ಜೆಡಿಎಸ್​​ ವಾಟ್ಸಾಪ್ ಗ್ರೂಪ್​ಗಳಿಂದ ಶಾಸಕ ಶಿವಲಿಂಗೇಗೌಡ ಎಕ್ಸಿಟ್: ಪತನವಾಯ್ತಾ ಜೆಡಿಎಸ್​​ ಪಕ್ಷದ ಮತ್ತೊಂದು ವಿಕೆಟ್..?

| Updated By: ಗಂಗಾಧರ​ ಬ. ಸಾಬೋಜಿ

Updated on: Jun 27, 2022 | 10:28 AM

ಶಿವಲಿಂಗೇಗೌಡ ವಿರುದ್ಧ ಬಹಿರಂಗ ಸಭೆಯಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ್ದರು. ಹಾಗಾಗಿ ಕಳೆದ ಕೆಲ ದಿನಗಳಿಂದ ಜೆಡಿಎಸ್ ನಾಯಕರ ಜೊತೆ ಶಿವಲಿಂಗೇಗೌಡ ಅಂತರ ಕಾಯ್ದುಕೊಂಡಿದ್ದರು.

ಜೆಡಿಎಸ್​​ ವಾಟ್ಸಾಪ್ ಗ್ರೂಪ್​ಗಳಿಂದ ಶಾಸಕ ಶಿವಲಿಂಗೇಗೌಡ ಎಕ್ಸಿಟ್: ಪತನವಾಯ್ತಾ ಜೆಡಿಎಸ್​​ ಪಕ್ಷದ ಮತ್ತೊಂದು ವಿಕೆಟ್..?
ಶಾಸಕ ಶಿವಲಿಂಗೇಗೌಡ
Follow us on

ಹಾಸನ: ಜೆಡಿಎಸ್ ಪ್ರಮುಖ ವಾಟ್ಸಾಪ್ ಗ್ರೂಪ್ (WhatsApp Group) ​ಗಳಿಂದ ಶಾಸಕ ಶಿವಲಿಂಗೇಗೌಡ ಎಕ್ಸಿಟ್ ಆಗಿದ್ದು, ಜೆಡಿಎಸ್​ನಿಂದ ಮತ್ತೊಂದು ವಿಕೆಟ್ ಪತನವಾಯ್ತಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ನಿನ್ನೆ ಸಂಜೆಯಿಂದ ಪಕ್ಷದ 2023ಕ್ಕೆ ಜನತಾ ಸರ್ಕಾರ, ಕನ್ನಡ ನಾಡಿನ ಜೆಡಿಎಸ್ ಪಡೆ, ವಿಜಯಪುರ ಜೆಡಿಎಸ್, ದಂಪತಿಗಳು ಎನ್ನುವ ಗ್ರೂಪ್​ಗಳಿಂದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೊರಬಂದಿದ್ದಾರೆ. ಜೆಡಿಎಸ್​ನ ಪ್ರಮುಖ ನಾಯಕರು, ಕೆಲ ಶಾಸಕರು, ಶಾಸಕರ ಆಪ್ತ ಕಾರ್ಯದರ್ಶಿಗಳಿರೋ ಗ್ರೂಪ್​ಗಳಾಗಿವೆ. ಶಿವಲಿಂಗೇಗೌಡ ವಿರುದ್ಧ ಬಹಿರಂಗ ಸಭೆಯಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ಹೊರ ಹಾಕಿದ್ದರು. ಹಾಗಾಗಿ ಕಳೆದ ಕೆಲ ದಿನಗಳಿಂದ ಜೆಡಿಎಸ್ ನಾಯಕರ ಜೊತೆ ಶಿವಲಿಂಗೇಗೌಡ ಅಂತರ ಕಾಯ್ದುಕೊಂಡಿದ್ದರು. ಇದಾದ ಬಳಿಕ ಜೆಡಿಎಸ್​ನ ಎಲ್ಲಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಇದೀಗ ತಾವಿದ್ದ ವಾಟ್ಸಾಪ್ ಗ್ರೂಪ್​ಗಳಿಂದಲೂ ಎಕ್ಸಿಟ್ ಆಗಿದ್ದು, ಶಾಸಕರ ನಡೆ ಕುತೂಹಲ ಮೂಡಿಸಿದೆ.

ಕಾಂಗ್ರೆಸ್​ಗೆ ಸೇರುತ್ತೇನೆ- ಶ್ರೀನಾಥ್:
ಕಳೆದ ಕೆಲ ದಿನಗಳ ಹಿಂದೆ ಜೆ.ಡಿ.ಎಸ್​ಗೆ ರಾಜೀನಾಮೆ ನೀಡಿದ್ದ ಮಾಜಿ ಎಂಎಲ್​ಸಿ ಹೆಚ್.ಆರ್ ಶ್ರೀನಾಥ್​, ನಾನು ಜುಲೈ ಮೂರರಂದು ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ ಎಂದು ಜಿಲ್ಲೆಯ ಗಂಗಾವತಿಯಲ್ಲಿ ಹೇಳಿಕೆ ನೀಡಿದ್ದಾರೆ. ನಾನು ಕೂಡಾ ಗಂಗಾವತಿ ವಿಧಾನಸಭಾ ಕ್ಷೇತ್ರದ ಮುಂಬರೋ ಚುನಾಚಣೆಗೆ ನಾನು ಆಕಾಂಕ್ಷಿ. ಕಾಂಗ್ರೆಸ್ ಸೇರೋ ವಿಚಾರವಾಗಿ ಇದುವರೆಗೂ ನಾನು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಜೊತೆ ಮಾತನಾಡಿಲ್ಲ. ನಮ್ಮ ಹಿರಿಯರು ಇಬ್ಬರನ್ನು ಸರಿ ಮಾಡುತ್ತಾರೆ. ಕಳೆದ ಬಾರಿ ಚುನಾವಣೆಯಲ್ಲಿ ಅನ್ಸಾರಿ ವಿರುದ್ದ ಬಂಡಾಯವೆದ್ದು ಶ್ರೀನಾಥ್ ಕಾಂಗ್ರೆಸ್​ನಿಂದ ಜೆಡಿಎಸ್ ಸೇರಿದ್ದರು. ಇದೀಗ ಮತ್ತೆ ಕೈ ಪಾಳಯಕ್ಕೆ ಶ್ರೀನಾಥ್ ಸೇರಲಿದ್ದಾರೆ. ಆದರು ಗಂಗಾವತಿ ಮಾಜಿ ಶಾಸಕ‌ ಇಕ್ಬಾಲ್ ಅನ್ಸಾರಿ, ಶ್ರೀನಾಥ್ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ನಾನು ಕೂಡಾ ಟಿಕೆಟ್ ಆಕಾಂಕ್ಷಿ ಎಂದು ಶ್ರೀನಾಥ್ ಬಹಿರಂಗವಾಗಿ ಹೇಳಿದ್ದಾರೆ. ಮುಸಲ್ಮಾನರಿಗೆ ಟಿಕೆಟ್ ಕೊಡಬಾರದು ಅಂತೇನಿಲ್ಲ. ಕೆಲವು ಸಲ ವ್ಯಕ್ತಿ ಮೇಲೆ ಚುನಾವಣೆ ಎಂದು ಶ್ರೀನಾಥ್ ಹೇಳಿದರು.

ಇದನ್ನೂ ಓದಿ: Coronavirus: ಭಾರತದಲ್ಲಿ ಕೊರೊನಾ ಸೋಂಕು ಏರಿಕೆ; 17073 ಮಂದಿಗೆ ಹೊಸದಾಗಿ ಸೋಂಕು, ಒಂದೇ ದಿನದಲ್ಲಿ ಶೇ 45ರಷ್ಟು ಹೆಚ್ಚಳ

Published On - 10:21 am, Mon, 27 June 22