹಿಂಪಡೆಯಬೇಕು. ಇಲ್ಲದೇ‌ ಹೋದರೆ ಮುಖ್ಯ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಗಣೇಶೋತ್ಸವ ಸಮಿತಿಗಳು ಒಟ್ಟಾಗಿ ಪ್ರತಿಭಟನೆ ನಡೆಸಿವೆ. ಜತೆಗೆ ಬಿಬಿಎಂಪಿ ರೂಪಿಸಿದ ನಿಯಮಗಳನ್ನು ಧಿಕ್ಕರಿಸುವುದಾಗಿ ಘೋಷಿಸಿವೆ. ಸರ್ಕಾರದ ಗೈಡ್‌ಲೈನ್ಸ್‌ ವಿರೋಧಿಸಿ ಗಣೇಶೋತ್ಸವ ಸಮೀತಿಗಳು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಪಟಾಕಿ ಹೊಡೆದು ಪ್ರತಿಭಟನೆ ನಡೆಸಿದವು. 10- 15 ಅಡಿ ಗಣೇಶ ಮೂರ್ತಿಗಳನ್ನು ಸಹ ಬಿಬಿಎಂಪಿ ಕಚೇರಿ ಬಳಿ ತಂದು ಈಗಾಗಲೇ ರೂಪಿಸಿರುವ ನಿಯಮಗಳನ್ನು ಹಿಂಪಡೆಯಲು ಒತ್ತಾಯಿಸಲಾಗಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬೆನ್ನಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿಯಮ ಸಡಿಲಿಕೆ ವಿಚಾರವಾಗಿ ಸಂಜೆಯೊಳಗೆ ನಿರ್ಧಾರ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಸಚಿವರು ಹಾಗೂ ಬಿಬಿಎಂಪಿ ಕಮೀಷನರ್, ಪೊಲೀಸ್ ಆಯುಕ್ತ ಜತೆ ಚರ್ಚಿಸುತ್ತೇನೆ. ಕೆಲವು ಜಿಲ್ಲೆಗಳಿಂದಲೂ ಗಣೇಶೋತ್ಸವ ಕುರಿತು ವಿವಿಧ ಬೇಡಿಕೆ ಬರುತ್ತದೆ. ಈಕುರಿತು ಸಂಜೆಯ ಒಳಗೆ ಒಂದು ನಿರ್ಧಾರಕ್ಕೆ ಬರುತ್ತೇವೆ ಎಂದು ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಣೆ ವಿಚಾರವಾಗಿ ಗಣೇಶ ವಿಸರ್ಜನೆಗೆ ಯಡಿಯೂರು ಕೆರೆಯಲ್ಲಿ ಮಾಡಲಾದ ವ್ಯವಸ್ಥೆಗಳನ್ನು ಬಿಬಿಎಂಪಿ ಅಧಿಕಾರಿಗಳೊಂದಿಗೆ ಕಂದಾಯ ಸಚಿವ ಆರ್. ಅಶೋಕ್ ಪರಿಶೀಲನೆ ನಡೆಸಿದರು. ಬೆಂಗಳೂರಿನ 12 ಕಡೆಗಳಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ನೀಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ನಾವು ಯಾವ ನಿಯಮವನ್ನೂ ಪಾಲನೆ ಮಾಡುವುದಿಲ್ಲ. ಬಿಬಿಎಂಪಿ ಯಾರೂ ಒಪ್ಪಿಕೊಳ್ಳದಂತಹ ಮಾರ್ಗಸೂಚಿ ಹೊರಡಿಸಿದೆ. ಯಾವುದಕ್ಕೂ ಇಲ್ಲದ‌ ನಿಯಮ ಗಣೇಶನಿಗೆ ಯಾಕೆ? ರಾಜಕೀಯ ಸಭೆ ಮಾಡಬಹುದಾದಲ್ಲಿ ಗಣೇಶೋತ್ಸವ ಏಕೆ ಮಾಡಬಾರದು? ಧಾರ್ಮಿಕ ವಿಚಾರಗಳಿಗೆ ಯಾಕೆ ತಲೆ ಹಾಕುತ್ತೀರ? ಎಂದು ಗಣೇಶ್ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.
ಸರ್ಕಾರ ನಿಯಮವನ್ನು ವಾಪಾಸ್ ಪಡೆಯಬೇಕು. ಒಂದು ವೇಳೆ ವಾಪಾಸ್ ಪಡೆಯದಿದ್ದರೆ ನಾವು ಸರ್ಕಾರ ನಿಯಮಗಳನ್ನು ಧಿಕ್ಕರಿಸಿ ಗಣಪತಿ ಆಚರಣೆ ಮಾಡುತ್ತೇವೆ. ಮೈಕ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅದೇಶ ಪಾಲನೆ‌ ಮಾಡುತ್ತಿಲ್ಲ. ಅದರೆ ಗಣೇಶ ಉತ್ಸವದಲ್ಲಿ ಮೈಕ್ ಹಾಕಬೇಡಿ ಎಂದು ನಿಯಮ ರೂಪಿಸಿದ್ದಾರೆ ಎಂದು ಅವರು ಸುದ್ದಿಗಾರರ ಬಳಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: 

ತಿಲಕರಿಂದ ಸ್ಫೂರ್ತಿಗೊಂಡು ಉತ್ತರ ಕರ್ನಾಟಕದಲ್ಲೇ ಮೊದಲು ಶುರುವಾಯ್ತು ಸಾರ್ವಜನಿಕ ಗಣೇಶೋತ್ಸವ

ಗಣೇಶನ ಹೆಸರು ನಿಮ್ಮದಾಗಿದ್ದರೆ ವಂಡರ್​ಲಾ ಅಮ್ಯೂಸ್​​ಮೆಂಟ್​ ಪಾರ್ಕ್​ಗೆ ಉಚಿತ ಪ್ರವೇಶ ಪಡೆಯಬಹುದು

(Ganesh Chaturthi 2021 in Bengaluru Ganesh idol makers protest inside BBMP office CM Bommai said will decide final rules by evening)

Click on your DTH Provider to Add TV9 Kannada