ಸಚಿವ ಅಶ್ವಥ್ ನಾರಾಯಣ ಅತ್ಯಂತ ಭ್ರಷ್ಟ ಸಚಿವ ಎಂದ ಶಾಸಕ ಹೆಚ್​​ಡಿ ರೇವಣ್ಣ

| Updated By: ವಿವೇಕ ಬಿರಾದಾರ

Updated on: Jul 27, 2022 | 3:47 PM

ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರು ಅತ್ಯಂತ ಭ್ರಷ್ಟ ಸಚಿವರಾಗಿದ್ದು, ಶಾಲಾ ಕಟ್ಟಡ ಕಟ್ಟೋದರಲ್ಲೂ ಹಣ ಹೊಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಹಾಸನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಅಶ್ವಥ್ ನಾರಾಯಣ ಅತ್ಯಂತ ಭ್ರಷ್ಟ ಸಚಿವ ಎಂದ ಶಾಸಕ ಹೆಚ್​​ಡಿ ರೇವಣ್ಣ
ಹೆಚ್ ಡಿ ರೇವಣ್ಣ
Follow us on

ಹಾಸನ: ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ (Ashwath Narayan) ಅವರು ಅತ್ಯಂತ ಭ್ರಷ್ಟ ಸಚಿವರಾಗಿದ್ದು, ಶಾಲಾ ಕಟ್ಟಡ ಕಟ್ಟೋದರಲ್ಲೂ ಹಣ ಹೊಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಅವರು ಹಾಸನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾನಾ ಮರ್ಯಾದೆ ಇದ್ದರೆ ಇವರ ವಿರುದ್ದ ಕ್ರಮ ಕೈಗೊಳ್ಳಲಿ ಎಂದು ಅವರು ಹರಿಹಾಯ್ದಿದ್ದಾರೆ.

ಶಾಲಾ ಕಟ್ಟಡ ಕಟ್ಟಲು ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಹಾಗಿದ್ದರೆ ಡಬ್ಲ್ಯೂಡಿ ಇಲಾಕೆ ಯಾಕೆ ಬಾಗಿಲು ಮುಚ್ಚಿ. ವಸತಿ ನಿಲಯ, ಶಾಲೆಯ ಕಟ್ಟಡ ಕಟ್ಟಲು ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕಮಿಷನ್ ಆಸೆಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದರು.

ಇದನ್ನ ಯಾರಾದರು ಸರ್ಕಾರ ಅಂತಾರೇನ್ರಿ ? ಮಾನಾ ಮರ್ಯಾದೆ ಇದ್ದರೆ ಆ ಮಂತ್ರಿಯನ್ನು ವಜಾ ಮಾಡಿ. ಈ ಶಾಲಾ ಮಕ್ಕಳ ಹಣದಲ್ಲೂ ದುಡ್ಡು ಹೊಡೆಯಬೇಕೇನು? ಹಾಸನ ಜಿಲ್ಲೆಯಲ್ಲಿ ಹಾಸ್ಟೆಲ್ ಇಲ್ಲದೆ ಐದು ಸಾವಿರ ಮಕ್ಕಳು ಪರದಾಡುತ್ತಿದ್ದಾರೆ. ಯಾವ ಮುಖ ಇಟ್ಟುಕೊಂಡು ಮತ ಕೆಳುತ್ತೀರಾ ನಾಚಿಕೆ ಆಗೋದಿಲ್ಲವಾ ? ಎಂದು ಅಸಮಾಧಾನ ಹೊರಹಾಕಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ವ್ಯಾಪಾರ ಮಾಡೋ ಮಂತ್ರಿ ಇಟ್ಟುಕೊಂಡಿದ್ದೀರಾ ? ಮುಖ್ಯಮಂತ್ರಿಗಳೇ ಶಿಕ್ಷಣ ಸಚಿವರು ಲೂಟಿ ಹೊಡೆಯುತ್ತಿದ್ದಾರೆ ಅದರ ಬಗ್ಗೆಯೂ ಗಮನ ಹರಿಸಲಿ ಎಂದು ಹೇಳಿದ್ದಾರೆ.

Published On - 3:44 pm, Wed, 27 July 22